Advertisement

ತ್ಯಾಜ್ಯ ಎಸೆಯುವವರ ವಿರುದ್ಧ ಕಾನೂನು ಕ್ರಮ

12:30 AM Jun 29, 2019 | mahesh |

ಉಪ್ಪಿನಂಗಡಿ: ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ದಿನೇ ದಿನೇ ಏರಿಕೆಯಾಗುತ್ತಿದೆ. ಅದರ ವಿಲೇಗೆ ಪಂಚಾಯತ್‌ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಆದರೆ ಬಹಳಷ್ಟು ಮನೆಯವರು ರಸ್ತೆ ಬದಿಯಲ್ಲಿ, ನದಿ ಬದಿಗೆ ಹೀಗೆ ಎಲ್ಲೆಡೆ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಸಾರ್ವಜನಿಕರ ಸಹಕಾರದ ಕೊರತೆಯಿಂದ ಸಮಸ್ಯೆ ತಲೆದೋರಿದೆ. ಇದನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಅನಿವಾರ್ಯವಾಗಿದೆ. ಈ ನಿಟ್ಟನಲ್ಲಿ ಬೈಲದಲ್ಲಿ ಅಡಕವಾಗಿರುವಂತೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯವನ್ನು ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.

Advertisement

ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್‌ ಅಧ್ಯಕ್ಷತೆಯಲ್ಲಿ ಜೂ. 27ರಂದು ಗ್ರಾ.ಪಂ. ಸಭಾಂಗಣದಲ್ಲಿ ಸಭೆ ನಡೆಯಿತು.

ವಿಷಯ ಪ್ರಸ್ತಾವಿಸಿದ ಸದಸ್ಯರು ಕೆಲ ಸಮಯಗಳಿಂದ ತ್ಯಾಜ್ಯ ವಿಲೇ ಸರಿಯಾಗಿ ಇತ್ತು. ಆದರೆ ಇದೀಗ ಮತ್ತೆ ಸಮಸ್ಯೆ ಎದುರಾಗುತ್ತಿದೆ. ಕೆಲವರು ತಮ್ಮ ಮನೆ ಬಾಗಿಲಿಗೆ ತ್ಯಾಜ್ಯ ಸಂಗ್ರಾಹದ ವಾಹನ ಬಂದರೂ ಅದಕ್ಕೆ ನೀಡದೆ ಎಲ್ಲೆಡೆ ಎಸೆಯುವ ಕೃತ್ಯ ನಡೆಸುತ್ತಿದ್ದಾರೆ. ಅಂತಹವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಚರಂಡಿ ಬಂದ್‌
ಪುಳಿತ್ತಡಿಯಿಂದ ಅಂಬೇಡ್ಕರ್‌ ಭವನಕ್ಕೆ ಹೋಗುವ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಬಂದ್‌ ಆಗಿದೆ. ಕೆಲ ಮನೆಯವರು ತಮ್ಮ ಮನೆಗೆ ವಾಹನ ಹೋಗಲೆಂದು ಚರಂಡಿಗೆ ಮಣ್ಣು ಹಾಕಿ ರಸ್ತೆಯಿಂದ ಮನೆಗೆ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಮಳೆ ನೀರು ರಸ್ತೆ ಮೇಲೆ ಹರಿದಾಡುತ್ತಿದೆ. ನಡೆದುಕೊಂಡು ಹೋಗುವವರು ರಸ್ತೆಯಲ್ಲಿ ಕೆಸರು ನೀರಿನ ಮೇಲೆ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಚರಂಡಿ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಯಿತು.

ಮುಂಜಾಗ್ರತ ಕ್ರಮಕ್ಕೆ ಸೂಚನೆ
ಮಳೆಗಾಲ ಆರಂಭ ಆಗುತ್ತಿ ದ್ದಂತೆಯೇ ಆರೋಗ್ಯ ಇಲಾಖೆ ಸ್ವಚ್ಛತೆ ಬಗ್ಗೆ ಮತ್ತು ಪರಿಸರದ ಸುತ್ತ ಫಾಗಿಂಗ್‌ ಮಾಡಿ ರೋಗ ಬರದಂತೆ ಮುಂಜಾಗ್ರತ ಕ್ರಮ ಅನುಸರಿಸುತ್ತಾರೆ. ಆದರೆ ಈ ಬಾರಿ ಆರೋಗ್ಯ ಇಲಾಖೆಯವರಿಗೆ ಆರೋಗ್ಯ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಕಡಬ ಪರಿಸರದಲ್ಲಿ ಶಂಕಿತ ಡೆಂಗ್ಯೂ ಜ್ವರ ಇದ್ದು, ಉಪ್ಪಿನಂಗಡಿ ಪರಿಸರದಲ್ಲಿ ಅಂತಹ ಸಮಸ್ಯೆ ಕಾಡುವ ಮುನ್ನ ಆರೋಗ್ಯ ಇಲಾಖೆಯವರಿಗೆ ಸೂಚನೆ ನೀಡುವ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದರು.

