Advertisement

“ನಾಯಕರು ಬದಲಾದರೂ ನಾಯಕತ್ವ ನಿರಂತರ’

11:40 PM Jul 13, 2019 | Sriram |

ಮಹಾನಗರ: ಯಾವುದೇ ಸಂಘ, ಸಂಸ್ಥೆಯಲ್ಲಿ ನಾಯಕರು ಬದಲಾವಣೆ ಸಹಜ. ಆದರೆ ನಾಯಕರು ಬದಲಾದರೂ ನಾಯಕತ್ವ ನಿರಂತರ ಮುಂದುವರಿಯುತ್ತದೆ ಎಂದು ಸಂತ ಆ್ಯಗ್ನೆಸ್‌ ಕಾಲೇಜಿನ ಪ್ರಾಧ್ಯಾಪಿಕೆ ಮತ್ತು ಹಿರಿಯ ಟೋಸ್ಟ್‌ ಮಾಸ್ಟರ್‌ ಮಾಲಿನಿ ಹೆಬ್ಟಾರ್‌ ಹೇಳಿದರು.

Advertisement

ರೋಶನಿ ನಿಲಯದ ದಿ ಸ್ಕೂಲ್‌ ಆಫ್‌ ಸೋಷಿಯಲ್‌ ವರ್ಕ್‌ನಲ್ಲಿ ನಡೆದ ಇನ್ಫೋಸಿಸ್‌ ಟೋಸ್ಟ್‌ಮಾಸ್ಟರ್ಸ್‌ ಮಂಗಳೂರು ಎಸ್‌ಇಝಡ್‌ ಮತ್ತು ಇನ್ಸ್‌ಪಿರಾನ್‌ ಟೋಸ್ಟ್‌ಮಾಸ್ಟರ್ಸ್‌ ಕ್ಲಬ್‌ಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.

ಜಿಲ್ಲಾ ಆಡಳಿತ ವ್ಯವಸ್ಥಾಪಕಿ ಸವಿತಾ ಸಾಲ್ಯಾನ್‌, ವಿಭಾಗ ಎಫ್‌ ನಿರ್ದೇ‌ಶಕಿ ಶಿವಾನಿ ಬಾಳಿಗಾ, ಪ್ರದೇಶ ನಿರ್ದೇಶಕಿ ಡಾ| ಸುಕನ್ಯಾ ರಾವ್‌ ಮತ್ತು ವಿದ್ಯಾ ಶೆಣೈ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ಇನ್ಫೋಸಿಸ್‌ ಟೋಸ್ಟ್‌ಮಾಸ್ಟರ್ಸ್‌ನ ಕಾವ್ಯಾ ಮತ್ತು ದೇವಿಕಾ ಅವರಿಂದ ಐಸ್‌ಬ್ರೇಕರ್‌ನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯ ಅತಿಥಿ ಗಳನ್ನು ಜೀವನ್‌, ದೀಕ್ಷಾ ಪರಿಚಯಿ ಸಿದರು. ಕರಣ್‌, ರೋಶನಿ ನಿಲಯ ವಿದ್ಯಾರ್ಥಿಗಳಿಗೆ “ಟೋಸ್ಟ್‌ಮಾಸ್ಟರ್ಸ್‌ ಇಂಟರ್‌ನ್ಯಾಷನಲ್‌’ ಸಂಘಟನೆ ಕುರಿತು ವಿವರಿಸಿದರು.

ಡ್ಯಾರಿಲ್‌ ಮತ್ತು ಫಿಯೋನಾ ನಿರೂಪಿಸಿದರು. ಇನ್ಫೋಸಿಸ್‌ ಟೋಸ್ಟ್‌ ಮಾಸ್ಟರ್ಸ್‌ನ ಶರೀನ್‌ ಸ್ವಾಗತಿಸಿದರು. ಶ್ರೀನಿವಾಸ್‌ ವಂದಿಸಿದರು.

