Advertisement

ಡಿಜಿಟಲ್‌ ಯುಗದಲ್ಲಿ ಭಾರತಕ್ಕೆ ಮುನ್ನಡೆ

01:27 AM Mar 08, 2020 | Sriram |

ಮಂಗಳೂರು: ಜಗತ್ತನ್ನು ಡಿಜಿಟಲ್‌ ಸಂಪರ್ಕ ವ್ಯಾಪಿಸಿದೆ. ಭಾರತ ಕೂಡ ಇದರಲ್ಲಿ ಮುಂಚೂಣಿಯಲ್ಲಿದ್ದು, ದೇಶ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಬಲಿಷ್ಠವಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದು ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಚೇರ್‌ಮನ್‌ ಟಿ.ವಿ. ಮೋಹನ್‌ದಾಸ್‌ ಪೈ ಅಭಿಪ್ರಾಯಪಟ್ಟಿದ್ದಾರೆ.

Advertisement

ವಿಶ್ವಕೊಂಕಣಿ ವಿದ್ಯಾರ್ಥಿ ವೇತನ ನಿಧಿ, ವಿಕೆಎಸ್‌ ಎಸ್‌ಎಫ್ ಅಲುಮ್ನಿ ಅಸೋಸಿಯೇಶನ್‌ ಮತ್ತು ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಶನಿವಾರ ಕೊಡಿಯಾಲ್‌ಬೈಲ್‌ನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾದ ಪ್ರೇರಣಾ- 2020 ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು.

ಸಾಫ್ಟ್ವೇರ್‌ ಕೋಡಿಂಗ್‌ ತರಗತಿ
ಮುಂದಿನ ವರ್ಷದಿಂದ ವಿಶ್ವಕೊಂಕಣಿ ಕೇಂದ್ರ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೂ ಸಾಫ್ಟ್ವೇರ್‌ ಕೋಡಿಂಗ್‌ ತರಗತಿ ಆಯೋಜಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳು ಉದ್ಯಮಕ್ಷೇತ್ರ, ತಂತ್ರಜ್ಞಾನ ಅಳವಡಿಕೆ ಕುರಿತು ಹೆಚ್ಚು ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಮೋಹನದಾಸ ಪೈ ಹೇಳಿದರು.

ವಿಶ್ವಕೊಂಕಣಿ ಕೇಂದ್ರ ಸ್ಥಾಪಕಾಧ್ಯಕ್ಷ ಬಸ್ತಿ ವಾಮನ್‌ ಶೆಣೈ ಅವರು ಸಮಾವೇಶ ಉದ್ಘಾಟಿಸಿದರು.ಬೆಂಗಳೂರು ಮೂಲದ “ಸೇತು’ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಸಾಹಿಲ್‌ ಕಿಣಿ, ಮೆಡ್‌ವೆಲ್‌ವೆಂಚರ್‌ ಸ್ಥಾಪಕ ಮತ್ತು ಸಿಇಒ ಲಲಿತ್‌ ಪೈ, ಡೊವ್‌ ಕೆಮಿಕಲ್ಸ… ಸಂಸ್ಥೆಯ ಸಿಇಒ ಸುಧೀರ್‌ ಶೆಣೈ, ಭಾರತೀಯ ನೌಕಾದಳದ ಅಧಿಕಾರಿ ಕಮಾಂಡರ್‌ ಎನ್‌.ಪಿ. ಶೆಣೈ, ಪ್ರಸಿದ್ಧ ಹಿನ್ನೆಲೆ ಧ್ವನಿ ಕಲಾವಿದ ಚೇತನ್‌ ಸಶಿತಲ್‌, ಕ್ವೆಸ್ಟ್‌ ಗ್ಲೋಬಲ್‌ ಸಂಸ್ಥೆಯ ಸಿಒಒ. ಅಜಯ್‌ ಪ್ರಭು, ಜ್ಯೋತಿ ಲ್ಯಾಬೋರೇಟರೀಸ್‌ ಜಂಟಿ ಆಡಳಿತ ನಿರ್ದೇಶಕ ಉಲ್ಲಾಸ ಕಾಮತ್‌ ಉಪನ್ಯಾಸ ನೀಡಿದರು. ವಿಶ್ವಕೊಂಕಣಿ ವಿದ್ಯಾರ್ಥಿವೇತನ ನಿಧಿ ಚೇರ್‌ಮನ್‌ ರಾಮದಾಸ್‌ ಕಾಮತ್‌ ಯು., ಕಾರ್ಯದರ್ಶಿ ಪ್ರದೀಪ್‌ ಜಿ. ಪೈ, ಉಪಾಧ್ಯಕ್ಷ ಗಿಲ್ಬರ್ಟ್‌ ಡಿ’ಸೋಜಾ, ಕಾರ್ಯದರ್ಶಿ ನಂದಗೋಪಾಲ ಶೆಣೈ, ಖಜಾಂಚಿ ಬಿ.ಆರ್‌. ಭಟ್‌, ಪ್ರಭಾಕರ ಪ್ರಭು, ಪ್ರೇರಣಾ ಮುಖ್ಯಗುರು ಸಂದೀಪ್‌ ಶೆಣೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next