Advertisement

Reservation; ಒಳ ಮೀಸಲಾತಿ ಜಾರಿಗೆ ಎಡಗೈ, ಬಲಗೈ ಒಪ್ಪಿಗೆ?

12:14 AM Oct 22, 2024 | Team Udayavani |

ಬೆಂಗಳೂರು: ಸ್ವತಃ ತಾವೇ ಪ್ರಣಾಳಿಕೆಯಲ್ಲಿ ಹೇಳಿದಂತೆ ಒಳಮೀಸಲಾತಿ ಜಾರಿಗೊಳಿಸುವ ಬಗ್ಗೆ ಆಡಳಿತಾರೂಢ ಕಾಂಗ್ರೆಸ್‌ ನಾಯಕರಲ್ಲಿ ಸದ್ಯಕ್ಕಂತೂ ಅಪಸ್ವರ ಇಲ್ಲ. ಈ ಸಂಬಂಧ ಪರಿಶಿಷ್ಟ ಜಾತಿಗಳ ಎಡಗೈ ಮತ್ತು ಬಲಗೈ ನಾಯಕರು ಒಮ್ಮತದಲ್ಲಿಯೇ ಇದ್ದಾರೆ. ಆದರೆ, ಇದರ ಜಾರಿಗೆ ಯಾವ ದತ್ತಾಂಶಗಳನ್ನು ಮಾನದಂಡವಾಗಿಟ್ಟುಕೊಳ್ಳಬೇಕು ಎನ್ನುವುದೇ ಕಗ್ಗಂಟಾಗಿದೆ!

Advertisement

ಒಳಮೀಸಲಾತಿ ಜಾರಿಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಪರ-ವಿರೋಧಗಳಿವೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸೋಮವಾರ ಸದಾಶಿವನಗರದ ಗೃಹ ಸಚಿವ ಡಾ.ಜಿ. ಪರಮೇಶ್ವರ ನಿವಾಸದಲ್ಲಿ ಪರಿಶಿಷ್ಟ ಜಾತಿಗಳ ಎಡಗೈ ಮತ್ತು ಬಲಗೈ ಸೇರಿದಂತೆ ಎರಡೂ ವರ್ಗಗಳ ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಸಮಾಲೋಚನ ಸಭೆ ನಡೆಸಿದರು. ಅಲ್ಲಿ ಒಳಮೀಸಲಾತಿ ನೀಡುವ ವಿಚಾರದಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು. ಆದರೆ, ಇದಕ್ಕೆ ವೈಜ್ಞಾನಿಕ ದತ್ತಾಂಶಗಳ ಅಗತ್ಯವಿದ್ದು, ಯಾವ ವರದಿಯ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಳ್ಳಬೇಕು ಎನ್ನುವುದು ಎಲ್ಲರ ಗೊಂದಲಕ್ಕೆ ಕಾರಣವಾಯಿತು.

ಸ್ವತಃ ಸುಪ್ರೀಂ ಕೋರ್ಟ್‌ ಪರಿಶಿಷ್ಟ ಜಾತಿಗಳಿಗೆ ವೈಜ್ಞಾನಿಕವಾಗಿ ಒಳಮೀಸಲಾತಿ ನೀಡುವಂತೆ ಸೂಚಿಸಿದೆ. ಹಾಗಿದ್ದರೆ, ಆ ವೈಜ್ಞಾನಿಕ ದತ್ತಾಂಶಗಳು ಯಾವುವು? ಸದಾಶಿವ ಆಯೋಗದ ವರದಿಯನ್ನು ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ತಿರಸ್ಕರಿಸಿದೆ. ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಮಿತಿ ಯಾವ ಅಂಕಿ-ಅಂಶಗಳ ಆಧಾರದಲ್ಲಿ ಹಂಚಿಕೆ ಮಾಡಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನು ಜಾತಿ ಗಣತಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ವರದಿ ಕುರಿತು ಪರ-ವಿರೋಧಗಳಿವೆ. ಹೀಗಿರುವಾಗ, ಯಾವ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಳ್ಳಬೇಕು ಎಂದು ಸಭೆಯಲ್ಲಿ ಸಚಿವರು, ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಯಾವುದಾದರೂ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಈಗ ಜಾರಿಗೊಳಿಸಿದರೂ, ಮುಂಬರುವ ದಿನಗಳಲ್ಲಿ ಅದನ್ನು ಕೋರ್ಟ್‌ನಲ್ಲಿ ಯಾರೂ ಪ್ರಶ್ನಿಸುವಂತಿರಬಾರದು. ಹಾಗೊಂದು ವೇಳೆ ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡುವಂತೆ ಸರಕಾರದ ನಡೆ ಇರಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ.