Advertisement

ಕಿಸಾನ್‌ ಸಮ್ಮಾನ್‌ ಅವಧಿ ವಿಸ್ತರಣೆಗೆ ಮನವಿ
ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಫ‌ಲಾನುಭವಿಗಳು ಅರ್ಜಿ ಸಲ್ಲಿಸಲು ಕೆಲ ದಿನಗಳು ಮಾತ್ರ ಬಾಕಿ ಇದೆ. ಆದರೆ ರೈತರು ಅರ್ಜಿ ಸಲ್ಲಿಸಲು ತೀರಾ ಸಮಸ್ಯೆ ಎದುರಿಸುವಂತಾಗಿದೆ. ಆಧಾರ್‌ ಕಾರ್ಡು ಮತ್ತು ಅರ್ಜಿ ಸಲ್ಲಿಸಲು ಸೈಬರ್‌ಗೆ ಹೋದರೆ ಅಲ್ಲಿ ಸರ್ವರ್‌ ಸರಿ ಇಲ್ಲ ಎನ್ನುವ ಕಾರಣ ನೀಡಲಾಗುತ್ತಿದೆ. ಇದರಿಂದ ಫ‌ಲಾನುಭವಿಗಳು ಸೂಚಿಸಿದ ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಸಾಧ್ಯ ವಾಗುತ್ತಿಲ್ಲ. ಆದಕಾರಣ ಅರ್ಜಿ ಸಲ್ಲಿಕೆ ಅವಧಿಯನ್ನು ಜುಲೈ ಕೊನೆಯ ತನಕ ವಿಸ್ತರಿಸಬೇಕು ಎಂದು ಸರಕಾರವನ್ನು ಕೋರಿ ಪತ್ರ ಬರೆಯಲು ನಿರ್ಣಯ ಅಂಗೀಕರಿಸಲಾಯಿತು.

ಆಯುಷ್ಮಾನ್‌ ಯೋಜನೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ನೋಂದಾಯಿಸಿದರೆ ಬಳಿಕ ರೋಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರೆ ಆಯುಷ್ಮಾನ್‌ ಯೋಜನೆಯಡಿ ಅವಕಾಶ ಪಡೆಯಬೇಕಾದರೆ ಪರ ದಾಡುವ ಸ್ಥಿತಿ ನಿರ್ಮಾಣವಾಗಿದೆ. ತತ್‌ಕ್ಷಣವೇ ವೆನ್ಲಾಕ್‌ನಿಂದ ಖಾಸಗಿ ಆಸ್ಪತ್ರೆಗಳಿಗೆ ಲಿಂಕ್‌ ಮಾಡುವ ವ್ಯವಸ್ಥೆ ಮಾಡಬೇಕು ಎಂದು ನಿರ್ಣಯಿಸಿ ಲಿಖೀತ ಮನವಿ ಕಳುಹಿಸಿಕೊಡುವಂತೆ ಸುರೇಶ ಅತ್ರಮಜಲು ಒತ್ತಾಯಿಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ಉಮೇಶ್‌ ಗೌಡ, ಝರೀನ ಇಕ್ಬಾಲ್, ಚಂದ್ರಾವತಿ ಹೆಗ್ಡೆ, ಸುಂದರಿ, ಯು.ಟಿ. ಮಹಮ್ಮದ್‌ ತೌಸಿಫ್, ರಮೇಶ್‌ ಭಂಡಾರಿ, ಯು.ಕೆ ಇಬ್ರಾಹಿಂ, ಕವಿತಾ, ಚಂದ್ರಾವತಿ, ಭಾರತಿ, ಯೋಗಿನಿ, ಜಮೀಳ ಉಪಸ್ಥಿತರಿದ್ದರು.

ಪಿಡಿಒ ಮಾಧವ ಸ್ವಾಗತಿಸಿ, ಕಾರ್ಯ ದರ್ಶಿ ಮರಿಯಮ್ಮ ವಂದಿಸಿದರು.

