Advertisement

ಕಾಂಗ್ರೆಸ್‌ ಶಾಸಕ; ಸಂಸತ್ತಿಗೆ ಬಿಜೆಪಿಗೇ ಲೀಡ್‌!

01:00 AM Mar 21, 2019 | Harsha Rao |

ಬಂಟ್ವಾಳ: ಬಂಟ್ವಾಳದಲ್ಲೂ ನಿಧಾನಗತಿಯಲ್ಲಿ ಚುನಾವಣೆಯ ಬಿಸಿ ಏರುತ್ತಿದೆ. ಬಂಟ್ವಾಳದಲ್ಲಿ ವಿಶೇಷವೆಂದರೆ ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾಗಲೂ ಎಂಪಿ ಚುನಾವಣೆಯಲ್ಲಿ ಬಿಜೆಪಿಯೇ ಲೀಡ್‌ ಪಡೆದುಕೊಂಡಿದೆ.

Advertisement

2009 ಹಾಗೂ 2014ರ ಎರಡೂ ಲೋಕ ಸಭಾ ಚುನಾವಣೆಗಳಲ್ಲೂ ಬಂಟ್ವಾಳದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾಗಲೂ ಈ ಕ್ಷೇತ್ರದಲ್ಲಿ ಬಿಜೆಪಿಯ ನಳಿನ್‌ ಕುಮಾರ್‌ ಕಟೀಲು ಅವರು ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಎದುರು ಮುನ್ನಡೆ ಸಾಧಿಸಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತಾದರೂ ಆಗ ಶಾಸಕರಾಗಿ ಬಿಜೆಪಿಯ ಬಿ. ನಾಗರಾಜ ಶೆಟ್ಟಿ ಗೆದ್ದಿದ್ದರು. 

ಬಂಟ್ವಾಳ ಕ್ಷೇತ್ರದಲ್ಲೆಷ್ಟು ಲೀಡ್‌?
2008 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಮಾನಾಥ ರೈ (61,560 ಮತಗಳು) ಅವರು ಬಿಜೆಪಿಯ ಬಿ. ನಾಗರಾಜ ಶೆಟ್ಟಿ (60,309 ಮತಗಳು) ವಿರುದ್ಧ 1,251 ಮತಗಳಿಂದ ಗೆದ್ದಿದ್ದರು. ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ನಳಿನ್‌ಕುಮಾರ್‌ ಕಟೀಲು ಪ್ರಥಮ ಬಾರಿಗೆ ಚುನಾವಣೆಗೆ ನಿಂತಾಗ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯು (69,560 ಮತಗಳು), ಕಾಂಗ್ರೆಸ್‌ (62,513) ವಿರುದ್ಧ 6,851 ಮತಗಳಿಂದ ಮುನ್ನಡೆ ಸಾಧಿಸಿತ್ತು.

2013ರ ಎಂಎಲ್‌ಎ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಮಾನಾಥ ರೈ (81,665 ಮತಗಳು) ಅವರು ಬಿಜೆಪಿಯ ರಾಜೇಶ್‌ ನಾೖಕ್‌(63,815 ಮತಗಳು) ಅವರ ವಿರುದ್ಧ 17,850 ಮತಗಳಿಂದ ಗೆದ್ದಿದ್ದರು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯು(83,327 ಮತಗಳು) ಕಾಂಗ್ರೆಸ್‌(69,000) ವಿರುದ್ಧ 14,327 ಮತಗಳಿಂದ ಮುನ್ನಡೆ ಸಾಧಿಸಿತ್ತು.

ಆದರೆ 2018ರಲ್ಲಿ ನಡೆದ ಎಂಎಲ್‌ಎ ಚುನಾವಣೆಯ ಬಿಜೆಪಿ ರಾಜೇಶ್‌ ನಾೖಕ್‌ ಉಳಿಪ್ಪಾಡಿ (97,802 ಮತಗಳು) ಅವರು ಕಾಂಗ್ರೆಸ್‌ನ ರಮಾನಾಥ ರೈ (81,831) ಅವರ ವಿರುದ್ಧ 15,971 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಬಿಜೆಪಿಯು ಹೆಚ್ಚಿನ ವಿಶ್ವಾಸ ದಲ್ಲಿದ್ದರೂ, ಬಂಟ್ವಾಳದಲ್ಲಿ ತಮ್ಮ ಅಧಿಪತ್ಯವನ್ನು ಮರು ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕರು ಶತ ಪ್ರಯತ್ನ ನಡೆಸಲಿದ್ದಾರೆ.