ಮುಂಬರುವ ದಿನಗಳಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಇದನ್ನು ಚರ್ಚೆಗೆ ಕೈಗೆತ್ತಿಕೊಳ್ಳುವ ಬಗ್ಗೆಯೂ ಪ್ರಸ್ತಾಪವಾಯಿತು. ಆದರೆ, ಸದ್ಯಕ್ಕೆ ಉಪ ಚುನಾವಣೆ ನೀತಿಸಂಹಿತೆ ಜಾರಿ ಇದೆ. ಇದು ಮುಗಿದ ನಂತರ ಪ್ರಸ್ತಾವನೆ ಸಲ್ಲಿಸಿ, ನಂತರ ಸಂಪುಟದಲ್ಲಿ ಚರ್ಚೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಅಗತ್ಯಬಿದ್ದರೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸ್ಪಷ್ಟೀಕರಣ ಪಡೆಯುವ ಬಗ್ಗೆಯೂ ಕೆಲ ನಾಯಕರು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರಾದ ಕೆ.ಎಚ್‌. ಮುನಿಯಪ್ಪ, ಆರ್‌.ಬಿ. ತಿಮ್ಮಾಪುರ, ಪ್ರಿಯಾಂಕ ಖರ್ಗೆ, ಶಿವರಾಜ್‌ ತಂಗಡಗಿ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಪ್ರಕಾಶ ರಾಠೊಡ್‌, ಸುಧಾಮದಾಸ್‌, ವಸಂತಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಶೀಘ್ರ ಸಂಪುಟದ ಮುಂದೆ: ಮಹದೇವಪ್ಪ
ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್‌.ಸಿ. ಮಹದೇವಪ್ಪ, ಚಿತ್ರದುರ್ಗದಲ್ಲಿ ಒಳಮೀಸಲಾತಿ ಪರ ಎಂದಿ ¨ªೆವು. ವಿಧಾನಸಭೆ ಚುನಾವಣೆ ಪ್ರಣಾಳಿಕೆ ಯಲ್ಲೂ ಹೇಳಿದ್ದೆವು. ನಮ್ಮ ನಿಲುವು ಸ್ಪಷ್ಟ ವಾಗಿದೆ. ಆದರೆ, ಈ ಹಿಂದೆ ಬಿಜೆಪಿ ಸರಕಾರ ಸದಾಶಿವ ಆಯೋಗ ವರದಿ ತಿರಸ್ಕರಿ ಸಿತ್ತು. ಕೊನೆಗೆ ಅಂಕಿ-ಅಂಶ ಕೇಳಿ ಕೇಂದ್ರಕ್ಕೆ ಕಳುಹಿಸಿತ್ತು. ಪರಿಶಿಷ್ಟ ಜಾತಿಯಲ್ಲಿ 101 ಸಮು ದಾಯ ಗಳಿವೆ. ಸುಪ್ರೀಂ ಕೋರ್ಟ್‌ ವೈಜ್ಞಾನಿಕ ವಾಗಿ ಜಾರಿಗೊಳಿಸಬೇಕು ಅಂತ ಹೇಳಿದೆ. ಇದೆಲ್ಲವನ್ನೂ ಅಧ್ಯಯನ ಮಾಡಿ ಸಚಿವ ಸಂಪುಟದ ಮುಂದಿಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next