Advertisement

ಆನ್‌ಲೈನ್‌ ಗೇಮ್‌ ಬಿಡಿ, ಮೈದಾನಕ್ಕಿಳಿದು ಆಟ ಆಡಿ-ರಾಜ್ಯಸಭಾ ಸದಸ್ಯ ಈರಣ್ಣ

05:27 PM Feb 13, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಇಂದಿನ ಆಧುನಿಕ ಯುಗದಲ್ಲಿ ವ್ಯಾಯಾಮ ಶಾಲೆ, ಗರಡಿ ಮನೆಗಳು ಮಾಯವಾಗುತ್ತಿವೆ. ಮೊಬೈಲ್‌, ಆನ್‌ಲೈನ್‌
ಗೇಮ್‌ಗಳಿಗಿಂತಲೂ ಮೈದಾನಕ್ಕಿಳಿದು ದೇಹ ಸದೃಢಗೊಳ್ಳುವ ಆಟಗಳನ್ನು ಆಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

Advertisement

ತಾಲೂಕಿನ ಅತಿವಾಡ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಸಂಸದೆ ಮಂಗಲಾ ಅಂಗಡಿ ಅವರ ತಲಾ 5 ಲಕ್ಷ ರೂ. ನಂತೆ ಒಟ್ಟು 10 ಲಕ್ಷ ರೂ. ಅನುದಾನದಲ್ಲಿ ಅತ್ಯಾಧುನಿಕ ಶಿವಪ್ರತಿಷ್ಠಾನ ಹಿಂದೂಸ್ಥಾನ ವ್ಯಾಯಾಮ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಮೊಬೆ„ಲ್‌, ಆನ್‌ಲೈನ್‌ ಗೇಮ್‌ ಗಳನ್ನು ಆಡುವ ಮೂಲಕ ತಮ್ಮ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಗರಡಿಮನೆಗಳಿಗೆ ಹೋಗಿ ಕುಸ್ತಿ ಆಡುವ ಪರಿಪಾಠವಿತ್ತು. ಮೈದಾನಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಯುವಕರು ದೇಹವನ್ನು ಕಟುಮಸ್ತಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಈಗಿನ ದಿನಮಾನದಲ್ಲಿ ಅದು ಮಾಯವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

ಅತಿವಾಡ ಗ್ರಾಮದಲ್ಲಿ ನಿರ್ಮಾಣಗೊಂಡ ಈ ವ್ಯಾಯಾಮ ಶಾಲೆಯ ಉಪಯೋಗವಾಗಬೇಕು. ಯುವಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.

ಸಂಸದೆ ಮಂಗಲಾ ಅಂಗಡಿ ಮಾತನಾಡಿ, ಯುವಕರು ದುಶ್ಚಟಗಳ ದಾಸರಾಗದೇ ಆರೋಗ್ಯವೇ ಭಾಗ್ಯ ಎಂದು ಹೆಚ್ಚಿನ ಶ್ರಮ
ವಹಿಸಬೇಕು. ನಿತ್ಯವೂ ವ್ಯಾಯಾಮ ಮಾಡಿ ಸದೃಢರಾಗಬೇಕು ಎಂದ ಅವರು, ಅತಿವಾಡ ಗ್ರಾಮದಲ್ಲಿ ಧನಂಜಯ ಜಾಧವ ಹಾಗೂ ಯತೇಶ್‌ ಹೆಬ್ಟಾಳಕರ ಅವರು ಅತಿ ಕಡಿಮೆ  ಸಮಯದಲ್ಲಿ ಸಂಸದರ ಅನುದಾನವನ್ನು ಸರಿಯಾಗಿ ಬಳಸಿ ಇಂತಹ ಭವ್ಯವಾದ ವ್ಯಾಯಾಮ ಶಾಲೆ ನಿರ್ಮಿಸಿರುವುದು ಶ್ಲಾಘನೀಯ ಎಂದರು.

Advertisement

ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಅತಿವಾಡ ಗ್ರಾಮದಲ್ಲಿ ಯುವಕರ ಇಚ್ಛಾಶಕ್ತಿಯಿಂದ ಈ ವ್ಯಾಯಾಮ ಶಾಲೆ ನಿರ್ಮಾಣವಾಗಿದೆ. ಗ್ರಾಮಕ್ಕೆ ಏನು ಬೇಕು ಎಂಬುದರ ಬಗ್ಗೆ ಯುವಕರೇ  ಯೋಚಿಸಿ ಇಂಥ ಅತ್ಯಾಧುನಿಕ ವ್ಯಾಯಾಮ ಶಾಲೆ ನಿರ್ಮಿಸಿಕೊಂಡಿದ್ದಾರೆ ಎಂದರು.

ಅಂತಾರಾಷ್ಟ್ರೀಯ ದೇಹದಾಡ್ಯì ಪಟುಗಳಾದ ಪ್ರಶಾಂತ ಖಾನೂಕರ್‌, ಪ್ರತಾಪ ಕಾಲಕುಂದ್ರಿಕರ, ಪ್ರಸಾದ ಬಾಚಿಕರ ಅವರು ದೇಹದಾರ್ಢ್ಯದ ಬಗ್ಗೆ ಮಾತನಾಡಿದರು.

ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ವತಿಯಿಂದ ಗಣ್ಯರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಗ್ರಾಪಂ ಅಧ್ಯಕ್ಷ ಸಾಯಿ ಛಬ್ಬುಬಾಯಿ ಕಾಂಬಳೆ, ಉಪಾಧ್ಯಕ್ಷೆ ಯೋಗೀಶ ಹೇಳ್ಕರ, ಮುಖಂಡರಾದ ಯತೇಶ ಹೆಬ್ಟಾಳಕರ, ಸಚಿನ ನಾಚಣಕರ, ಲಖನ್‌ ಗುರೂಜಿ, ಸತೀಶ ನಿಲಜಕರ, ಪ್ರದೀಪ ಪಾಟೀಲ, ಪಾಲಿಕೆ ಸದಸ್ಯರಾದ ರಾಜು ಭಾತಖಾಂಡೆ, ಶಂಕರ ಪಾಟೀಲ, ಮುಖಂಡರಾದ ರಾಮಲಿಂಗ ಪಾಟೀಲ, ದಯಾನಂದ ಭೋಗನ್‌, ಅಜಿತ ಜಾಧವ, ನಾಗನಾಥ ಜಾಧವ, ಗವಡು ಪಾಟೀಲ, ಆನಂದ ಬೆಳಗಾಂವ ಪಾಟೀಲ, ಯಲ್ಲಪ್ಪ ಪಾಟೀಲ, ಮಾರುತಿ ಹೆಬ್ಬಾಳಕರ, ಗೋಪಾಲ ಕಾಮೆವಾಡಿ, ಹನುಮಂತ ಪಾಟೀಲ, ಸುರೇಶ ಪಾಟೀಲ, ಅನಿಲ್‌ ಪಾಟೀಲ, ಅರ್ಜುನ ಬೆಳಗಾಂವಕರ, ಪಿಡಿಒ ಸ್ಮಿತಾ ಚಂದರಗಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next