ವಾರ್ಡ್‌ಗಳ ಚರಂಡಿ ಹೂಳೆತ್ತುವ ಕುರಿತು ‘ಉದಯವಾಣಿ’ ಸುದಿನ ವರದಿ ಪ್ರತಿಧ್ವನಿಸಿದ್ದು, ಸದಸ್ಯರಾದ ಸುನಿಲ್ ದಡ್ಡು, ಚಂದ್ರಶೇಖರ ಮಡಿವಾಳ ಮಾತನಾಡಿ, ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಚರಂಡಿಗಳ ಹೂಳೆತ್ತುವ ಪ್ರಕ್ರಿಯೆ ಆರಂಭವಾಗಿಲ್ಲ. ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಕೂಡಾ ಬಂದಿದೆ. ಕ್ರಿಯಾ ಯೋಜನೆಯಲ್ಲಿ ಪ್ರತಿ ವಾರ್ಡ್‌ಗೆ ತಲಾ 50 ಸಾವಿರದಂತೆ ವಿಂಗಡಿಸಿ ಇಡಲಾಗಿದೆ. ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ತತ್‌ಕ್ಷಣ ಹೂಳೆತ್ತುವ ಕಾರ್ಯ ಆರಂಭಿಸಬಹುದು ಎಂದು ಪಿಡಿಒ ತಿಳಿಸಿದರು.

ಸದಸ್ಯರಾದ ಗೋಪಾಲ ಹೆಗ್ಡೆ ಮಾತನಾಡಿ, ಕಳೆದ ಒಂದು ವರ್ಷದಿಂದ ಪುಟ್ಫಾತ್‌ನಲ್ಲಿ ಅನಧಿಕೃತ ಅಂಗಡಿ ಕಾರ್ಯಾಚರಿಸುತ್ತಿದ್ದು, ಪಾದಚಾರಿಗಳು ನಡೆದಾಡಲು ಅಡ್ಡಿ ಆಗುತ್ತಿದೆ. ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ ಯಾಕೆ ಎಂದು ಸದಸ್ಯರು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷರು, ತೆರವು ಕಾರ್ಯಾಚರಣೆ ನಡೆಸುತ್ತೇವೆ. ಎಲ್ಲ ಸದಸ್ಯರು ತಮ್ಮೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.

ಅನಧಿಕೃತ ಅಂಗಡಿ ತೆರವು

ಸದಸ್ಯರಾದ ಗೋಪಾಲ ಹೆಗ್ಡೆ ಮಾತನಾಡಿ, ಕಳೆದ ಒಂದು ವರ್ಷದಿಂದ ಪುಟ್ಫಾತ್‌ನಲ್ಲಿ ಅನಧಿಕೃತ ಅಂಗಡಿ ಕಾರ್ಯಾಚರಿಸುತ್ತಿದ್ದು, ಪಾದಚಾರಿಗಳು ನಡೆದಾಡಲು ಅಡ್ಡಿ ಆಗುತ್ತಿದೆ. ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ ಯಾಕೆ ಎಂದು ಸದಸ್ಯರು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷರು, ತೆರವು ಕಾರ್ಯಾಚರಣೆ ನಡೆಸುತ್ತೇವೆ. ಎಲ್ಲ ಸದಸ್ಯರು ತಮ್ಮೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.

ಚರಂಡಿ ದುರಸ್ತಿಗೆ ಅನುದಾನ ಮೀಸಲು
ವಾರ್ಡ್‌ಗಳ ಚರಂಡಿ ಹೂಳೆತ್ತುವ ಕುರಿತು ‘ಉದಯವಾಣಿ’ ಸುದಿನ ವರದಿ ಪ್ರತಿಧ್ವನಿಸಿದ್ದು, ಸದಸ್ಯರಾದ ಸುನಿಲ್ ದಡ್ಡು, ಚಂದ್ರಶೇಖರ ಮಡಿವಾಳ ಮಾತನಾಡಿ, ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಚರಂಡಿಗಳ ಹೂಳೆತ್ತುವ ಪ್ರಕ್ರಿಯೆ ಆರಂಭವಾಗಿಲ್ಲ. ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಕೂಡಾ ಬಂದಿದೆ. ಕ್ರಿಯಾ ಯೋಜನೆಯಲ್ಲಿ ಪ್ರತಿ ವಾರ್ಡ್‌ಗೆ
Advertisement

Udayavani is now on Telegram. Click here to join our channel and stay updated with the latest news.

Next