ಕಾಸರಗೋಡು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಎಡರಂಗ ಪರ ಅಲೆ ಸೃಷ್ಟಿಯಾಗಿದೆ. ಆದ್ದರಿಂದ ಕಳೆದ ಬಾರಿಗಿಂತಲೂ ಹೆಚ್ಚು ಸೀಟುಗಳನ್ನು ಈ ಬಾರಿ ಎಡರಂಗ ಗೆದ್ದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಇದನ್ನೂ ಓದಿ:ಐಪಿಎಲ್ ಗೆ ಕೋವಿಡ್ ಕಾಟ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಮುಖ ಆಟಗಾರನಿಗೆ ಕೋವಿಡ್ ಪಾಸಿಟಿವ್
ಅವರು ಎಡರಂಗ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಕಾಸರಗೋಡಿಗೆ ಬಂದಿದ್ದು, ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ಭರವಸೆಯನ್ನು ವ್ಯಕ್ತಪಡಿಸಿದರು.
ಹಿರಿಯ ನಾಗರಿಕರು ಸಹಿತ ಸರ್ವರೂ ಎಡರಂಗಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವುದು ರಾಜ್ಯದಾದ್ಯಂತ ಕಂಡು ಬರುತ್ತಿದೆ. ಈ ಬಾರಿ ಬಿಜೆಪಿ ಗೆಲುವು ಸಾಧಿಸದು. ನೇಮಂನಲ್ಲಿ ತೆರೆದ ಖಾತೆಯನ್ನು ಈ ಬಾರಿ ಎಡರಂಗ ಮುಚ್ಚುಗಡೆಗೊಳಿಸಲಿದೆ ಯೆಂದರು.
ಚುನಾವಣೆಯನ್ನು ಬುಡಮೇಲುಗೊಳಿಸಲು ಕೆಲ ಭಾಗದಿಂದ ಗೂಢಾಲೋಚನೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಕಾಂಗ್ರೆಸ್ ಬಿಜೆಪಿಯೊಂದಿಗೆ ಸೇರಿಕೊಂಡು ಎಡರಂಗವನ್ನು ಸೋಲಿಸಲು ಪ್ರಯತ್ನಿಸುತ್ತಿದೆ. ಆದರೆ ಆ ಪ್ರಯತ್ನ ಯಶಸ್ವಿಯಾಗದು ಎಂದು ಅಭಿಪ್ರಾಯಪಟ್ಟರು.
ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗ ಹರಡದಿದ್ದರೆ ನಾವು ಇದಕ್ಕಿಂತಲೂ ಹೆಚ್ಚು ಮುಂದಕ್ಕೆ ಸಾಗುತ್ತಿದ್ದೆವು. ಅಭಿವೃದ್ಧಿ ಕುರಿತು ಚರ್ಚೆ ನಡೆಸಲು ವಿಪಕ್ಷಕ್ಕೆ ಭಯ ಎಂದರು. ಭಗಿನಿಯರು ದಾಳಿಗೊಳಗಾದ ಘಟನೆಯಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಖಂಡನೆ ವ್ಯಕ್ತಪಡಿಸಿದರು. ಭಗಿನಿಯರು ಆಕ್ರಮಣಕ್ಕೆಡೆಯಾಗಿಲ್ಲವೆಂದು ಕೇಂದ್ರ ರೈಲ್ವೇ ಸಚಿವರ ಹೇಳಿಕೆ ಸುಳ್ಳೆಂದೂ ಅವರು ಹೇಳಿದರು. ಪೌರತ್ವ ತಿದ್ದುಪಡಿ ಕಾನೂನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂಬುದು ಕೇರಳ ಸರಕಾರದ ನಿಲುವಾಗಿದೆ. ಈ ಬಗ್ಗೆ ಜನರಿಗೆ ಹೆಚ್ಚಿನ ನಿರೀಕ್ಷೆಯಿದೆ ಎಂದವರು ತಿಳಿಸಿದರು.