ಮಹಾರಾಷ್ಟ್ರ: ಮನೆಯಲ್ಲಿ ಯಾರೂ ಇರದ ವೇಳೆ ಉಪನ್ಯಾಸಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ನಾಗ್ಪುರದ ನರೇಂದ್ರ ನಗರದ ನಿವಾಸಿಯಾಗಿರುವ ಗಜಾನನ ಜನರೋಜಿ ಕರಾಡೆ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ.
ಕರಾಡೆ ಅವರು ನಾಗ್ಪುರದ ಜಿಎಸ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜ್ ನಲ್ಲಿ ಹಿಂದಿ ಉಪನ್ಯಾಸಕರಾಗಿ ಕಳೆದ 12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಕುಟುಂಬದ ಮಾಹಿತಿ ಪ್ರಕಾರ ಕಳೆದ ಕೆಲ ತಿಂಗಳಿಂದ ಕರಾಡೆ ಮಾನಸಿಕವಾಗಿ ಕುಗ್ಗಿದ್ದರು ಅಲ್ಲದೆ ತಮ್ಮದೇ ಕಾಲೇಜ್ ನಲ್ಲಿ ಕೆಲ ಉಪನ್ಯಾಸಕರು ಹಾಗೂ ಕಾಲೇಜ್ ಆಡಳಿತ ಮಂಡಳಿಯ ಕೆಲ ಸದಸ್ಯರು ಮಾನಸಿಕ ಕಿರುಕುಳ ನೀಡುತ್ತಿರುವ ಕುರಿತು ನೋವಿನ ಮಾತುಗಳನ್ನು ಮನೆಮಂದಿಯೊಂದಿಗೆ ಹೇಳಿಕೊಂಡಿದ್ದರು ಎಂದು ಹೇಳಿದ್ದಾರೆ.
ಘಟನೆ ವಿವರ: ಕಳೆದ ಭಾನುವಾರ ಕರಾಡೆ ಅವರ ಪತ್ನಿ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆಂದು ಅಮರಾವತಿಗೆ ತೆರಳಿದ್ದರು ಈ ವೇಳೆ ಕರಾಡೆ ತನ್ನ ಸೋದರ ಮಾವನಿಗೆ ಕರೆ ಮಾಡಿ ಅಪರಿಚಿತ ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸುತ್ತಾರೆಂಬ ಭಯ ಕಾಡುತ್ತಿದೆ ಹಾಗಾಗಿ ನನಗೇನಾದರೂ ಅಪಾಯ ಸಂಭವಿಸದರೆ ಮನೆಯ ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದ ಡೈರಿಯಲ್ಲಿ ಎಲ್ಲವನ್ನು ಬರೆದಿದ್ದೇನೆ ಯಾರು ಯಾರು ನನಗೆ ಕಿರುಕುಳ ನೀಡುತಿದ್ದರು ಎಂಬ ವಿಚಾರ ಡೈರಿಯಲ್ಲಿ ಬರೆದಿದ್ದನೆ ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಸೋದರ ಮಾವ ಹಾಗೂ ಕರಾಡೆ ಅವರ ಪತ್ನಿ ಕೂಡಲೇ ಅಮರಾವತಿಯಿಂದ ನಾಗ್ಪುರಕ್ಕೆ ಹೊರಟಿದ್ದಾರೆ ಮನೆಗೆ ಬಂದು ನೋಡಿದಾಗ ಕರಾಡೆ ತನ್ನ ಮನೆಯ ಕೊನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಕರಾಡೆ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಂಡ ಪೊಲೀಸರು ಮನೆಗೆ ಬಂದು ಕುಟುಂಬದವರ ಜೊತೆ ವಿವರ ಪಡೆದು ಬಳಿಕ ಸಂಬಂಧಿಕರು ಮನೆಯ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಡೈರಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ಮಾಹಿತಿಯಂತೆ ಕಾಲೇಜ್ ನ ಕೆಲ ಪ್ರಾಧ್ಯಾಪಕರ ಹಾಗೂ ಆಡಳಿತ ಮಂಡಳಿಯ ಸದಸ್ಯರ ಹೆಸರು ಇರುವ ಕುರಿತು ಮಾಹಿತಿ ನೀಡಿದ್ದಾರೆ.
ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಬಿಗಿ ಭದ್ರತೆಯಲ್ಲಿ ಪಂಚಾಯತ್ ಚುನಾವಣೆ ಮತ ಎಣಿಕೆ ಆರಂಭ