Advertisement

ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ

03:08 PM Jan 26, 2018 | Team Udayavani |

ಬೀದರ: ಸಹಕಾರಿಗೆ ಸಂಬಂಧಿ ಸಿದ ವಿಷಯ ಒಳಗೊಂಡ ವಿಶ್ವವಿದ್ಯಾಲಯ ಮತ್ತು ಕಾಲೇಜು ಸ್ಥಾಪಿಸುವ ಅಗತ್ಯವಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಜಿಲ್ಲಾ ಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರವು ಇಂದು ಬಹಳ ಬೆಳವಣಿಗೆ ಕಂಡಿದೆ. ಸಂಯುಕ್ತ ಸಹಕಾರಿಯು ಸಂಪರ್ಕ ಕೇಂದ್ರದ ಸಹಕಾರಿಗಳಿಗೆ ಉತ್ತಮ ಸೇವೆ ನೀಡಬೇಕು. ಸೌಹಾರ್ದ ಸಹಕಾರಿಗಳು ಇನ್ನೂ ಹೆಚ್ಚು ಹೆಚ್ಚಾಗಿ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.

ರಾಜ್ಯ ಬಸವೇಶ್ವರ ಸುದ್ದಿ ಮಾಧ್ಯಮ ಸಹಕಾರ ಮಹಾ ಮಂಡಳ ಅಧ್ಯಕ್ಷ ಗುರುನಾಥ ಜ್ಯಾಂತಿಕರ್‌ ಅಧ್ಯಕ್ಷತೆ ವಹಿಸಿ
ಮಾತನಾಡಿ, ಸಹಕಾರಿಗಳು ದೊಡ್ಡ ದೊಡ್ಡ ಕೈಗಾರಿಕೆಗಳಿಗೆ ಸಾಲ ನೀಡುವಷ್ಟು ಬೆಳೆದಿವೆ. ಸಹಕಾರಿಗಳ ಸಮಸ್ಯೆ
ನಿವಾರಿಸುವ ಉದ್ದೇಶದಿಂದ ಜಿಲ್ಲಾ ಸಂಪರ್ಕ ಕಚೇರಿ ಆರಂಭಿಸಲಾಗಿದೆ. ಸಹಕಾರಿಗಳು ಕಚೇರಿಯ ಸದುಪಯೋಗ ಪಡೆಯಬೇಕು. ಸೌಹರ್ದ ಅಭಿವೃದ್ಧಿ ಅಧಿಕಾರಿಗಳು ವಾರದಲ್ಲಿ 2 ದಿನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು. 

ಗಾಂಧಿ ಗಂಜ್‌ ಸಹಕಾರ ಬ್ಯಾಂಕ್‌ ಅಧ್ಯಕ್ಷ ವಿಜಯಕುಮಾರ ಪಾಟೀಲ, ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲ್ಕೂಡ, ಸಂಯುಕ್ತ ಸಹಕಾರಿಯ ನಿರ್ದೇಶಕ ವೈ.ಟಿ. ಪಾಟೀಲ, ಸಂಜೀವ ಮಹಾಜನ, ಸಂಜೀವಕುಮಾರ ಪಾಟೀಲ, ಪ್ರದೀಪ ದಾಬಶೆಟ್ಟಿ, ಎಸ್‌.ಎಸ್‌. ಪಾಟೀಲ ಮತ್ತಿತರರು ಇದ್ದರು. ಶಿವಕುಮಾರ ಬಿ.ಎಸ್‌. ನಿರೂಪಿಸಿದರು. ಸಂಜಯ ಕೋರಟಕರ ಪ್ರಾಸ್ಥಾವಿಕವಾಗಿ ಮಾತನಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next