Advertisement

ಸಿದ್ದರಾಮಯ್ಯ ಸಿಎಂ ಆಗಬಾರದಂತೇನಿಲ್ಲ,Urgent ಅಲ್ಲಿ ಆಗಲ್ಲ!: ಡಿಕೆಶಿ

02:04 PM Aug 29, 2018 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬಾರದು ಅಂತೇನಿಲ್ಲ. ಅವಸರದಲ್ಲಿ ಆಗುವುದಿಲ್ಲ  ಎಂದು ಸಚಿವ ಡಿ.ಕೆ ಶಿವಕುಮಾರ್‌ ಅವರು ಹೇಳಿಕೆ ನೀಡಿದ್ದಾರೆ. 

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ  ಈಗ ಮೈತ್ರಿ ಸರ್ಕಾರ ಇದೆ. ಅಧಿಕಾರಕ್ಕೆ ಬಂದು 3 ತಿಂಗಳು ಮಾತ್ರ ಆಗಿದೆ. ಇನ್ನು 4 ವರ್ಷ 9 ತಿಂಗಳು ಕುಮಾರಸ್ವಾಮಿ ಅವರು ಅಧಿಕಾರ ನಡೆಸಲಿದ್ದಾರೆ. ಆ ಬಳಿಕ ಯಾರು ಬೇಕಾದರು ಸಿಎಂ ಆಗಬಹುದು ಎಂದರು. 

ಸಿದ್ದರಾಮಯ್ಯ ಹೇಳಿಕೆ ವಿಚಾರ ಭಾರಿ ಚರ್ಚೆಗೆ ಕಾರಣವಾದ ಬಳಿಕ ಅವರು ಸ್ಪಷ್ಟೀಕರಣವನ್ನೂ ನೀಡಿ ನಾನು ಈಗ ಸಿಎಂ ಆಗುತ್ತೇನೆ ಅಂದಿದ್ದಲ್ಲ. ಮುಂದೆ ಜನ ಆಶೀರ್ವಾದ ನೀಡಿದರೆ ಸಿಎಂ ಆಗುತ್ತೇನೆ ಅಂದಿದ್ದು ಎಂದಿದ್ದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next