Advertisement

ನಂದೇ ತುಂಬಾ ಕಾಂಟ್ರಾವರ್ಸಿ ಇದೆ, ಮತ್ತೊಂದು ಕಾಂಟ್ರಾವರ್ಸಿ ಯಾಕೆ; ರೈ

05:20 PM Jul 31, 2018 | Sharanya Alva |

ವಾಲ್ಮೀಕಿ’ ಚಿತ್ರದ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಲಕ್ಷ್ಮೀ ರೈ ಆ ನಂತರ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ಮೂರ್‍ನಾಲ್ಕು ವರ್ಷಗಳಿಂದ ಕನ್ನಡದ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಈಗ “ಝಾನ್ಸಿ’ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಲಕ್ಷ್ಮೀ ರೈ ತಮ್ಮ ಸಿನಿಕೆರಿಯರ್‌ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ …

Advertisement

1. ತುಂಬಾ ಗ್ಯಾಪ್‌ನ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೀರಿ. ಯಾಕೆ ಇಷ್ಟೊಂದು ಗ್ಯಾಪ್‌?
– ಇದಕ್ಕೆ ನಿಖರವಾದ ಕಾರಣವೇನು ಇಲ್ಲ. ಬಾಲಿವುಡ್‌ನ‌ಲ್ಲಿ ಬಿಝಿ ಇದ್ದೆ. “ಜೂಲಿ’ ಸಿನಿಮಾಕ್ಕೆ ಎರಡು ವರ್ಷ ಸಮಯ ತಗೊಂಡಿತು. ಆ ಗ್ಯಾಪ್‌ನಲ್ಲಿ ಕನ್ನಡದಿಂದಲೂ ಕೆಲವು ಆಫ‌ರ್‌ಗಳು ಬಂದವು. ಡೇಟ್ಸ್‌ ಸಮಸ್ಯೆಯಿಂದ ಒಪ್ಪಿಕೊಳ್ಳಲಿಲ್ಲ. “ಜೂಲಿ’ ನಂತರ ತಮಿಳು-ತೆಲುಗು ಸಿನಿಮಾದಲ್ಲಿ ಬಿಝಿಯಾಗಿದ್ದೆ. ಆ ಕಾರಣದಿಂದ ಒಂದಷ್ಟು ಗ್ಯಾಪ್‌ ಆಗಿದ್ದು ನಿಜ. ಕನ್ನಡ ನನಗೆ ತುಂಬಾನೇ ಸ್ಪೆಷಲ್‌. ಅದಕ್ಕೇ, ಸ್ಪೆಷಲ್‌ ಆಗಿ ಎಂಟ್ರಿಕೊಡುತ್ತಿರುತ್ತೇನೆ. 

2. “ಝಾನ್ಸಿ’ ಮೂಲಕ ನಾಯಕಿ ಪ್ರಧಾನ ಚಿತ್ರದತ್ತ ವಾಲಿದ್ದೀರಿ?
– ನನಗೆ ನಾಯಕಿ ಪ್ರಧಾನ ಚಿತ್ರ ಹೊಸತಲ್ಲ. ಆದರೆ, ಆ್ಯಕ್ಷನ್‌ ಹೊಸತಷ್ಟೇ. ಹೀರೋ ಸಿನಿಮಾದಲ್ಲಿ ನಾಯಕಿಯಾಗಿದ್ದಾಗ ಏನು ಮಾಡೋಕ್ಕಾಗಲ್ವೋ ಅದನ್ನು ಮಾಡಬೇಕೆಂಬ ಆಸೆಯೊಂದಿಗೆ ಹೀರೋಯಿನ್‌ ಓರಿಯೆಂಟೆಡ್‌ ಸಿನಿಮಾವನ್ನು ನಾಯಕಿಯರು ಒಪ್ಪಿಕೊಳ್ಳುತ್ತಾರೆ. ಇವತ್ತು  ನಾಯಕಿ ಪ್ರಧಾನ ಚಿತ್ರಗಳಿಗೆ ಮಾರುಕಟ್ಟೆ ಓಪನ್‌ ಆಗಿದೆ. 

3. ಇದು ನಿಮ್ಮ ಮೊದಲ ಆ್ಯಕ್ಷನ್‌ ಸಿನಿಮಾನಾ?
– ಹೌದು, ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಆ್ಯಕ್ಷನ್‌ ಮಾಡಿದ್ದೆ. ಆದರೆ, “ಝಾನ್ಸಿ’ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾ. ಈ ಹಿಂದೆಯೇ ನನಗೆ ಆ್ಯಕ್ಷನ್‌ ಸಿನಿಮಾಗಳ ಅವಕಾಶಗಳು ಬಂದಿದ್ದವು. ಆದರೆ, ಆಗ ನಾನು ರೆಡಿಯಾಗಿರಲಿಲ್ಲ. ಆ್ಯಕ್ಷನ್‌ ಸಿನಿಮಾದಲ್ಲಿ ನಟಿಸಬಹುದೆಂಬ ವಿಶ್ವಾಸ ಬಂದಿರಲಿಲ್ಲ. ವಿಶ್ವಾಸವಿಲ್ಲದೇ ಸುಮ್ಮನೆ ಒಪ್ಪಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಈಗ ರೆಡಿಯಾಗಿದ್ದೇನೆ. ಹಾಗಂತ ಒಂದಷ್ಟು ಪೂರ್ವತಯಾರಿಯ ಅಗತ್ಯವಿದೆ. ಅದೇ ಕಾರಣದಿಂದ ನಿರ್ದೇಶಕರಲ್ಲಿ ಸಮಯ ಕೇಳಿದ್ದೇನೆ. ಮಾರ್ಷಲ್‌ ಆರ್ಟ್ಸ್ನ ಬೇಸಿಕ್‌ ಅಂಶಗಳನ್ನು ಕಲಿಯಬೇಕೆಂದಿದ್ದೇನೆ. ಇಲ್ಲಿ ನನ್ನ ಪಾತ್ರ ಕೂಡಾ ನಾಲ್ಕು ಶೇಡ್‌ಗಳೊಂದಿಗೆ ಸಾಗುತ್ತದೆ. ಆ್ಯಕ್ಷನ್‌ ಕೂಡಾ ವಿಭಿನ್ನವಾಗಿದೆ. 

