Advertisement

ಲೀಫ್‌ ಆರ್ಟ್‌ ಕಲಾವಿದ ಅಕ್ಷಯ್‌ ಸಾಧನೆಗೆ ಡಾ|ಹೆಗ್ಗಡೆ ಪ್ರಶಂಸೆ

09:13 AM Jul 29, 2020 | mahesh |

ಬೆಳ್ತಂಗಡಿ: ಎಲೆಗಳ ಮೇಲೆ ಚಿತ್ರ ಮೂಡಿಸುವ (ಲೀಫ್‌ ಆರ್ಟ್‌) ಕಲೆಯಲ್ಲಿ ಅಕ್ಷಯ್‌ ಎಂ. ಕೋಟ್ಯಾನ್‌ ಮೂಡುಬಿದಿರೆ ಸಾಧನೆ ಮಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರ ಚಿತ್ರವನ್ನು ಅಶ್ವತ್ಥ ಎಲೆಗಳಲ್ಲಿ ಮೂಡಿಸುವ ಮೂಲಕ ಡಾ| ಹೆಗ್ಗಡೆ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

ಮೂಲತಃ ಮೂಡುಬಿದಿರೆಯ ಕಲ್ಲಬೆಟ್ಟುವಿನ ಮೋಹನ್‌ ಬಿ. ಪೂಜಾರಿ ಹಾಗೂ ಶೋಭಾ ಕೋಟ್ಯಾನ್‌ ದಂಪತಿಯ ಪುತ್ರ ಅಕ್ಷಯ್‌ ಪ್ರಸ್ತುತ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ವಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಕಾಗದದ ಮೂಲಕ ಚಿತ್ರ ಆರಂಭಿಸಿದ ಇವರು ಕಳೆದ ನಾಲ್ಕು ತಿಂಗಳುಗಳಿಂದ ಎಲೆಗಳ ಮೇಲೆ ಚಿತ್ರ ಮೂಡಿಸಿ (ಲೀಫ್‌ ಆರ್ಟ್‌) ಯಶಸ್ವಿಯಾಗಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಡಾ| ಹೆಗ್ಗಡೆ, ನಾರಾಯಣಗುರು, ಬೆಳ್ತಂಗಡಿ ಶಾಶಕ ಹರೀಶ್‌ ಪೂಂಜ ಸಹಿತ ಶಾಸಕರನೇಕರ ಚಿತ್ರ, ಸಿನೆಮಾ ನಟರು, ದೇವರ ಚಿತ್ರಗಳನ್ನು ಎಲೆಗಳಲ್ಲಿ ಮೂಡಿಸಿದ್ದಾರೆ.

ಬಹುಮುಖ ಪ್ರತಿಭೆ
ಅಕ್ಷಯ್‌ ಪೆನ್ಸಿಲ್‌ ಮೊನೆಗಳಲ್ಲಿ ಆಕೃತಿ, ಸೋಪಿನಲ್ಲಿ ಆಕೃತಿ, ಸ್ಪೀಡ್‌ ಪೈಂಟಿಂಗ್‌, ರಂಗೋಲಿ, ಮರಳಿನಲ್ಲಿ ಆಕೃತಿ, ಡಿಜಿಟಲ್‌ ಪೈಂಟಿಂಗ್‌ ಮೊದಲಾದ ಅನೇಕ ಬಗೆಗಳ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ.

 ಡಾ| ಹೆಗ್ಗಡೆ ಪ್ರೋತ್ಸಾಹ ಪ್ರೇರಣೆ
ಕಲೆಯಲ್ಲಿ ಬಾಲ್ಯದಿಂದಲೂ ಆಸಕ್ತಿ ಇತ್ತು. ಎಲೆ ಮೇಲೆ ಆಕೃತಿಗೂ ಮುನ್ನ ಕಾಗದದಲ್ಲಿ ಅಭ್ಯಾಸ ನಡೆಸಿದ್ದೆ. ನಾಲ್ಕು ತಿಂಗಳ ಹಿಂದೆ ಎಲೆಗಳಲ್ಲಿ ಆಕೃತಿ ಬಿಡಿಸಲು ಮುಂದಾದೆ. ಡಾ| ಹೆಗ್ಗಡೆ ಅವರ ಪ್ರೋತ್ಸಾಹ, ಆಶೀರ್ವಾದ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡಿದೆ.
ಅಕ್ಷಯ್‌ ಎಂ.ಕೋಟ್ಯಾನ್, ‌ ಲೀಫ್ ಆರ್ಟ್‌ ಕಲಾವಿದ

Advertisement

ಅತ್ಯಪೂರ್ವ ಕಲಾ ಸಾಧನೆ
ಅಕ್ಷಯ್‌ ಕೋಟ್ಯಾನ್‌ ಅವರು ಮೂಡಿಸಿದ ಎಲೆಗಳ ಮೇಲಿನ ಚಿತ್ರಕಲೆ ನನಗೆ ಮತ್ತು ಮನೆಮಂದಿಗೆ ಬಹಳಷ್ಟು ಇಷ್ಟವಾಗಿದೆ. ನನಗೆ ಅನೇಕರು ಅವರ ಕಲೆಯನ್ನು ಪ್ರಶಂಸಿಸಿ ಸಂದೇಶ ಕಳುಹಿಸಿದ್ದರು. ಅವರ ಅತ್ಯಪೂರ್ವ ಕಲಾ ಸಾಧನೆಗೆ ಪ್ರೋತ್ಸಾಹಿಸುತ್ತಾ, ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ
ಅನುಗ್ರಹ ಜತೆಗಿರಲಿ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next