Advertisement

Lebanon ಕ್ರೈಸ್ತ ಮಹಿಳೆ ಈಗ ಅರ್ಚಕಿ!; ಭೈರಾಗಿನಿ ಮಾ

12:05 AM Oct 27, 2023 | Team Udayavani |

ಕೊಯಮತ್ತೂರು: ಭಾರತದ ಆಶ್ರಮಗಳನ್ನು, ತೀರ್ಥ ಕ್ಷೇತ್ರ ಗಳನ್ನು ಹುಡುಕಿಕೊಂಡು ವಿದೇಶಿಯರು ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ, ಮಾತ್ರವಲ್ಲ ಇಲ್ಲೇ ನೆಲೆಸುತ್ತಾರೆ. ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸು ದೇವ್‌ ಆಶ್ರಮದಲ್ಲಿರುವ ಲಿಂಗ ಭೈರವಿ ದೇಗುಲ ದಲ್ಲಿ ಅಂತಹದ್ದೇ ಒಂದು ಅಚ್ಚರಿ ಕಾಣುತ್ತದೆ. ಲೆಬನಾನ್‌ ದೇಶದಿಂದ ಬಂದ ಕ್ರೈಸ್ತ ಧರ್ಮೀಯ ಹೆಣ್ಣು ಮಗಳು ಹ್ಯಾನಿನ್‌, ಕೆಂಪು ಸೀರೆ ಉಟ್ಟು ಕೊಂಡು ಶುದ್ಧ ಭಾರ ತೀಯ ದಿರಿಸಿನಲ್ಲಿ ಕಂಗೊಳಿಸುತ್ತಿದ್ದಾರೆ. ಬರೀ ಅಷ್ಟೇ ಆಗಿದ್ದರೆ ವಿಶೇಷವಿರಲಿಲ್ಲ. ಲಿಂಗ ಭೈರವಿಗೆ ಎಲ್ಲ ರೀತಿಯ ಪೂಜೆಯನ್ನೂ ನೆರವೇರಿಸುತ್ತಾರೆ. ಭಾರತೀಯರೂ ಆಕೆಯನ್ನು ಅಷ್ಟೇ ಸಹಜವಾಗಿ ಸ್ವೀಕರಿಸಿದ್ದಾರೆ.

Advertisement

ಲೆಬನಾನ್‌ನಲ್ಲಿ ಜಾಹೀರಾತು ಕಂಪೆನಿಯೊಂದರಲ್ಲಿ ಕಲಾನಿರ್ದೇಶಕಿಯಾಗಿದ್ದ ಹ್ಯಾನಿನ್‌ರದ್ದು ಐಷಾರಾಮಿ ಜೀವನವಾಗಿತ್ತು. ಆದರೆ ಅತ್ಯಂತ ಆತ್ಮೀಯ ಸ್ನೇಹಿತ ರೊಬ್ಬರ ಸಾವಿನ ಅನಂತರ ಅವರಿಗೆ ಜೀವನದ ಬಗ್ಗೆ ಪ್ರಶ್ನೆ ಶುರುವಾಯಿತು. 2009ರಲ್ಲಿ ಎಲ್ಲವನ್ನೂ ತೊರೆದು ಸದ್ಗುರು ಆಶ್ರಮಕ್ಕೆ ಬಂದರು. ಇಲ್ಲಿ ಸ್ವಯಂಸೇವಕಿ ಯಾ ದರು. ಈಗ ಅವರಿಗೆ ಸಂಪೂರ್ಣ ಸಂತೋಷ ಸಿಕ್ಕಿದೆಯಂತೆ. ಆಕೆಗೆ ಸದ್ಗುರು, ಭೈರಾಗಿನಿ ಮಾ ಎಂಬ ಹೆಸರು ನೀಡಿ ಲಿಂಗ ಭೈರವಿಯ ಅರ್ಚಕಿಯನ್ನಾಗಿಸಿದ್ದಾರೆ!

ವಿಶೇಷವೆಂದರೆ ಹ್ಯಾನಿನ್‌ ಈಗಲೂ ಕ್ರೈಸ್ತರೆ. ಅವರು ಮತಾಂತರಗೊಂಡಿಲ್ಲ. ಯಾರೂ ಆಕೆಗೆ ಮತಾಂತರ ಗೊಳ್ಳಬೇಕೆಂದು ಹೇಳಿಲ್ಲ. ಹಾಗೆಯೇ ಲೆಬನಾನ್‌ನಲ್ಲಿರುವ ಕುಟುಂಬದೊಂದಿಗೂ ಸಂಪರ್ಕದಲ್ಲಿದ್ದಾರೆ. ಅವರ ಸಂಪೂರ್ಣ ಸಹಕಾರವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next