Advertisement

ಅಕ್ಷರ ಕಲಿತು ಜ್ಞಾನವಂತರಾಗಿ

07:04 AM Feb 01, 2019 | Team Udayavani |

ಬಂಗಾರಪೇಟೆ: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಆಧುನಿಕ ಯುಗದಲ್ಲಿ ಇನ್ನೂ ಅನಕ್ಷರತೆ ಜೀವಂತವಾಗಿರುವುದು ಅಭಿವೃದ್ಧಿಗೆ ಮಾರಕ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ವಿಷಾದಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಕೋಲಾರ ಜಿಪಂ, ಲೋಕ ಶಿಕ್ಷಣ ಸಮಿತಿ ಹಾಗೂ ಬಂಗಾರಪೇಟೆ ಫೋಕಸ್‌ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮೂಲ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಭರವಸೆ: ಅಕ್ಷರಸ್ಥರಾಗಲು ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂ ಡಿದೆ. ಆದರೆ, ಇದರ ಪ್ರೇರಕರಿಗೆ ಗೌರವ ಧನ ನೀಡದೆ ಇರುವುದು ದುರಾದೃಷ್ಟಕರ. ಸರ್ಕಾರ ಕೆಲವು ಅನಗತ್ಯ ಯೋಜನೆಗಳಿಗೆ ಕೋಟ್ಯಂತರ ಹಣ ಮೀಸಲಿಟ್ಟಿದೆ. ಆದರೆ ಸಾಕ್ಷರತಾ ಕಾರ್ಯಕ್ರಮಕ್ಕೆ ಮಾತ್ರ ಹಣ ಮೀಸಲಿಡದೆ ಇರುವುದು ಸರಿಯಿಲ್ಲ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುವೆ ಎಂದರು.

ಜಿಲ್ಲಾ ಲೋಕ ಶಿಕ್ಷಣಾಧಿಕಾರಿ ಎಂ.ಕೆ.ಶಶಿಕಲಾ, ಸಮಾಜದಲ್ಲಿ ಸಮಾನತೆಗಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ. ಅಕ್ಷರ ಜ್ಞಾನವಿಲ್ಲದಿದ್ದರೆ ಸರ್ಕಾರದ ಸೌಲಭ್ಯಗಳ ವಂಚಿತರಾಗಿ ಮಧ್ಯವರ್ತಿಗಳ ಪಾಲಾಗುತ್ತದೆ ಎಂದು ಎಚ್ಚರಿಸಿದರು. ಆತ್ಮವಿಶ್ವಾಸದಿಂದ ವಿದ್ಯೆಯನ್ನು ದಾನ ಮಾಡುವ ಗುಣ ನಮ್ಮದಾಗಿರಬೇಕು, ನಮ್ಮಲ್ಲಿರುವ ವಿದ್ಯೆಯನ್ನು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾ ಗಿಸುವ ಪ್ರಾಮಾಣಿಕ ಪಯತ್ನ ನಮ್ಮದಾ ಗಿರಬೇಕೆಂದರು.

ಲಾಭ ನಿರೀಕ್ಷೆ ಮಾಡ ಬಾರದು, ಸೇವಾ ಮನೊಧೀಭಾವ ಸಮಾ ಜವನ್ನು ತಿದ್ದುವ ಕೆಲಸವೆಂದು ಭಾವಿಸ ಬೇಕೆಂದರು. ತಾಪಂ ಇಒ ಡಾ.ಸುಬಾ ನ್‌, ಫೋಕಸ್‌ ಸಂಸ್ಥೆ ಅಧ್ಯಕ್ಷ ಎ.ಹರೀಶ್‌, ಸಬ್‌ ಇನ್ಸ್‌ಪೆಕ್ಟರ್‌ ಆರ್‌.ದಯಾನಂದ್‌ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಜಯಶ್ರೀದೇವಿ, ಶಿಕ್ಷಕ ನಾರಾಯಣಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next