Advertisement

ಶಿಬಿರದಲ್ಲಿ ಕಲಿತೆ ಜೀವನ ಪಾಠ!

07:00 AM Sep 12, 2017 | Harsha Rao |

ಮೊದಲ ವರ್ಷದ ಡಿಗ್ರಿ ಅಂದ್ರೆ ಕೇಳಬೇಕಾ? ಎಲ್ಲಾ ಹೊಸತೇ. ಈ ಸೆಮಿಸ್ಟರ್‌ ಸಿಸ್ಟ್‌ಮ್‌, ಸಬೆjಕ್ಟ್$Õ, ಫ್ರೆಂಡ್ಸ್‌, ಬುಕ್ಸ್‌ ಎಲ್ಲಾ ಹೊಸತು. ಹಾಗೇ ಸೇರಿಕೊಂಡ ಎನ್ನೆಸ್ಸೆಸ್‌ ಕೂಡಾ…… ಎನ್ನೆಸ್ಸೆಸ್‌ನಲ್ಲೂ ಹೊಸಬರಿಗೆ ಎದುರಾಗಿದ್ದು ಬರೀ ಹೊಸತುಗಳೇ. ಶ್ರಮದಾನ, ಟೀಮ್‌, ಗ್ರೂಪ್‌ ಲೀಡರ್‌, ಸೀನಿಯರ್ಸ್‌, ಹೀಗೆ…..

Advertisement

ಹಾಗೂ ಹೀಗೂ ಎಕ್ಸಾಮ್ಸ್‌ ಮುಗಿಸಿ ಕ್ಯಾಂಪ್‌ಗೆ ಹೋಗುವವರ ಪಟ್ಟಿಗೆ ಕುತೂಹಲ, ಭಯ, ಹಿಂಜರಿಕೆಯಿಂದಲೇ ಹೆಸರು ಕೊಟ್ಟೆವು. ನೋಡ್ತಾ ನೋಡ್ತಾ ಕ್ಯಾಂಪ್‌ ದಿನ ಬಂದೇ ಬಿಡು¤. ಶೃಂಗೇರಿ ಸಮೀಪದ ದರೇಕೊಪ್ಪ ಎಂಬ ಊರಿನ ಪ್ರಾಥಮಿಕ ಶಾಲೆಯಲ್ಲಿ ಶಿಬಿರದ ಆಯೋಜನೆ ಆಗಿತ್ತು. ದರೇಕೊಪ್ಪಕ್ಕೆ ಬರಬೇಕು, ಬೆಳಗ್ಗೆ ಹತ್ತು ಗಂಟೆಯಿಂದಲೇ ರಿಜಿಸ್ಟ್ರೇಷನ್‌ ಅಂತ ಹೇಳಲಾಗಿತ್ತು. ಗಾಬರಿಯಲ್ಲಿ ಬೇಗ ಬೇಗ ದರೆಕೊಪ್ಪ ಶಾಲೆ ಸೇರಿಕೊಂಡೆವು. ಅಲ್ಲಿಂದ ಶುರುವಾಗಿದ್ದೇ ಹೊಸಲೋಕ.

ಮೊದಲ ದಿನ ಬೆಳಗ್ಗಿನಿಂದೂÉ ಅಲ್ಲೇ ಇದ್ದ ನನಗೆ ರಿಜಿಶೆóàಷನ್‌ ಆಗಿದ್ರೂ ಫ್ರೆಂಡ್ಸ್‌ ಬಂದಿಲ್ಲ, ಸೀನಿಯರ್ಸ್‌ ಸರಿಯಾಗಿ ಮಾತಾಡಿಸ್ಲಿಲ್ಲ ಅನ್ನೋ ಬೇಜಾರು ಜೊತೆಯಾಗಿತ್ತು. ಅಯ್ಯೋ, ಮನೇಗೆ ಹೋಗಿಬಿಡೋಣ ಅನ್ಸಿದ್ದು ಸುಳ್ಳಲ್ಲ. ಆಮೇಲೆ ಎಲ್ಲರೂ ಬಂದ್ರು. ಟೀಂ ಮಾಡಿ ಕಳುಹಿಸಿದ್ರು.

