ಬಳ್ಳಾರಿ: ಖಾಸಗಿ ಬ್ಯಾಂಕಿನ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಬ್ಯಾಂಕಿನ ಲೀಗಲ್ ಅಡ್ವೈಸರ್ ಒಬ್ಬರು ಸೆಲ್ಫಿ ವಿಡಿಯೋ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಹೊಸಪೇಟೆ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಲೀಗಲ್ ಅಡ್ವೈಸರ್ ಆಗಿದ್ದ ಮಹೇಶ್ ಸಾವನ್ನಪ್ಪಿರೋ ದುರ್ದೈವಿ.
ಕಳೆದ ಕೆಲ ವರ್ಷಗಳಿಂದ ಹೊಸಪೇಟೆ ಬ್ರಾಂಚ್ ನಲ್ಲಿ ಕೆಲಸ ಮಾಡುತಿದ್ದ ಮಹೇಶ್ ಅವರಿಗೆ ಬ್ಯಾಂಕ್ ನ ಮೇಲಾಧಿಕಾರಿಗಳು ಗ್ರಾಹಕರ ದಾಖಲೆಗಳು ಸೂಕ್ತವಾಗಿಲ್ಲದೇ ಇದ್ದರೂ ಲೀಗಲ್ ಸಲಹೆಯನ್ನು ಪರವಾಗಿ ನೀಡುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟ ಲೀಗಲ್ ಅಡ್ವೈಜರ್ ಸಂತೋಷ್ ಬ್ಯಾಂಕ್ ನ ಆವರಣದಲ್ಲಿ ಸೆಲ್ಫಿ ವೀಡಿಯೋ ಮಾಡುತ್ತಲೇ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಡಿ ಕೆ ಶಿವಕುಮಾರ್ ಅವರಿಗೆ ಕೋವಿಡ್-19 ಸೋಂಕು ದೃಢ: ಖಾಸಗಿ ಆಸ್ಪತ್ರೆಗೆ ದಾಖಲು
ಮಹೇಶ್ ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸಾವಿಗೆ ಬ್ಯಾಂಕ್ ಸಿಬ್ಬಂದಿ ಕಾರಣವೆಂದು ಕುಟುಂಬದ ಸದಸ್ಯರ ಜೊತೆಗೆ ವಕೀಲರು ಕೂಡ ಆರೋಪಿಸಿದ್ದಾರೆ. ಘಟನೆ ಸಿಬ್ಬಂದಿ ಕಿರುಕುಳ ಕಾರಣವಾ ಅಥವಾ ಇನ್ನೂ ಬೇರೆ ಏನಾದರೂ ಇದೆಯೇ ಅನ್ನೋ ಬಗ್ಗೆ ತನಿಖೆ ಮಾಡಬೇಕಿದೆ. ಇ ಬಗ್ಗೆ ಹೊಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.