Advertisement

ತೆಲಂಗಾಣದಲ್ಲಿ ನಾಯಕತ್ವ ಬದಲು?

03:01 AM Jan 21, 2021 | Team Udayavani |

ಹೈದರಾಬಾದ್‌: ತೆಲಂಗಾಣದಲ್ಲಿ ನಾಯಕತ್ವ ಬದಲಾವಣೆಯಾಗ ಲಿ ದೆಯೇ? ಹೈದರಾಬಾದ್‌ನಲ್ಲಿ ಕಳೆದ ಕೆಲವು ಸಮಯಗಳಿಂದ ಚಾಲ್ತಿಯ ಲ್ಲಿರುವ ವದಂತಿಗಳ ಪ್ರಕಾರ ಹೌದು. ಮುಂದಿನ ತಿಂಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕವಲಕುಂಟ ಚಂದ್ರಶೇಖರ ರಾವ್‌ ಪುತ್ರ ಕವಲಕುಂಟ ತಾರಕ ರಾಮ ರಾವ್‌ ನೇಮಕವಾಗುವುದು ಬಹುತೇಕ ಖಚಿತವೇ ಆಗಿದೆ.

Advertisement

ಈ ಬಗ್ಗೆ ಹಾಲಿ ಮುಖ್ಯಮಂತ್ರಿ ಕವಲಕುಂಟ ಚಂದ್ರಶೇಖರ ರಾವ್‌ ಕುಟುಂಬ ಸದಸ್ಯರಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ಮುಖ್ಯಮಂತ್ರಿ ಕೆ.ಟಿ.ರಾಮ ರಾವ್‌ ಅವ ರೇ ಆಗಲಿದ್ದಾರೆ. ಶೀಘ್ರ ವೇ ಅಂದರೆ ಮುಂದಿನ ತಿಂಗಳೇ ನಾಯಕತ್ವ ಬದಲಾಗಲಿದೆ. ಜತೆಗೆ ಹಾಲಿ ಸಂಪುಟದಲ್ಲಿಯೂ ಮಹತ್ವಪೂರ್ಣ ಬದಲಾವಣೆ ನಡೆಯಲಿದೆ  ಎಂದು ರಾವ್‌ ಕುಟುಂಬದ ನಿಕಟ ವರ್ತಿಗಳನ್ನು ಉಲ್ಲೇಖೀಸಿ “ನ್ಯೂಸ್‌18′ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.

ತೆಲಂಗಾಣದ ಹಾಲಿ ವಿಧಾನಸಭೆಯ ಅವಧಿ 2023ಕ್ಕೆ ಮುಕ್ತಾಯಗೊಳ್ಳಲಿದೆ. ಇತ್ತೀಚೆಗಷ್ಟೇ “10 ಟಿವಿ ನ್ಯೂಸ್‌’ ಎಂಬ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶ ನದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಎಟೇಲ ರಾಜೇಂದ್ರ “ತೆಲಂಗಾಣ ಸರಕಾರದ ಪ್ರಮುಖ ನಿರ್ಧಾರಗಳೆಲ್ಲವೂ ಕೆ.ಟಿ.ರಾಮ ರಾವ್‌ ಅವರ ಜತೆಗೆ ಚರ್ಚೆ ನಡೆಸಿಯೇ ಕೈಗೊಳ್ಳಲಾಗುತ್ತದೆ. ನಾಯಕತ್ವ ಬದಲಾವಣೆ ತಪ್ಪೇನಲ್ಲ’ ಎಂದು ಹೇಳಿದ್ದರು.

ರಾಷ್ಟ್ರ ರಾಜಕಾರಣಕ್ಕೆ ಕೆಸಿಆರ್‌: 2023ರ ವರೆಗೆ ಕೆ.ಚಂದ್ರಶೇಖರ ರಾವ್‌ ಅವರೇ ಮುಖ್ಯಮಂತ್ರಿಯಾಗಿ ಇರಲಿ. ಸದ್ಯಕ್ಕೆ ನಾಯಕತ್ವ ಬೇಡ ಎನ್ನುವುದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌)ಯ  ನಾಯಕರೆಲ್ಲರ ಒಲವಾಗಿತ್ತು. ಜತೆಗೆ ರಾಮ ರಾವ್‌ ಸಹಜವಾಗಿಯೇ ಕೆಸಿಆರ್‌ ಸ್ಥಾನಕ್ಕೆ ಬರಲಿದ್ದಾರೆ ಎನ್ನುವುದನ್ನು ಚರ್ಚಿಸಿದ್ದರು. ಕೆಸಿಆರ್‌ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಈ ಬದಲಾವಣೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next