ಮರುದಿನ ಬೇಗ ಎದ್ದು ಪ್ರಾರ್ಥನೆ, ಧ್ವಜಾರೋಹಣ, ಆಟ, ಉಪಹಾರ, ಶ್ರಮದಾನ, ಸ್ನಾನ, ಊಟ, ಗೋಷ್ಠಿ, ಲಘು ಉಪಹಾರ, ಸಾಂಸ್ಕೃತಿಕ ಕಾರ್ಯಕ್ರಮ, ಶಿಬಿರ, ಸಂಸತ್ತು ಹೀಗೆ ಎಲ್ಲಾ ಮುಗಿಸಿ ರಾತ್ರಿ ಊಟ ಮಾಡಿ ಹಿಂತಿರುಗುವಾಗ ಹೊಸ ಗ್ರೂಪ್‌ ಮೆಂಬರ್ಸ್‌ಗಳಿಗೆ ಅಡ್ಜಸ್ಟ್‌ ಆಗದೆ, ಇತ್ತ ಫ್ರೆಂಡ್ಸ್‌ ಮುಖ ನೋಡೋಕೂ ಟೈಮ್‌ ಸಿಗದೇ ಪರದಾಡಿದ್ವಿ.
ದಿನ ಕಳೆಯುತ್ತಾ ಒಬ್ಬೊಬ್ಬರಾಗಿ ಶ್ರಮಾದಾನದ ಜೊತೆಗೆ ತರಲೆ ಮಾಡುತ್ತಲೇ ಪರಿಚಯ ಆದ್ವಿ. ಸ್ಟೇಜ್‌ ಟೀಮ್‌ ಅಂತ ಬಂದಾಗ ಅದುವರೆಗೂ ಸ್ಟೇಜ್‌ ಅಂದ್ರೇನೆ ನಡುಗುತಿದ್ದವರೆಲ್ಲಾ ಚಿಕ್ಕ-ಚಿಕ್ಕ ಕೆಲಸ ವಹಿಸಿಕೊಂಡು  ಪ್ರಾರ್ಥನೆ, ಸ್ವಾಗತ, ಚಿತ್ರವಿಶ್ಲೇಷಣೆ, ವ್ಯಕ್ತಿಪರಿಚಯ, ವಂದನಾರ್ಪಣೆ, ನಿರೂಪಣೆ ಅಂತೆಲ್ಲಾ ಓಡಾಡಿದ್ವಿ.

ಗ್ರೂಪ್‌ ಮೆಂಬರ್ಸ್‌ ಆಗಿದ್ದವರೆಲ್ಲ ಬರು ಬರುತ್ತಾ ಸ್ವಂತ ಅಕ್ಕ, ಅಣ್ಣಂದಿರಿಗಿಂತ ಹತ್ತಿರದವರು ಅನ್ನಿಸಿಬಿಟ್ಟರು. ಅವರ ಜೊತೇನೇ ತರಲೆ, ತಮಾಷೆ, ಸಿಟ್ಟು-ರಾಜಿ, ಊಟ-ಆಟ, ಶ್ರಮದಾನ ಎಲ್ಲಾ. ಮುಖ್ಯ ವಿಷಯವೇ ಶ್ರಮದಾನ. ಮಣ್ಣು ಹೊತ್ತು, ಸೊಪ್ಪು ಕಡಿದು, ನೀರು ಹೊತ್ತು … ಆಹಾ, ನಾವು ಮಾಡಿದ ಕೆಲಸ ಒಂದೇ-ಎರಡೇ? ಮನೆಯಲ್ಲಿ ಮಾಡಿಯೇ ಇರದ ಎಷ್ಟೋ ಕೆಲಸದಲ್ಲಿ ಇಲ್ಲಿ ಎಕ್ಸ್‌ಪರ್ಟ್‌ ಆಗಿಹೋದ್ವಿ.

