Advertisement

15 ಎಕರೆ ಪ್ರದೇಶದಲ್ಲಿ ಜಲ ಕ್ರಾಂತಿಗೆ ಜಿಡಗಾ ಶ್ರೀ ನಾಂದಿ

10:32 AM Mar 22, 2022 | Team Udayavani |

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ನವಕಲ್ಯಾಣ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾ ಸ್ವಾಮೀಜಿ ತಮ್ಮ ಶ್ರೀಮಠದ 15 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡುವ ಮೂಲಕ ಜಲಕ್ರಾಂತಿಗೆ ನಾಂದಿಯಾಗಿದ್ದಾರೆ.

Advertisement

ಜಿಡಗಾ ಗ್ರಾಮ ಪಂಚಾಯಿತಿ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಸಾಲಿನಲ್ಲಿ ಕೆರೆ ನಿರ್ಮಾಣಕ್ಕೆ ನಿವೇಶನ ಒದಗಿಸಿದ್ದಾರೆ. ಇದರಿಂದಾಗಿ ಮಾದರಿ ಕಾಮಗಾರಿಯಾಗಿ ಜಲ ಸಂಗ್ರಹವಾಗಿ ನೆರೆಹೊರೆಯ ರೈತರಿಗೆ ಅನುಕೂಲವಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆರೆ ವಿಸ್ತಾರ ಕಾಮಗಾರಿ ಕೈಗೊಳ್ಳಬೇಕು ಎನ್ನುವ ಬಯಕೆ ಹೊಂದಿರುವ ಶ್ರೀಗಳು ರಾಜ್ಯ ಸರ್ಕಾರಕ್ಕೆ 80 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿ, ಅನುದಾನಕ್ಕೆ ಕಾಯುತ್ತಿದ್ದಾರೆ.

ಈ ಕೆರೆಯಲ್ಲಿ ಪ್ರದೇಶದಲ್ಲಿ ವಿವಿಧ ಜಾತಿಯ ಗಿಡಮರಗಳು, ನಿಸರ್ಗದ ವಾತಾವರಣವಿರುವ ಪ್ರವಾಸಿ ತಾಣ ನಿರ್ಮಿಸಲು ಮುಂದಾಗಿದ್ದಾರೆ. ಅಲ್ಲದೇ ಕೆರೆಯ ಸುತ್ತಲಿನ ಪ್ರದೇಶ ರೈತರಿಗೆ ಕೃಷಿಗೆ ವರವಾಗಲಿದೆ. ಜತೆಗೆ ದನಕರುಗಳಿಗೆ ನೀರಿನ ಅನುಕೂಲವಾಗಿದ್ದು, ಪರಿಸರ ಜನ-ಜಾನುವಾರುಗಳಿಗೆ ನೀರಿನ ಅನುಕೂಲದ ಜೊತೆಗೆ ಜಲ ಸಂರಕ್ಷಣೆ ಮುಂದಾಗಿರುವುದು ಜಲಕ್ರಾಂತಿಗೆ ಕಾರಣವಾಗಿದೆ.

ಕೆರೆ ನಿರ್ಮಿಸಿ ನೀರಿನ ಸಂಗ್ರಹ

ಖಜೂರಿ ಕೋರಣೇಶ್ವರ ಮಠದ ಟ್ರಸ್ಟ್‌ ಆಶ್ರಯದಲ್ಲಿ ಶ್ರೀಮಠದ ಹೊಲದಲ್ಲಿ ಪ್ರತ್ಯೇಕ ಎರಡು ಉದ್ಯೋಗ ಖಾತ್ರಿ ಅಡಿಯಲ್ಲಿ ಕೆರೆಗಳನ್ನು ನಿರ್ಮಿಸುವ ಮೂಲಕ ಜಲ ಕ್ರಾಂತಿಗೆ ಶ್ರೀ ಮಠವು ನಾಂದಿಹಾಡಿದೆ. ಕೆಲವು ವರ್ಷಗಳ ಹಿಂದೆ ಖಜೂರಿ ಆಳಂಗಾ ಗ್ರಾಮದ ಮಾರ್ಗಮಧ್ಯದಲ್ಲಿನ ಮಠದ ಎರಡು ಎಕರೆ ಪ್ರದೇಶದಲ್ಲಿ ಖಜೂರಿ ಗ್ರಾಮ ಪಂಚಾಯಿತಿಯಿಂದ ಕೆರೆ ನಿರ್ಮಾಣವಾಗಿ ನೀರು ಸಂಗ್ರಹಗೊಂಡು ಜನ, ಜಾನುವಾರು, ನೆರೆ ಹೊರೆಯವರಿಗೆ ನೀರಿನ ಅನುಕೂಲವಾಗಿದೆ. ಮತ್ತೊಂದೆಡೆ ಪ್ರಸಕ್ತ ಸಾಲಿನಲ್ಲಿನ ಶ್ರೀ ಮಠದ ಬಬಲೇಶ್ವರ ಗ್ರಾಮದ ಹತ್ತಿರದ ಎರಡು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡ ಕಾಮಗಾರಿ ಮುಕ್ತಾಯವಾಗಿದ್ದರಿಂದ ಬರುವ ಮಳೆಗಾಲಕ್ಕೆ ನೀರು ಸಂಗ್ರಹಿಸಿಕೊಳ್ಳಲು ಕೆರೆ ಸಿದ್ಧವಾಗಿದೆ. ಕೆರೆಯಿಂದ ನೀರಿನ ಅನುಕೂಲವಾಗಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ ಹೇಳುತ್ತಲೇ ಜಲ ಸಂರಕ್ಷಣೆಗೆ ಹೆಜ್ಜೆಯನ್ನಿಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next