Advertisement
ಕಾರ್ಕಳ ಪುರಸಭೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಒದಗಿಸಲು ಇಲ್ಲಿನ ಬಂಡಿಮಠದಲ್ಲಿ ನೀರಿನ ಟ್ಯಾಂಕ್ ನಿರ್ಮಿಸ ಲಾ ಗಿದ್ದು, 10 ಲಕ್ಷ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇನ್ನೊಂದು 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ರಾಮಸಮುದ್ರದಲ್ಲಿದೆ. ಇವೆರಡು ಟ್ಯಾಂಕ್‌ಗಳು ಪುರಸಭೆ ವ್ಯಾಪ್ತಿಯ ಜನರಿಗೆ ನೀರು ಹರಿಸುವ ಮೂಲ ಟ್ಯಾಂಕ್‌ಗಳು.
Related Articles
Advertisement
ಬಂಡಿಮಠ ಟ್ಯಾಂಕ್‌ಗೆ ಪಕ್ಕದಲ್ಲಿರುವ ಸಂಪ್‌ನಿಂದ ಪಂಪ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್ ತುಂಬಲು 7 ತಾಸು ಹಿಡಿಯುತ್ತದೆ. ಕಳೆದ ವರ್ಷ ಸಂಪ್‌ನಲ್ಲಿ ದೋಷ ಕಂಡು ಅಪಾರ ಪ್ರಮಾಣದಲ್ಲಿ ನೀರು ಸೋರಿಕೆಯಾಗಿ ಚರಂಡಿ ಸೇರಿದ ಘಟನೆ ನಡೆದಿತ್ತು ಎಂದು ಸ್ಥಳೀಯರು ಸ್ಮರಿಸಿಕೊಳ್ಳುತ್ತಾರೆ.
ರಾಮ ಸಮುದ್ರದಲ್ಲಿ ಕೂಡ ಧಾರಾಳ ನೀರಿದ್ದು ಬಂಡಿಮಠ ಮತ್ತು ರಾಮ ಸಮುದ್ರ ಈ ಎರಡು ಕಡೆ ಟ್ಯಾಂಕ್‌ಗಳಲ್ಲಿ ಇವೆರಡು ಕಡೆಗಳ ನೀರಿನ ಮೂಲಗಳಿಂದ ನೀರು ಹರಿಸಿ, ಸಂಗ್ರಹಿಸಿ ಪುರಸಭೆಯಾದ್ಯಂತ ವಾಸವಿರುವ ಜನರ ನೀರಿನ ದಾಹ ತೀರಿಸಲಾಗುತ್ತಿದೆ.
ಪುರಸಭೆ ವ್ಯಾಪ್ತಿಯಲ್ಲಿ ಅಪಾರ ಜನಸಂಖ್ಯೆಯಿದ್ದು, ದಿನದಿಂದ ದಿನಕ್ಕೆ ಜನಸಾಂದ್ರತೆ ಹೆಚ್ಚುತ್ತಿದೆ. ಜತೆಗೆ ನಗರ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ವ್ಯಾಪಾರ ವಹಿವಾಟುಗಳು ಹೆಚ್ಚಿವೆ. ಹೊಟೇಲ್ ವಿವಿಧ ಉದ್ಯಮಗಳು ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚುತ್ತಲಿದೆ. ಗೃಹ ಬಳಕೆಗೆ ಮಾತ್ರವಲ್ಲದೆ ಕಮರ್ಷಿಯಲ್ ಆಗಿಯೂ ನೀರು ಸಾಕಷ್ಟು ಬಳಕೆಗೆ ಅಗತ್ಯವಾಗಿದೆ. ನಳ್ಳಿ ನೀರು ಸರಬರಾಜುವಿನಿಂದ ಪುರಸಭೆಗೂ ಆದಾಯವಿದೆ. ಇಲ್ಲಿ ಕಾಲ ಕಾಲಕ್ಕೆ ಮಳೆ ಬರುತ್ತಿದ್ದರೂ ಕಡು ಬೇಸಗೆಯ ದಿನಗಳಲ್ಲಿ ನೀರಿನ ಮೂಲಗಳು ಬತ್ತಿ ಹೋಗಿ ನೀರಿನ ತಾಪತ್ರಯಗಳು ಎದುರಾಗುತ್ತವೆ. ಹೀಗಾಗಿ ತೊಟ್ಟು ಹನಿ ನೀರು ಪೋಲಾದರೂ ಇದರಿಂದ ನಷ್ಟವಾಗುತ್ತದೆ.
ಟ್ಯಾಂಕ್‌ನಲ್ಲಿ ನೀರಿನ ಸೋರಿಕೆ ಹೆಚ್ಚಿಸಿದರೆ ಮುಂದೆ ಇಡೀ ನಗರಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ ಎನ್ನುವ ಆತಂಕ ಪುರಸಭೆ ಜನತೆಯಲ್ಲಿ ಶುರುವಾಗಿದೆ. ದೊಡ್ಡ ಮಟ್ಟಿನ ಸಮಸ್ಯೆ ಎದುರಾಗುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಸ್ಥಳಿಯರು.
ನೀರಿನ ಮಿತಬಳಕೆ, ನೀರಿನ ಸಂರಕ್ಷಣೆ ಜಾಗƒತಿ ಕಾರ್ಯಾಗಾರ ಎಂದೆಲ್ಲ ಕಾರ್ಯಕ್ರಮಗಳನ್ನು ನಡೆಸುತ್ತಿರುವುದರ ಜತೆಗೆ ಪೋಲಾಗುವ ನೀರನ್ನು ತಡೆಯುವ ಪ್ರಯತ್ನಗಳು ನೀರಾವರಿ ಹಾಗೂ ಸಂಬಂಧಿಸಿದ ಇಲಾಖೆ ಕಡೆಯಿಂದ ಆಗಬೇಕು ಎನ್ನುತ್ತಾರೆ ಜಲತಜ್ಞರು.
ನೀರು ಸೋರಿಕೆಗೆ ತೊಟ್ಟಿ ಶಿಥಿಲವಾಗಿರುವುದು ಕಾರಣ. ಹಳೆಯದಾದ ನೀರಿನ ಟ್ಯಾಂಕ್ ಅದು. ಅದರ ದುರಸ್ತಿಗೆ 10 ಲಕ್ಷ ರೂ. ಹಣದ ಆವಶ್ಯಕತೆ ಇದೆ. ದುರಸ್ತಿ ನಡೆಸುವ ಕುರಿತು ಗಮನ ಹರಿಸುತ್ತೇವೆ. -ರೇಖಾ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ
-ಬಾಲಕೃಷ್ಣ ಭೀಮಗುಳಿ