Advertisement

ತಂಬಾಕು ತ್ಯಜಿಸಿ ಜೀವ ಉಳಿಸಿಕೊಳ್ಳಿ: ಪಾಟೀಲ

10:59 AM Jun 01, 2018 | Team Udayavani |

ಕಲಬುರಗಿ: ದೇಸದ ಯುವ ಶಕ್ತಿ ಧೂಮಪಾನದಂತಹ ದುಶ್ಚಟಗಳ ವ್ಯಸನಿಯಾಗಿ, ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ತಂಬಾಕನ್ನು ತ್ಯಜಿಸುವ ಮೂಲಕ ಜೀವವನ್ನು ಉಳಿಸಿಕೊಳ್ಳಬೇಕಿದೆ ಎಂದು ಉಪನ್ಯಾಸಕ ಎಚ್‌.ಬಿ. ಪಾಟೀಲ ಹೇಳಿದರು.

Advertisement

ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ನಗರದ ಜೆಆರ್‌ನಗರದಲ್ಲಿನ ಬಳಗದ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಧೂಮಪಾನ ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪ್ರತಿವರ್ಷ ಮೇ 31ನ್ನು ವಿಶ್ವ ಧೂಮಪಾನ ನಿಷೇಧ ದಿನವಾಗಿ ಆಚರಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳ ಸೇವೆಯಿಂದ ಆಗುವ ದುಷ್ಪರಿಣಾಮಗಳನ್ನು ಎಲ್ಲೆಡೆ ಪ್ರಚಾರಗೊಳಿಸಿ, ಈ ಚಟಗಳಿಂದ ದೂರವಿರುವಂತೆ ಜಾಗೃತಿ ಉಂಟು ಮಾಡುವುದು ಈ ದಿನದ ಹಿನ್ನೆಲೆಯಾಗಿದೆ ಎಂದರು.

ಬಳಗದ ಗೌರವಾಧ್ಯಕ್ಷ ಶಾಂತಪ್ಪ ನರೋಣಾ, ಕಾರ್ಯದರ್ಶಿ ರಾಜಶೇಖರ ಮರಡಿ, ಸದಸ್ಯರಾದ ರಾಮಚಂದ್ರ ಭಜಂತ್ರಿ, ನಾಗರಾಜ ಹಡಪದ, ಉಮೇಶ ಪಾಟೀಲ, ವಿಕಾಸ ದೇಸಾಯಿ, ಹಣಮಂತರಾವ ಅಲ್ಲಾಪೂರ, ರಮೇಶ ಪಾಟೀಲ, ಶರಣಬಸವ ಹೀರಾಪೂರ ಹಾಗೂ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next