Advertisement
ಅಂಕಪಟ್ಟಿಯ ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ನಲ್ಲಿ ಆಡಲಿವೆ. ಸದ್ಯ 18 ಅಂಕ ಹೊಂದಿರುವ ಸನ್‌ರೈಸರ್ ಹೈದರಾಬಾದ್, ತಲಾ 16 ಅಂಕ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್‌ರೈಡರ್ ತಂಡ ಪ್ಲೇ ಆಫ್ಗೆ ಪ್ರವೇಶ ಪಡೆದಿದೆ. ಪ್ಲೇ ಆಫ್ಗೆ ತೇರ್ಗಡೆಯಾಗುವ ಇನ್ನೊಂದು ತಂಡಕ್ಕೆ ರಾಜಸ್ಥಾನ್ ಮತ್ತು ಪಂಜಾಬ್ ನಡುವೆ ಸ್ಪರ್ಧೆಯಿದೆ. ಒಂದು ವೇಳೆ ಲೀಗ್‌ನ ಅಂತಿಮ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪಂಜಾಬ್ ಬೃಹತ್ ಅಂತರದಿಂದ ಗೆದ್ದರೆ ಅದು ನಾಲ್ಕನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶಿಸಲಿದೆ. ಇಲ್ಲದಿದ್ದರೆ ರಾಜಸ್ಥಾನ್‌ಗೆ ಈ ಅವಕಾಶ ಲಭಿಸಲಿದೆ.
ಪ್ಲೇ ಆಫ್ನ ಪಂದ್ಯಗಳು ಮೇ 22ರಿಂದ ಆರಂಭವಾಗಲಿವೆ. ಮೇ 21 ಐಪಿಎಲ್‌ಗೆ ವಿಶ್ರಾಂತಿಯ ದಿನವಾಗಿದೆ. ಮೇ 22ರಂದು ಮೊದಲ ಕ್ವಾಲಿಫೈಯರ್ ಪಂದ್ಯ ಮುಂಬಯಿಯಲ್ಲಿ ನಡೆಯಲಿದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಹೈದರಾಬಾದ್ ಮತ್ತು ಚೆನ್ನೈ ಈ ಪಂದ್ಯದಲ್ಲಿ ಆಡಲಿದ್ದು ಗೆದ್ದ ತಂಡ ನೇರವಾಗಿ ಫೈನಲಿಗೇರಲಿದೆ. ಮೇ 23ರಂದು ಕೋಲ್ಕತಾದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದ್ದು ಕೆಕೆಆರ್ ಮತ್ತು ರಾಜಸ್ಥಾನ ಹೋರಾಡಲಿವೆ. ಈ ಪಂದ್ಯದಲ್ಲಿ ಸೋತ ತಂಡ ಹೊರಬೀಳಲಿದೆ. ಗೆದ್ದ ತಂಡ ಮೇ 25ರಂದು ಕೋಲ್ಕತಾದಲ್ಲಿಯೇ ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿ ಫೈಯರ್‌ನಲ್ಲಿ ಸೋತ ತಂಡದ ಜತೆ ಆಡಲಿದೆ. ಇಲ್ಲಿ ಗೆದ್ದ ತಂಡ ಮೇ 27ರಂದು ನಡೆಯುವ ಫೈನಲ್ ಹೋರಾಟದಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.
Related Articles
Advertisement