ಪಡುಬಿದ್ರಿ: ನಮ್ಮಲ್ಲೀಗ ಚಿಂತನಾ ಶಕ್ತಿಯೇ ಕಳೆದು ಹೋಗಿದೆ. ಕರಾವಳಿ ಜಿಲ್ಲೆಯ ವಿದ್ಯಾವಂತರೆನಿಸಿ ಕೊಂಡಿರುವ ನಾವೇ ತಪ್ಪು ಮಾಡು ತ್ತಿದ್ದೇವೆ. ನಾವೆಲ್ಲರೂ ಒಂದಾಗಿ ಕೋಮು ಸಂಘರ್ಷವನ್ನು ನಿಲ್ಲಿಸೋಣ. ಘನತೆವೆತ್ತ ಬದುಕು ನಮ್ಮದಾಗಬೇಕು. ಆರ್ಟ್ ಆಫ್ ಲೀವಿಂಗ್ (ಬದುಕುವ ಕಲೆ) ನಮ್ಮ ನಮ್ಮಲ್ಲೇ ಅಡಗಿದೆ ಎಂದು ಮಂಗಳೂರಿನ ಲೆಕ್ಕ ಪರಿಶೋಧಕ, ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಸೂರ್ಯಪ್ರಕಾಶ್ ಭಟ್ ಹೇಳಿದರು.
ಅವರು ರವಿವಾರ ಪಡುಬಿದ್ರಿ ರೋಟರಿ ಕ್ಲಬ್ ಆಯೋಜಿಸಿದ ಪಡುಬಿದ್ರಿ ಪರಿಸರದಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದ 5 ಬಡ ಕುಟುಂಬಗಳಿಗೆ 6 ತಿಂಗಳ ಪಡಿತರ ಸಾಮಗ್ರಿ ವಿತರಣೆಯನ್ನು ಮಾಡುವ ಕುರಿತ ದೃಢೀಕರಣ ಪತ್ರವನ್ನು
ವಿತರಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರ ವಿಸಿ, ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶವನ್ನು ಪಡೆದಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಗೆ ದಿ| ಮೀರಾ ಹಿರಿಯಣ್ಣ ಸ್ಮಾರಕ ಫಲಕವನ್ನು ಹಸ್ತಾಂತರಿಸಿ ರೋಟರಿ ಪದಗ್ರಹಣ ಅಧಿಕಾರಿಯಾಗಿ ಮಾತನಾಡಿದರು.
ರೋಟರಿಯಿಂದ ನಾವು ಕಲಿವ ಪಾಠ ಯಾವ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲೂ ಇರುವುದಿಲ್ಲ. ರಾಜ ಕೀಯ ನಾಯಕರೂ ರೋಟರಿ ಮೂಲಕ ಸಮಾಜಕ್ಕೆ ಅರ್ಪಣೆಯಾಗಲಿ ಎಂದು ಸೂರ್ಯಪ್ರಕಾಶ್ ಭಟ್ ಹಾರೈಸಿದರು.
ನೂತನ ಅಧ್ಯಕ್ಷ ರಮಿಝ್ ಹುಸೈನ್ ತಮ್ಮ ಪರಿಸರದ ಜನತೆಯ ಬದುಕಲ್ಲಿ ಬದಲಾವಣೆಗಳನ್ನು ತರಲು ರೋಟರಿ ಕ್ಲಬ್ ಪಡುಬಿದ್ರಿ ಶ್ರಮಿಸುವುದಾಗಿ ಹೇಳಿದರು. ನಿಕಟಪೂರ್ವ ಅಧ್ಯಕ್ಷ, ಪತ್ರಕರ್ತ ಅಬ್ದುಲ್ ಹಮೀದ್ ತನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ವಲಯ ಸೇನಾನಿ ಪಿ. ಕೃಷ್ಣ ಬಂಗೇರ, ಉಪ ರಾಜ್ಯಪಾಲ ಹರಿಪ್ರಕಾಶ್ ಶೆಟ್ಟಿ, ರೋಟರಿ ಉಡುಪಿ ಸದಸ್ಯೆ, ಚಿತ್ರನಟಿ ರಂಜಿತಾ ಶೇಟ್ ಮಾತನಾಡಿದರು.
ಪಡುಬಿದ್ರಿ ರೋಟರಿ ಸಂಸ್ಥೆಗೆ 16
ಮಂದಿ ನೂತನ ಸದಸ್ಯರನ್ನು ಸೇರ್ಪಡೆ ಗೊಳಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಹಮೀದ್ ಸ್ವಾಗತಿಸಿ ದರು. ಪ್ರಾಕ್ತನ ಕಾರ್ಯದರ್ಶಿ ಕರುಣಾಕರ ನಾಯಕ್ ವರದಿ ವಾಚಿಸಿದರು. ಚೈತಾಲಿ ಹಾಗೂ ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಸಂದೀಪ್ ಪಲಿಮಾರು ವಂದಿಸಿದರು.