Advertisement

ಶರಣ-ಸಂತರ ವಚನ ತಿಳಿಯಿರಿ

02:54 PM Nov 27, 2018 | Team Udayavani |

ಶಹಾಪುರ: ದೇವರು ಧರ್ಮಗಳು ನಮ್ಮ ವಿಕಾಸಕ್ಕೆ ಇರಬೇಕು. ವಿನಃ ನಮ್ಮನ್ನು ಭಯದ ಕಂದಕಕ್ಕೆ ತಳ್ಳುವುದಕ್ಕೆ ಅಲ್ಲ. ನಾವುಗಳು ಸತ್ಯದ ಮಾರ್ಗದಲ್ಲಿ ನಡೆಯುವದಾದರೆ ಯಾರ ಭಯವೇಕೆ. ನಿರ್ಭಯವೇ ಜೀವನ. ಭಯವೇ ಮರಣ ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ಜೇವರ್ಗಿ ಬಸವ ಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ ಹೇಳಿದರು.

Advertisement

ಪಟ್ಟಣದ ಬಸವಮಾರ್ಗ ಪ್ರತಿಷ್ಠಾನ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಆಯೋಜಿಸಿದ್ದ ತಿಂಗಳ ಬಸವ ಬೆಳಕು 81ರ ಸಭೆಯಲ್ಲಿ, ಬರಹಗಾರ, ಚಿಂತಕ ಜ.ಹೊ. ನಾರಾಯಣಸ್ವಾಮಿ ಸ್ಮರಣಾರ್ಥ ನಡೆದ “ನಾನು ಹೇಗೆ ಲಿಂಗಾಯತನಾದೆ’ ಎಂಬ ವಿಷಯ ಕುರಿತ ಅವರು ಮಾತನಾಡಿದರು. 

ನಾನು ವಚನ ಸಾಹಿತ್ಯದ ಸಮೀಪ ಬರುವುದಕ್ಕಿಂತ ಮೊದಲು ದಯವೇ ಧರ್ಮದ ಮೂಲ ಎಂದು ಗೊತ್ತಿರಲಿಲ್ಲ. ಧರ್ಮವೆಂದರೆ ದೇವರು ಎಂದು ತಿಳಿದುಕೊಂಡಿದ್ದರಿಂದ ಸಾಕಷ್ಟು ದೇವರುಗಳಿಗೆ ಹರಕೆ ಹೊತ್ತೆ. ಕಾಣಿಕೆ ನೀಡಿದೆ. ಕಾಯಿ ಕರ್ಪೂರ ಹಚ್ಚಿದೆ. ಒಂದು ಸಲ ನನ್ನ ಮನೆಗೆ ಬಂದ ಅರಿವಿನ ಜಂಗಮನೊಬ್ಬ ತೆಗೆದ ನನ್ನೊಳಗಿನ ಕಳೆಗೆ ಬಸವಾದಿ ಶರಣರು ನಮ್ಮ ಮನೆ ಮನವನ್ನು ಪ್ರವೇಶಿದರು. ಆಗ ನನ್ನ ಬದಲಾವಣೆ ಆರಂಭವಾಯಿತು. ಅಂದೇ ದಯವೇ ಧರ್ಮದ ಮೂಲವೆಂದರೆ ಏನು ಎಂಬುದು ಅರ್ಥವಾಯಿತು.

ಶರಣರ ತತ್ವಗಳನ್ನು ಅನುಸರಿಸುತ್ತ ನಡೆದೆ, ಹಲವಾರು ಮೌಡ್ಯಗಳನ್ನು ತೊರೆದು ಕುಟುಂಬ ಸಮೇತ ದೂರ ಬಂದಿದ್ದೇನೆ. ಹೀಗಾಗಿ ನನ್ನನ್ನು ಇಂದು ಯಾರೂ ಶೋಷಣೆಗೆ ಗುರಿ ಪಡಿಸುವ ಸಂದರ್ಭವೇ ಇಲ್ಲ. ಕಾಯಕವೇ ಕೈಲಾಸ ಎಂದು ನಂಬಿ ಕೆಲಸ ಮಾಡುತ್ತ ನಡೆದಿದ್ದೇವೆ ಎಂದರು.
 
ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣರ ವಚನಗಳನ್ನು ಓದುತ್ತ ಹೋದರೆ ನಮ್ಮನ್ನು ಯಾರು, ಯಾವ ಯಾವ ಹುನ್ನಾರಗಳಿಂದ ನಮ್ಮನ್ನು ವಂಚಿಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ ಎಂದರು.

ಸಂತೋಷ ಹೂಗಾರ ಮಾತನಾಡಿ, ಶಿವನ ಸ್ವರೂಪ ಎಲ್ಲರೊಳಗೂ ಇದೆ. ಹೀಗಾಗಿ ಕೇವಲ ಗುಡಿ ಗುಂಡಾರಗಳಲ್ಲಿಯೇ ದೇವರನ್ನು ಹುಡುಕುವುದು ಪೂಜಿಸುವುದು ನಮ್ಮ ಅಜ್ಞಾನದ ಪರಮಾವ ಎಂದರು.

Advertisement

ಸಭೆಯ ಅಧ್ಯಕ್ಷತೆಯನ್ನು ಎಸ್‌.ಡಿ.ಪಿ.ಐ.ಯಾದಗಿರಿ ಜಿಲ್ಲಾ ಅಧ್ಯಕ್ಷ ಸೈ.ಇಸಾಕ್‌ ಹುಸೇನ್‌ ವಹಿಸಿದ್ದರು. ವೇದಿಕೆಯ ಮೇಲೆ ಶ್ರೀದೇವಿ ಸಂಗಣ್ಣಗೌಡ ಇದ್ದರು. ಡಾ| ಮಹೇಶ್‌ ಗಂವ್ಹಾರ, ವೀರೇಶ ಕರಕಳ್ಳಿ ಹಾಗೂ ಸಿದ್ಧರಾಮ ಹೊನ್ಕಲ್‌ರನ್ನು ಸತ್ಕರಿಸಲಾಯಿತು.

ಗುರಮ್ಮ ವೀರಣ್ಣಗೌಡ ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಸಭೆ ಉದ್ಘಾಟಿಸಿದರು. ಸಂಗಣ್ಣ ಗುಳಗಿ ಸ್ವಾಗತಿಸಿದರು. ನೀಲಕಂಠ ಬಡಿಗೇರ, ಮಹಾದೇವಪ್ಪ ಗಾಳೇನೋರ, ಸುಮಿತ್ರ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಲ್ಲಪ್ಪ ನಾಡಗೌಡ, ಸಿದ್ರಾಮಯ್ಯ ರಾಮಗಿರಿಮಠ, ಪಂಪಣ್ಣಗೌಡ ಮಳಗ, ಭೀಮಣ್ಣ ಮೇಟಿ, ಮಲ್ಲು ಗುಡಿ, ಗುರುಲಿಂಗಪ್ಪ ಸರಶೆಟ್ಟಿ, ದುರ್ಗಪ್ಪ ನಾಯಕ, ಶಿವಣ್ಣಗೌಡ ಹಂಗರಗಿ, ನಿಂಗಣ್ಣ ಸಜ್ಜನ, ಹಣಮಂತ ಕೊಂಗಂಡಿ, ದಾವಲಸಾಬ ನದಾಫ್‌, ಪಟ್ಟಣಶೆಟ್ಟಿ ದಂಪತಿಗಳು ಶಾಂತಾ ಕಾಕನಾಳೆ, ಗುರುಬಸವಯ್ಯ ಗದ್ದುಗೆ, ಶಂಕರಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next