Advertisement

ಸಾಧನೆಗೆ ನಾಯಕತ್ವ ಗುಣ ಮುಖ್ಯ

03:37 PM Feb 12, 2018 | |

ಬೀದರ: ಸಹಕಾರಿ ವಲಯದಲ್ಲಿ ಸಾಧನೆಗೆ ಸುಮಾರು ದಾರಿಗಳಿವೆ. ಆದರೆ, ಸಾಧನೆಗೆ ನಾಯಕತ್ವ ಗುಣ ಅತಿ ಮುಖ್ಯವಾಗಿದೆ ಎಂದು ಎಂದು ಶ್ರೀ ಬಸವೇಶ್ವರ ಸುದ್ಧಿ ಮಾಧ್ಯಮ ಸಹಕಾರ ಮಹಾಮಂಡಳದ ಅಧ್ಯಕ್ಷ ಗುರುನಾಥ ಜ್ಯಾಂತಿಕರ್‌ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟವು ರಾಷ್ಟ್ರೀಯ ಸಹಕಾರ ಶಿಕ್ಷಣ ಕೇಂದ್ರ ನವದೆಹಲಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಹಕಾರಿ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲಿನ ಒಕ್ಕೂಟ, ಸಣ್ಣ ಹಾಗೂ ದೊಡ್ಡ ಸಂಸ್ಥೆ, ಹೈನುಗಾರಿಕೆ ಸಂಸ್ಥೆ, ಮಹಿಳಾ ಸಂಸ್ಥೆ, ಕೈಗಾರಿಕಾ ಸಂಸ್ಥೆ ಇತ್ಯಾದಿ ಇನ್ನೂ ಹೆಚ್ಚು ಸಂಸ್ಥೆಗಳನ್ನು ಹುಟ್ಟುಹಾಕಲು ಯುವಕರು ಮುಂದೆ ಬರಬೇಕು ಎಂದು ಕರೆ ನೀಡಿದರು. 

ಬೀದರ ಅರ್ಬನ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಸಲಿಮೊದ್ದೀನ್‌ ಮಾತನಾಡಿ, ಒಂದು ಸಂಸ್ಥೆ ಬೆಳೆಯಲು ಸಂಸ್ಥೆಯ ಅಧ್ಯಕ್ಷರು ಹಾಗೂ ಎಲ್ಲಾ ಸಿಬ್ಬಂದಿಗಳು ಹೆಚ್ಚಾಗಿ ಸಮಯ ನೀಡಬೇಕು. ಸಂಸ್ಥೆಯ ಸದಸ್ಯರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಣೆ ಮಾಡಿದಾಗ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ ಎಂದರು.

ರಾಜ್ಯ ಮಹಿಳಾ ಮಹಾಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಮಾತನಾಡಿ, ಸಹಕಾರಿ ರಂಗದಲ್ಲಿ ಮಹಿಳೆಯರ ಪಾತ್ರ ಅತೀ ಮಹತ್ವದ್ದು, ಮಹಿಳೆಯರು ಸಮಾಜಮುಖೀ ಕಾರ್ಯಕ್ಕೆ ಸಹಕಾರ ರಂಗ ಸ್ಥಾಪಿಸಬೇಕು. ಹಳ್ಳಿಗಳಲ್ಲಿ ಸ್ತ್ರೀಯರು ಕರಕುಶಲ ಕಲೆಗಳು, ಮನೆ ಅಲಂಕಾರ ವಸ್ತುಗಳ ತಯಾರಿಕೆ ಸಂಸ್ಥೆಗಳು ಮಹಿಳೆಯರ ನಾಯಕತ್ವದಲ್ಲಿ ಪ್ರಾರಂಭವಾಗಲಿ ಎಂದರು.

Advertisement

ಸಹಕಾರ ಭಾರತಿ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಬುಯ್ನಾ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಸಹಕಾರ ರಂಗದಲ್ಲಿ ತನು-ಮನ-ಧನದಿಂದ ದುಡಿಯುತ್ತೇನೆ. ನನ್ನ ಅವ ಧಿಯಲ್ಲಿ ಇನ್ನೂ ಹೆಚ್ಚು ಸಂಸ್ಥೆಗಳನ್ನು ಹುಟ್ಟುಹಾಕಲು ಪ್ರಯತ್ನ ಮಾಡುತ್ತೇನೆ ಎಂದರು. ಸಂಪನ್ಮೂಲ ವ್ಯಕ್ತಿ ರಾಜಶೇಖರ ನಾಗಮೂರ್ತಿ ಅವರು ಆಡಳಿತ ಮಂಡಳಿಯ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ಮತ್ತು ಜಗನ್ನಾಥ ಕರಂಜೆ ಅವರು ನಾಯಕತ್ವದ ಗುಣಲಕ್ಷಣಗಳ ಬಗ್ಗೆ ತಿಳಿಸಿಕೊಟ್ಟರು. 

ಲೆಕ್ಕ ಪರಿಶೋಧಕ ಉಮೇಶ ಮೂಲಿಮನಿ ಅವರು ಸಹಕಾರ ಕ್ಷೇತ್ರದಲ್ಲಿ ಸಂಘ ಸಂಸ್ಥೆಗಳ ವಿವಿಧ ಆದಾಯ ತೆರಿಗೆ ಮತ್ತು ಕಾನೂನುಗಳ ಬಗ್ಗೆ ಹಾಗೂ ನಾಗೇಶ್ವರ ರೆಡ್ಡಿ ಸಹಕಾರಿ ಸಂಸ್ಥೆಯಲ್ಲಿ ಬಳಸುವ ತಂತ್ರಾಂಶ ಕುರಿತು ಮಾಹಿತಿ ನೀಡಿದರು. 

ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ನಿರೂಪಿಸಿದರು. ಒಕ್ಕೂಟದ ನಿರ್ದೇಶಕರಾದ ಬಸವರಾಜ ಬುಧೇರಾ, ನಂದಾ ವಿವೇಕಾನಂದ, ಕ್ರಾಂತಿಕುಮಾರ ಕುಲಾಲ, ಮಹೇಶ್ವರ ಸ್ವಾಮಿ, ಶ್ರೀಕಾಂತ ಸ್ವಾಮಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next