Advertisement
Related Articles
ಹೀಗಿದ್ದರೂ, 20 ವರ್ಷಗಳಿಂದ ತಂಡ “ಲಯ’ದಲ್ಲಿರುವುದಕ್ಕೆ ಹೇಗೆ ಸಾಧ್ಯ? ಹೆಸರು, ಪ್ರಚಾರ, ಹಣ ಇವರಲ್ಲಿ ಅಹಂ ಮೂಡಿಸಿಲ್ಲವೇ? ಈ ಅನುಮಾನಕ್ಕೆ ಡ್ರಮ್ಮರ್ ಅರುಣ್ ಸುಕುಮಾರ್ ಹೀಗಂದರು… “ನಾವೆಷ್ಟೇ ಬೆಳೆದರೂ ಸ್ನೇಹ, ಸಂಗೀತವನ್ನು ಮರೆತಿಲ್ಲ. ಹೀಗಾಗಿ, ನಮ್ಮಲ್ಲಿ ಯಾರಲ್ಲೂ ಅಹಂ ಹುಟ್ಟಿಲ್ಲ. ವೇದಿಕೆ ಏರಿದಾಕ್ಷಣ ನೇಮು- ಫೇಮುಗಳನ್ನೆಲ್ಲಾ ಮರೆತು ಸಂಗೀತದೊಟ್ಟಿಗೆ ಬೆರೆತುಹೋಗುತ್ತೇವೆ. ಅದೇ ನಮ್ಮನ್ನು ಒಗ್ಗೂಡಿಸಿರುವುದು’ ಅಂದರು.
Advertisement
ಈ ಮನೋ ಹೊಂದಾಣಿಕೆಯೇ ಲಯತರಂಗದ ಶಕ್ತಿ
ಲಯತರಂಗವನ್ನು ಆರಂಭಿಸಿದವರು ವಿದ್ವಾನ್ ಅರುಣ ಸುಕುಮಾರ್, ಗಿರಿಧರ್ ಉಡುಪ. ಬೆಂಗಳೂರಿನ ಚಾಮರಾಜಪೇಟೆಯ ಮಹಿಳಾಮಂಡಳಿ ಶಾಲೆಯಲ್ಲಿ ಒಂದೇ ಬೆಂಚಿನ ಗೆಳೆಯರು. ಅರುಣ್ ಡ್ರಂ, ಗಿರಿಧರ್ ಉಡುಪ ಘಟಂ ನುಡಿಸುತ್ತಿದ್ದರು. ಬದುಕಿನಲ್ಲಿ ಏನಾದರು ಮಾಡಬೇಕಲ್ಲ ಅಂತ ಅಂದುಕೊಳ್ಳುವ ಹೊತ್ತಿಗೆ ಹೊಳೆದದ್ದು ಲಯತರಂಗ ತಂಡ ಕಟ್ಟುವ ಐಡಿಯಾ.
ಆರಂಭದಲ್ಲಿ ಇವರೇ ಎರಡು ಕಂಬಗಳಾದರು. ಡಾ. ವಿಷ್ಣು ಸ್ವರೂಪ್, ಪ್ರಮಥ್ ಕಿರಣ್ ಜೊತೆಯಾದಾಗ ಕಂಬ ನಾಲ್ಕಾಯಿತು. ವಿಷ್ಣು ಸ್ವರೂಪ್ ವಿದೇಶಕ್ಕೆ ಹಾರಿದರು. ರವಿಚಂದ್ರ ಕುಲೂರ್, ಜಯಚಂದ್ರ ತಂಡ ಸೇರಿಕೊಂಡರು. ಈ ತಂಡ ರೂಪಿಸಿದ ಪುನರ್‌ನವ ಆಲ್ಬಂನಲ್ಲಿದ್ದ ಭಾಗ್ಯದಲಕ್ಷಿ$¾àಬಾರಮ್ಮ ಕಂಪೋಸಿಷನ್ ಮನಮೆಚ್ಚಿದ ಹಾಡಾಯಿತು. ತಾಂಡವ, ಪ್ರಣವ, ಸ್ಮತಿ, ಆನಂದಂ ಆಲ್ಬಂಗಳು ಹಿಟ್ ಆದವು. ಆಗಲೇ ಲಯತರಂಗಕ್ಕೆ ದೊಡ್ಡ ಕೇಳುವ ವರ್ಗ ಹುಟ್ಟಿಕೊಂಡಿದ್ದು.
ಈ ಐದೂ ಜನ ಲಯತರಂಗದ ಅಂತರಂಗ. ಎರಡು ದಶಕದಲ್ಲಿ 50 ದೇಶ ತಿರುಗಿದ್ದಾರೆ. ಈ ತಂಡ ಒಂದೇ ಸಂಗೀತಕ್ಕೆ ಅಂಟಿಕೊಂಡಿಲ್ಲ. ಹಿಂದೂಸ್ತಾನಿ, ಕರ್ನಾಟಕಿ, ಪಾಶ್ಚಾತ್ಯ ಸಂಗೀತ ಸೇರಿದ ಪ್ರಸ್ತುತಿಯೇ ಇದರ ವಿಶೇಷ. ಪ್ರಮಥ್ ಕಿರಣ್ ಲ್ಯಾಟಿನ್ ವಾದ್ಯಗಳನ್ನು ಬಳಸುವುದರಿಂದ “ಲಯತರಂಗ’ದ ಅಂತರಂಗದ ಸಂಗೀತದ ಹರಿವೇ ಬೇರೆ ರೀತಿಯಾಗಿದೆ. ಸಮಯ ಸಿಕ್ಕರೆ ಸಾಕು. ಎಲ್ಲರೂ ಕಲೆತು, ಸಂಗೀತದ ಬಗ್ಗೆ ಚರ್ಚಿಸಿ, ರಿಯಾಜು ಮಾಡುವ ರೂಢಿ ಇಂದಿಗೂ ಇಟ್ಟುಕೊಂಡಿದ್ದಾರೆ. ಜಗದ ಸಂಗೀತ ವೇದಿಕೆಯ ಎಲ್ಲ ಅನುಭವಗಳನ್ನು ಕಲೆಸಿ ಇಲ್ಲಿ ಪ್ರಸ್ತುತಪಡಿಸುವುದರಿಂದಲೇ “ಲಯತರಂಗ ಸಂಗೀತೋ ಭಿನ್ನ ರುಚಿಃ’ ಅಂತಾಗಿದೆ.