Advertisement

ಫ‌ುಡ್‌ ಟೀಮ್‌ ಅಂತ ನೀರು ಹೊತ್ತಿದ್ದು, ಊಟ ಮಾಡಿ ತಟ್ಟೆ ತೊಳೆದಿದ್ದು, ಎಲ್ಲರಿಗೂ ಬಡಿಸಿದ್ದು, ಚಳಿಯಲ್ಲಿ ನಡುಗಿದ್ದು, ಬಿಸಿಲಲ್ಲಿ ಬಾಡಿದ್ದು, ಗೋಷ್ಠಿಗಳಲ್ಲಿ ತರಲೆ ಮಾಡಿದ್ದು, ಜೊತೆಗಾರರಿಗೆ ಪ್ರಶ್ನೆ ಕೇಳಿ ಸತಾಯಿಸಿದ್ದು, ನಿದ್ದೆ ಮಾಡಿದ್ದು, ಬೈಗುಳ ಕೇಳಿದ್ದು,… ಓ… ಹೇಳ್ತಾ ಹೋದರೆ ಒಂದು ವಾರದ ಕಥೆ ಮುಗಿಸೋಕೆ ಒಂದು ತಿಂಗಳೇ ಬೇಕು.
 ಕಡೇದಿನ ಶಿಬಿರ ಮುಗಿದಾಗ, ಶಿಬಿರದ ಕಡೇ ಟೀ ಅಂತ ಟೀ ಕುಡಿಯುವಾಗ ಸೀನಿಯರ್ಸ್‌ಗಳು ಖುಷಿಗೋ-ಬೇಜಾರಿಗೋ ಕಣ್ಣೀರು ಹಾಕುತ್ತಿರುವಾಗ ನಮ್ಮ ಕಣ್ಣಿಂದಲೂ ಕಣ್ಣೀರು ಇಣುಕಿದ್ದು ಸುಳ್ಳಲ್ಲ. ಅಷ್ಟೇ ಅಲ್ಲ ಮನೆಗೆ ಬಂದಮೇಲೂ ನಾವಿನ್ನೂ ಕ್ಯಾಂಪ್‌ನ ಅಭ್ಯಾಸ ಬಿಟ್ಟಿಲ್ಲ. ಊಟದ ತಟ್ಟೆಯಿಂದ ಹಿಡಿದು, ಟಿ.ವಿ. ಬಿಟ್ಟಿರೋವರೆಗೂ ಹಿಂದೆಂದೂ ಮಾಡಿರದ ಕೆಲಸಗಳ ವಿಶಿಷ್ಟ ಅನುಭವ ನೀಡಿದ ಎನ್ನೆಸ್ಸೆಸ್‌ ಶಿಬಿರಕ್ಕೆ ದೊಡ್ಡ ಥ್ಯಾಂಕ್ಸ್‌.

ಹಲವು ಖುಷಿ, ತಮಾಷೆ, ತರ್ಲೆ, ಕೆಲವರ ಕೊನೇ ಕ್ಷಣದ ಕಣ್ಣೀರುಗಳೊಂದಿಗೆ ಕ್ಯಾಂಪ್‌ ಮುಗಿಯಿತು. ಇನ್ನೊಂದು ಕ್ಯಾಂಪ್‌ ಯಾವಾಗ ಬರುತ್ತದೋ ಎಂದು ಕಾತುರದಲ್ಲಿ ಕಾಯುತ್ತಾ……

 – ಸೌಮ್ಯ ವಿ. ಎಲ್‌., ಶೃಂಗೇರಿ ಪ್ರಥಮ ಬಿ.ಕಾಂ.ಶ್ರೀ ಜೆ.ಸಿ.ಬಿ.ಎಂ.ಕಾಲೇಜ್‌

Advertisement

Udayavani is now on Telegram. Click here to join our channel and stay updated with the latest news.

Next