ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ಆಡಿಯೋಗಳು ವೈರಲ್ ಆಗುತ್ತಿರುವ ಕಾರಣ ಜನಪ್ರತಿನಿಧಿಗಳು ಹಾಗೂ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಫೋನ್‌ಗಳಲ್ಲಿ ಸಂಭಾಷಣೆ ನಡೆಸಲು ಹಿಂದೇಟು ಹಾಕುವಂತಾಗಿದೆ. ಅವಸರ- ಆವೇಶದಲ್ಲಿ ಏನಾದರೂ ಹೆಚ್ಚು ಕಡಿಮೆ ಮಾತನಾಡಿದರೆ ಕಷ್ಟ ಎನ್ನುವಂತಾಗಿದೆ ಪರಿಸ್ಥಿತಿ.
ಇದು ಚುನಾವಣೆ ಸಮಯ. ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಿನಂತೆ ಕಾಣುತ್ತದೆ ಎನ್ನುತ್ತಾರೆ ರಾಜಕೀಯ ನಾಯಕರು. ಇತ್ತೀಚಿನ ಬೆಳವಣಿಗೆ ಗಳನ್ನು ಗಮನಿಸಿದರೆ ಅವರ ಆತಂಕವೂ ನಿಜ ಎನಿಸುತ್ತದೆ. ಫೋನ್‌ಗಳಲ್ಲಿ ಮಾಡಿದ ಸಂಭಾಷ ಣೆಗಳೇ ರಾಜಕೀಯ ದಾಳವಾಗಿ ಪರಿಣಮಿಸುವ ಸಾಧ್ಯತೆಗಳಿರುವ ಕಾರಣ ಏನೇ ಮಾತನಾಡುವು ದಿದ್ದರೆ ಭೇಟಿಯಾಗಿ ಮಾತನಾಡೋಣ ಎನ್ನುತ್ತಿದ್ದಾರೆ ನಾಯಕರು.
ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಪ್ರಧಾನಿ ಮೋದಿ ಬಗ್ಗೆ ಟೀಕಿಸಿ ಮಾತನಾಡಿ ದ್ದಾರೆನ್ನಲಾದ ಆಡಿಯೋ ಎಲ್ಲೆಡೆ ಹರಿದಾಡಿ ದೊಡ್ಡ ಸದ್ದು ಮಾಡಿತು. ಇದನ್ನು ತಿರುಚಿ ಮಾಡಿದ್ದಾರೆಂದು ಶಾಸಕರು ಸಮಜಾಯಿಷಿ ಕೊಟ್ಟರೂ ಆಡಿಯೋ ಸಾಕಷ್ಟು ಜನರಿಗೆ ತಲುಪಿಯಾಗಿತ್ತು. ಅಷ್ಟೇ ಅಲ್ಲ ಈಚೆಗೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರು ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಪಕ್ಷ ತೊರೆಯದಂತೆ ಚರ್ಚಿಸಿದ ಆಡಿಯೋ ಕೂಡ ವೈರಲ್ ಆಗಿದೆ. ಸುಮಾರು ಎಂಟು ನಿಮಿಷಗಳ ಆಡಿಯೋದಲ್ಲಿ ಅನೇಕ ವಿಚಾರಗಳನ್ನು ಹಂಚಿ ಕೊಂಡಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಹೀಗಾಗಿ ಮೊಬೈಲ್‌ನಲ್ಲಿ ಮಾತನಾಡಿ, ಸಿಕ್ಕಿ ಹಾಕಿ ಕೊಳ್ಳುವುದಕ್ಕಿಂತ ಎದುರು-ಬದುರು ಕುಳಿತು ಮಾತನಾಡುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಆ್ಯಡ್ಮಿನ್‌ಗಳಿಗೂ ಎಚ್ಚರಿಕೆ
ಚುನಾವಣೆಗೆ ಸಂಬಂಧಿ ಸಿದ ಯಾವುದೇ ಸುಳ್ಳು ಸುದ್ದಿಗಳನ್ನು ಹರಡುವುದಾಗಲಿ, ಪ್ರಚಾ ರಗಳನ್ನು ಮಾಡುವುದಾಗಲಿ ಮಾಡಿದರೆ ವಾಟ್ಸ್‌ಆ್ಯಪ್ ಆ್ಯಡ್ಮಿನ್‌ಗಳ ವಿರುದ್ಧ ಕ್ರಮ ಜರ ಗಿಸುವುದಾಗಿ ರಾಜ್ಯ ಚುನಾವಣ ಆಯೋಗ ಎಚ್ಚರಿಕೆ ನೀಡಿದೆ. ಹೀಗಾಗಿ ಕೆಲವು ಗ್ರೂಪ್‌ಗ್ಳನ್ನು ಆ್ಯಡ್ಮಿನ್ ಓನ್ಲಿ ಮಾಡಿದ್ದರೆ ಇನ್ನೂ ಕೆಲವು ಆ್ಯಡ್ಮಿನ್‌ಗಳು ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ ಸದಸ್ಯರನ್ನು ಅಡ್ಮಿನ್‌ಗಳನ್ನಾಗಿ ಮಾಡಿ ಬಿಟ್ಟಿದ್ದಾರೆ. ಬೇಕಾಬಿಟ್ಟಿ ಸಂದೇಶ ಹಾಕಿದರೆ ಹುಷಾರ್ ಎಂದು ಎಚ್ಚರಿಸುತ್ತಿದ್ದಾರೆ.
ಇನ್ನೂ ಪ್ರಮುಖ ಪಕ್ಷಗಳ ಟಿಕೆಟ್‌ಗಳು ಅಂತಿಮಗೊಂಡಿಲ್ಲ. ಯಾವುದೇ ಅಭ್ಯರ್ಥಿ ವಿರುದ್ಧ ಸಾಮಾಜಿಕ ಜಾಲತಾಣ ಗಳಲ್ಲಿ ಸಂದೇಶಗಳನ್ನು ಹಾಕಿದರೆ ಆಯೋಗ ದಿಂದ ನಮಗೆ ನಿರ್ದೇಶನ ಬರಲಿದೆ. ನಾವು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುತ್ತೇವೆ.
-ಚಂದ್ರಶೇಖರ್ ನಾಯಕ,
ಜಿಲ್ಲಾ ಚುನಾವಣಾಧಿಕಾರಿ
-ಸಿದ್ಧಯ್ಯಸ್ವಾಮಿ ಕುಕನೂರು