Advertisement

ಚಾಕೊಲೇಟ್‌ ಜೊತೆಗೇ ಕಲಿಕೆಯೂ ಆಗುತ್ತಿತ್ತು!

04:42 AM Jul 07, 2020 | Lakshmi GovindaRaj |

ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ಅವರ ವ್ಯಕ್ತಿತ್ವ ಬಹು ಕುತೂಹಲಕರವಾದದ್ದು. ಅವರನ್ನು ಕಂಡವರು ಹೇಳಿರುವ ಹಲವಾರು ಸಂಗತಿಗಳು, ಕಾರ್ಯಪ್ಪನವರನ್ನು ವಿಶಿಷ್ಟ ವ್ಯಕ್ತಿಯ ರೂಪದಲ್ಲಿ ನಮ್ಮೆದುರು ನಿಲ್ಲಿಸುತ್ತವೆ.

Advertisement

ಕಾರ್ಯಪ್ಪನವರ ಜೇಬಿನಲ್ಲಿ ಸದಾ ಒಂದು ಬಾಚಣಿಗೆ  ಇದ್ದೇ ಇರುತ್ತಿತ್ತು. ಬೀದಿಯಲ್ಲಿ ಅಡ್ಡಾಡುವ ಪುಟ್ಟ ಮಕ್ಕಳು ತಲೆ ಕೆದರಿಕೊಂಡಿದ್ದನ್ನು ಕಂಡರೆ, ಸಮಯವಿದ್ದಲ್ಲಿ ಕಾರು ನಿಲ್ಲಿಸಿ ಇಳಿದು, ಆ ಮಕ್ಕಳ ತಲೆಕೂದಲನ್ನು ಬಾಚಿ, ಅವರಿಗೆ ಚಾಕೊಲೇಟ್‌ ಕೊಟ್ಟು, ನಾಳೆಯಿಂದ ಇಷ್ಟೇ ನೀಟ್‌ ಆಗಿ ಇರಬೇಕೆಂದು ಎಚ್ಚರಿಸಿ ಮುಂದಕ್ಕೆ ಹೋಗುತ್ತಿದ್ದರು.

ಅವರ ಕೋಟಿನ ಜೇಬಿನಲ್ಲಿ ಯಾವಾಗಲೂ ಚಾಕೊಲೇಟ್‌ಗಳು ಇರುತ್ತಿದ್ದವು. ರಸ್ತೆ ಬದಿಯಲ್ಲಿ ಮಕ್ಕಳು ಹೋಗುತ್ತಿದ್ದರೆ,  ಭಾರತದ ಧ್ವಜಕ್ಕೆ ಸೆಲ್ಯೂಟ್‌ ಮಾಡುವುದನ್ನು ಹೇಳಿಕೊಟ್ಟು, ಅವರಿಗೂ ಚಾಕೊಲೇಟ್‌ ಕೊಟ್ಟು ಹೋಗುವುದು ಕಾರ್ಯಪ್ಪನವರ ಮೆಚ್ಚಿನ ಕೆಲಸಗಳಲ್ಲಿ ಒಂದಾಗಿತ್ತು…

Advertisement

Udayavani is now on Telegram. Click here to join our channel and stay updated with the latest news.

Next