Advertisement

ಸುರಕ್ಷಿತ ಸ್ಥಳಕ್ಕೆ ಹಾವು ಬಿಡುವುದು ಸವಾಲಿನ ಕೆಲಸ

04:22 PM Aug 03, 2021 | Team Udayavani |

ಕುದೂರು: ಹಾವು ಹಿಡಿಯುವುದು ಒಂದು ಅದ್ಭುತವಾದ ಕಲೆ. ಹಿಡಿದ ಹಾವನ್ನು ಜೋಪಾನವಾಗಿ ಸುರಕ್ಷಿತ ಸ್ಥಳಕ್ಕೆ ಬಿಡುವುದೂ
ಕೂಡ ಸವಾಲಿನ ಕೆಲಸವಾಗಿದೆ ಎಂದು ಉರಗ ತಜ್ಞ ಸುಗ್ಗನಹಳ್ಳಿ ಅರುಣ್‌ಕುಮಾರ್‌ ಹೇಳಿದರು.

Advertisement

ಡಾಬಸ್‌ಪೇಟೆಯ ತೋಟದ ಮನೆಯಲ್ಲಿ ಸೇರಿಕೊಂಡಿದ್ದ ಹೆಬ್ಟಾವನ್ನು ಹಿಡಿದು ಮಾಗಡಿ ತಾಲೂಕು ಕುದೂರು ಹೋಬಳಿಯ ಚೀಲೂರು ಬೆಟ್ಟಕ್ಕೆ ಬಿಡುವ ಸಂದರ್ಭದಲ್ಲಿ ಮಾತನಾಡಿ, ಹೆಬ್ಟಾವು ಅತ್ಯಂತ ಅಮಾಯಕ ಹಾವುಗಳಲ್ಲಿ ಒಂದು. ಒಮ್ಮೆ ಹೊಟ್ಟೆ ತುಂಬಾ ಆಹಾರ ಸಿಕ್ಕ ನಂತರ ಒಂದು ತಿಂಗಳು ಆಹಾರವಿಲ್ಲದೆ ಇರಬಲ್ಲದು. ಇದು ವಿಷಪೂರಿತ ಹಾವಲ್ಲ. ಆದರೆ, ಅದು ಕಡಿದರೆ ದೊಡ್ಡ ಗಾಯವಾಗುತ್ತದೆ.ಇದರಿಂದ ಎಚ್ಚರವಾಗಿರಬೇಕು ಎಂದು ತಿಳಿಸಿದರು.

ಸುರಕ್ಷಿತ ಸ್ಥಳಕ್ಕೆ ಬಿಡುವುದು ನಮ್ಮ ಜವಾಬ್ದಾರಿ: ಹೆಬ್ಟಾವನ್ನು ಹಿಡಿದು ಬೆಟ್ಟ-ಗುಡ್ಡಗಳಿಗೆ ಬಿಡುವಂತಿಲ್ಲ. ಈಗ ಹಿಡಿದಿರುವುದು ಗಂಡು ಹೆಬ್ಟಾವಾಗಿದೆ. ಅದರ ಸಂತಾನೋತ್ಪತ್ತಿಗೆ ಹಾಗೂ ಆಹಾರಕ್ಕೆ ಅನುಕೂಲವಾಗುವ ಕಾಡಿಗೆ ಬಿಡಬೇಕು. ಮಾಗಡಿ ತಾಲೂಕಿನ ಚೀಲೂರು ¸ಬೆಟ್ಟದಲ್ಲಿ ಹೆಬ್ಟಾವಿನ ‌ ಸಂಖ್ಯೆ ಹೆಚ್ಚಿದೆ .ಹೆಬ್ಟಾವುಗಳ ಸಂತತಿ ಇಲ್ಲದ ‌ ಕಡೆಗೆ ಇದನ್ನು ಬಿಟ್ಟರೆ ಆಹಾರಕ್ಕೂ ಪರದಾಡುತ್ತದೆ. ಆಗ ದನ-ಕರು, ಕುರಿ ಮೇಕೆಗಳನ್ನುಹಿಡಿದು ನುಂಗುತ್ತದೆ. ಜನರು ಇದನ್ನು ಗಮನಿಸಿದರೆ ಹಾವನ್ನು ಹೊಡೆದು ಹಾಕದೆ ಬಿಡಲಾರರು. ಅದಕ್ಕಾಗಿ
ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಅದನ್ನು ಬಿಡುವುದು ನಮ್ಮಜವಾಬ್ದಾರಿ ಎಂದು ತಿಳಿಸಿದರು.

ಹಾವನ್ನು ಕಂಡಾಗ ದಯವಿಟ್ಟು ಅದನ್ನು ಹೊಡೆದು ಕೊಲ್ಲಬೇಡಿ. ಪೋನಾಯಿಸಿದರೆ (ಮೊ.ನಂ: 9902252765) ಸಾಕು ಬಂದು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅವರ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಡುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next