Advertisement

ವಾರ್ಷಿಕ ವರದಿಯನ್ನು ಇನ್ಫೋಸಿಸ್‌ ಏಕ್ತಾ ಮತ್ತು ನಿಶಾ ಮತ್ತು ಇನ್ಸ್‌ ಪಿರಾನ್‌ನಿಂದ ಝೇನಾ ಮಂಡಿಸಿದರು. ನಿರ್ಗಮನ ಅಧ್ಯಕ್ಷರಾದ ಇನ್ಫೋ ಸಿಸ್‌ನ ದೀಪಿಕಾ ಮತ್ತು ಇನ್ಸ್‌ಪಿರಾನ್‌ನ ಅಮಿತ್‌ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಬೆಂಬಲ ಮತ್ತು ಸಹಕಾರಕ್ಕೆ ಧನ್ಯವಾದ‌ ಅರ್ಪಿಸಿದರು.

ಪ್ರದೇಶ ನಿರ್ದೇಶಕರಾದ ಡಾ| ಸುಕನ್ಯಾ ರಾವ್‌, ವಿದ್ಯಾ ಶೆಣೈ ಅವರು 2019-2020ರ ಅವಧಿಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು
ಇನ್ಫೋಸಿಸ್‌ ಟೋಸ್ಟ್‌ ಮಾಸ್ಟರ್ಸ್‌ ಪದಾಧಿಕಾರಿಗಳು ರಜತ್‌ (ಅಧ್ಯಕ್ಷ), ಆಶಿಶ್‌ (ಉಪಾಧ್ಯಕ್ಷ – ಶಿಕ್ಷಣ), ದೀಕ್ಷಾ (ಉಪಾಧ್ಯಕ್ಷ – ಸದಸ್ಯತ್ವ), ಡೆರಿಲ್‌ (ಉಪಾಧ್ಯಕ್ಷ – ಪಬ್ಲಿಕ್‌ ರಿಲೇಶನ್ಸ್‌), ರಾಮರ್‌ (ಕಾರ್ಯದರ್ಶಿ), ಪೂಜಿತ್‌ (ಖಜಾಂಚಿ), ಆನಂದ್‌ (ಸಾರ್ಜೆಂಟ್‌-ಆಮ್ಸ್‌ì), ದೀಪಿಕಾ (ನಿಕಟಪೂರ್ವ ಅಧ್ಯಕ್ಷೆ).

ಇನ್ಸ್‌ಪಿರಾನ್‌ ಟೋಸ್ಟ್‌ ಮಾಸ್ಟರ್ಸ್‌ ಆಶ್ರಿತಾ (ಅಧ್ಯಕ್ಷೆ), ಫಿಯೋನಾ (ಉಪಾಧ್ಯಕ್ಷ – ಶಿಕ್ಷಣ), ಝೇನಾ (ಉಪಾಧ್ಯಕ್ಷ – ಸದಸ್ಯತ್ವ), ಜೀವನ್‌ (ಉಪಾಧ್ಯಕ್ಷ – ಪಬ್ಲಿಕ್‌ ರಿಲೇಶನ್ಸ್‌), ಯಶ್‌ (ಕಾರ್ಯದರ್ಶಿ), ಶರತ್‌ (ಖಜಾಂಚಿ), ಚೇತನ್‌ (ಸಾರ್ಜೆಂಟ್‌-ಆಮ್ಸ್‌ì) ಮತ್ತು ಅಮಿತ್‌ (ನಿಕಟಪೂರ್ವ ಅಧ್ಯಕ್ಷ).

ಏರಿಯಾ ನಿರ್ದೇಶಕ ಅಮಿತ್‌, ಇನ್ಸ್‌ ಪಿರಾನ್‌ ಕ್ಲಬ್‌ ಮೆಂಟರ್‌ ಮಮತಾ, ಮಂಗಳೂರು ಟೋಸ್ಟ್‌ಮಾಸ್ಟರ್ಸ್‌ ಅಧ್ಯಕ್ಷೆ ಕವಿತಾ, ಮಂಗಳೂರಿನ ಟೋಸ್ಟ್‌ ಮಾಸ್ಟರ್ಸ್‌ ನಿಕಟಪೂರ್ವ ಅಧ್ಯಕ್ಷೆ ಸಪ್ನಾ, ಪ್ರೋಅಕ್ಟ್ ಟೋಸ್ಟ್‌ಮಾಸ್ಟರ್ಸ್‌ ಅಧ್ಯಕ್ಷೆ ರೇಷ್ಮಾ ಮತ್ತು ವಿನ್ನರ್ಸ್‌ ಕ್ಲಬ್‌ನ ಸಮಿನಾ ಹೊಸ ಪದಾಧಿಕಾರಿಗಳ ತಂಡಗಳನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next