Advertisement

ಬಂಟ್ವಾಳ ಕ್ಷೇತ್ರದಲ್ಲಿ ಶಾಂತ ರೀತಿಯ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ಆಯೋಗವು ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದು, ದ.ಕ.ಜಿ.ಪಂ.ನ ಉಪಕಾರ್ಯದರ್ಶಿ ಮಹೇಶ್‌ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಜತೆಗೆ ತಹಶೀಲ್ದಾರ್‌ ಸಣ್ಣರಂಗಯ್ಯ ಅವರು ಸೇರಿದಂತೆ ಸರಕಾರಿ ಸಿಬಂದಿ ವಿವಿಧ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಮೋದಿ ಕುರಿತು ಮಾತು
ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯ ಕರ್ತರು ಅಭ್ಯರ್ಥಿಯ ಕುರಿತು ಹೆಚ್ಚು ಮಾತನಾಡುತ್ತಿಲ್ಲ. ಬದಲಾಗಿ ಯಾರೇ ಅಭ್ಯರ್ಥಿ ಯಾದರೂ ಮೋದಿಗಾಗಿ ನಾವು ಎಂಬ ರೀತಿಯಲ್ಲಿ ಮಾತನಾಡು ತ್ತಿ¨ªಾರೆ. ಕೆಲವೊಂದೆಡೆ ಹಾಲಿ ಸಂಸದರ ಕುರಿತು ಅಸಮಾಧಾನದ ಮಾತುಗಳು ಕೇಳಿ ಬರುತ್ತಿದೆ. ಹಾಗೆಂದು ನಾವು ಮೋದಿಗಾಗಿ ಯಾರೇ ಅಭ್ಯರ್ಥಿಯಾ ದರೂ ಚಿಂತೆಯಿಲ್ಲ ಎನ್ನುತ್ತಿ¨ªಾರೆ. 

ಕಾಂಗ್ರೆಸ್‌ನಲ್ಲಿ ಉತ್ಸಾಹ
ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಈ ಬಾರಿ ಮಾಜಿ ಸಚಿವ ಬಿ. ರಮಾನಾಥ ರೈ ಆಯ್ಕೆ ಯಾಗುತ್ತಾರೆ ಎಂಬ ಮಾತು ಹಲವು ಸಮಯಗಳಿಂದ ಕೇಳಿ ಬರುತ್ತಿತ್ತು. ಬಂಟ್ವಾಳದಲ್ಲಿ 6 ಬಾರಿ ಗೆದ್ದು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿರುವ ರೈ ಅವರು ಅಭ್ಯರ್ಥಿಯಾದರೆ ಹೆಚ್ಚಿನ ಮತ ಪಡೆಯುತ್ತಾರೆ. ಜತೆಗೆ ಬಿಜೆಪಿಯಲ್ಲಿ ಸಂಸದರ ಕುರಿತು ಭಿನ್ನಾಭಿ ಪ್ರಾಯಗಳಿರುವುದರಿಂದ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಬಂಟ್ವಾಳದ ಕಾಂಗ್ರೆಸ್‌ ಕಾರ್ಯಕರ್ತರು ಅಭಿಪ್ರಾಯ ಪಡುತ್ತಿದ್ದರು. ಹೀಗಾಗಿ ರೈ ಅವರ ಅಭ್ಯರ್ಥಿಯಾಗುತ್ತಾರೆ ಎಂಬ ಮಾತು ಬಂಟ್ವಾಳ ಕಾಂಗ್ರೆಸ್‌ನಲ್ಲಿ ಉತ್ಸಾಹ ಹೆಚ್ಚಿಸುವಂತೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next