Advertisement

ಮದ್ಯ ತ್ಯಜಿಸಿ ಉತ್ತಮ ಜೀವನ ನಡೆಸಿ

12:29 PM Dec 31, 2017 | |

ಮೈಸೂರು: ಮನುಷ್ಯನನ್ನು ಜೀವಂತವಾಗಿ ಕೊಲ್ಲುವ ಮದ್ಯವನ್ನು ತ್ಯಜಿಸಿ, ಉತ್ತಮ ಜೀವನ ನಡೆಸಿ ಎಂದು ಶಾಸಕ ವಾಸು ಸಲಹೆ ನೀಡಿದರು. ಸುಬ್ರಹ್ಮಣ್ಯ ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ, ಬೆಳ್ತಂಗಡಿ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ,

Advertisement

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮೈಸೂರು ಮಹಾ ನಗರ ಪಾಲಿಕೆ,  ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ 1177ನೇ ಮದ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.  

ವೀರೇಂದ್ರ ಹೆಗ್ಗಡೆಯವರು, ದುಡ್ಡಿನ ಬಡತನ ಮತ್ತು ಬುದ್ಧಿಯ ಬಡತನ ಹೋಗಲಾಡಿಸಲು ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಇಂದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಮದ್ಯಪಾನದಂತಹ ದುಶ್ಚಟ ಮಾಡುವುದರಿಂದ ಅಂತಹ ವ್ಯಕ್ತಿ ಸಮಾಜದಿಂದ ಮತ್ತು ಕುಟುಂಬದಿಂದ ಸಂಕಷ್ಟಕ್ಕೆ ಒಳಗಾಗಿ ತನ್ನ ಹೆತ್ತವರು, ಕುಟುಂಬದ ಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ.

ಮದ್ಯಪಾನದಿಂದ ವ್ಯಕ್ತಿಯು ಜೀವನ ಪರ್ಯಂತ ಅನಾರೋಗ್ಯಕ್ಕೆ ತುತ್ತಾಗಿ ತಾನು ದುಡಿದ ಹಣವನ್ನು ಮದ್ಯಪಾನ ಮತ್ತು ಆಸ್ಪತ್ರೆ ಖರ್ಚಿಗೆ ಮೀಸಲಿಡಬೇಕಾಗುತ್ತದೆ. ಹೀಗಾಗಿ ದುಶ್ಚಟ ಬಿಟ್ಟು ಸಮಾಜದ ಒಳಿತಿಗಾಗಿ ಶ್ರಮಿಸೋಣ ಎಂದರು.

ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜಾದ್ಯಂತ1177 ಮದ್ಯವರ್ಜನ ಶಿಬಿರಗಳನ್ನು ಮಾಡುವ ಮೂಲಕ ಒಂದು ಲಕ್ಷಕ್ಕೂ ಅಧಿಕ ಮದ್ಯವ್ಯಸನಿಗಳ ಮನಸ್ಸನ್ನು ಪರಿವರ್ತನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೇರೇಪಿಸಲಾಗಿದೆ.

Advertisement

ಮೈಸೂರು ಜಿಲ್ಲೆಯಲ್ಲಿ 35 ಮದ್ಯವರ್ಜನ ಶಿಬಿರಗಳನ್ನು ಮಾಡುವ ಮೂಲಕ 3857 ಮದ್ಯವ್ಯಸನಿಗಳನ್ನು ಮದ್ಯ ಮುಕ್ತರನ್ನಾಗಿಸಲಾಗಿದೆ ಎಂದು ವಿವರಿಸಿದರು. ವಿಶ್ರಾಂತಿ ಕುಲಪತಿ ಪೊ›.ಕೆ.ಎಸ್‌.ರಂಗಪ್ಪ ಮಾತನಾಡಿ, ಸರ್ಕಾರ ಮಾಡಬೇಕಾದ ಅನೇಕ ಯೋಜನೆಗಳನ್ನು ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನುಷ್ಠಾನ ಮಾಡುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ಸಮಾಜದಲ್ಲಿ ಸಬಲರಾದವರು ಯಾರೂ ವ್ಯಸನಗಳಿಗೆ ಬಲಿಯಾಗುವುದಿಲ್ಲ. ದುರ್ಬಲವರ್ಗದವರಿಗೆ ಸರಿಯಾದ ಮಾರ್ಗದರ್ಶನ ಇಲ್ಲದೇ ಇರುವುದರಿಂದ ದುಶ್ಚಟಗಳಿಗೆ ವೇಗವಾಗಿ ಆಕರ್ಷಣೆಗೆ ಒಳಗಾಗುವುದನ್ನು ನಾವು ನೋಡುತ್ತೇವೆ. ಒಬ್ಬ ವ್ಯಕ್ತಿ ಮಾದಕ ವ್ಯಸನಿಯಾದರೆ ಕುಟುಂಬಕ್ಕೆ ಮಾತ್ರ ತಲೆನೋವಲ್ಲದೇ ಇಡೀ ಸಮಾಜಕ್ಕೆ ದೊಡ್ಡ ತಲೆನೋವಾಗುತ್ತದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲೆಯ ನಿರ್ದೇಶಕರಾದ ವಿ.ವಿಜಯ್‌ಕುಮಾರ್‌ ನಾಗನಾಳ, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶಿವಣ್ಣ, ರಮೇಶ್‌, ಶಿವಮಾದು, ಉದ್ಯಮಿಗಳಾದ ವಿದ್ಯಾಸಾಗರ್‌,  ಯೋಜನಾಧಿಕಾರಿಗಳಾದ ಆನಂದ್‌, ತಿಮ್ಮಯ್ಯನಾಯಕ್‌, ಶಿಬಿರಾಧಿಕಾರಿ ಗಣೇಶ್‌ ಆಚಾರ್ಯ, ಆರೋಗ್ಯ ಸಹಾಯಕಿ ನೇತ್ರಾವತಿ, ಮೇಲ್ವಿಚಾರಕಿ ಪ್ರೇಮಲತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next