4. ಆ್ಯಕ್ಷನ್‌ ಸಿನಿಮಾಗಳಿಗೆ ಬ್ರಾಂಡ್‌ ಆಗುವ ಭಯವಿಲ್ಲವೇ?
– ಖಂಡಿತಾ ಇಲ್ಲ. ಏಕೆಂದರೆ ನಾನು ಕೇವಲ ಕನ್ನಡವೊಂದರಲ್ಲಿ ನಟಿಸುತ್ತಿಲ್ಲ. ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಹಾಗಾಗಿ, ಹೊಸ ಬಗೆಯ ಪಾತ್ರಗಳು ಸಿಗುತ್ತವೆ. ಆಯ್ಕೆಯ ಅವಕಾಶಗಳು ಹೆಚ್ಚಿವೆ. ಅದಕ್ಕಿಂತ ಹೆಚ್ಚಾಗಿ ನಾನು ಚಿತ್ರರಂಗಕ್ಕೆ ಹೊಸಬಳಲ್ಲ. ಹೊಸಬರು ಆ್ಯಕ್ಷನ್‌ ಮಾಡಿದರೆ ಅಥವಾ ಗ್ಲಾಮರ್‌ ಪಾತ್ರ ಮಾಡಿದರೆ, ಅದಕ್ಕೆ ಬ್ರಾಂಡ್‌ ಆಗುವ ಅಪಾಯವಿದೆ. ಆದರೆ, ನಾನು ಚಿತ್ರರಂಗಕ್ಕೆ ಪರಿಚಿತ ಮುಖ. ಹಾಗಾಗಿ ಆ ಭಯವಿಲ್ಲ. ಒಂದು ವೇಳೆ “ಝಾನ್ಸಿ’ ಹಿಟ್‌ ಆದರೆ, ಬಹುಶಃ ಈ ತರಹದ ಪಾತ್ರಗಳು ಹುಡುಕಿಕೊಂಡು ಬರಬಹುದೇನೋ.

Advertisement

5. ಹಿಂದಿಯಿಂದ ಆಫ‌ರ್‌ಗಳಿಲ್ವಾ?
– “ಜೂಲಿ’ ನಂತರ ನನಗೆ ಮತ್ತೆ ಅಂತಹುದೇ ಕಥೆಗಳು ಹುಡುಕಿಕೊಂಡು ಬಂದವು. ನನಗೆ ಮಾಡಿದ್ದನ್ನೇ ಮಾಡಲು ಇಷ್ಟವಿಲ್ಲ. ಸ್ಕ್ರಿಪ್ಟ್ ಎಕ್ಸೆ„ಟಿಂಗ್‌ ಆಗಿದ್ದರೆ ಓಕೆ. ಅದಕ್ಕಿಂತ ಹೆಚ್ಚಾಗಿ “ಜೂಲಿ’ ನಂತರ ನಾನು ಸೌತ್‌ ಇಂಡಸ್ಟ್ರಿಯಲ್ಲಿ ಬಿಝಿಯಾದೆ. 

6. ಈಗ ಬಯೋಪಿಕ್‌ ಟ್ರೆಂಡ್‌. ನಿಮಗೆ ಆಫ‌ರ್‌ ಬಂದಿಲ್ವಾ?
– ಇಲ್ಲ. ಅದಕ್ಕಿಂತ ಹೆಚ್ಚಾಗಿ ನನಗೆ ಬಯೋಪಿಕ್‌ ಮಾಡಲು ಇಷ್ಟವಿಲ್ಲ. ಅದರಲ್ಲೂ ರಾಜಕೀಯ ವ್ಯಕ್ತಿಗಳ ಬಯೋಪಿಕ್‌ ಬಂದರೆ ದೂರವೇ ಉಳಿಯುತ್ತೇನೆ. ನಂದೇ ತುಂಬಾ ಕಾಂಟ್ರಾವರ್ಸಿ ಇದೆ. ಇನ್ನು ಬಯೋಪಿಕ್‌ ಒಪ್ಪಿಕೊಂಡು ಮತ್ತೂಂದಿಷ್ಟು ಕಾಂಟ್ರಾವರ್ಸಿ ಮಾಡೋದು ಬೇಡ ಎಂದು. 

7. ನಿಮ್ಮನ್ನು ಜನ ಯಾವ ಭಾಷೆಯ ನಟಿ ಎಂದು ಗುರುತಿಸುತ್ತಾರೆ?
– ದಕ್ಷಿಣ ಭಾರತೀಯ ನಟಿ ಎಂದು ಗುರುತಿಸುತ್ತಾರೆ. ಕನ್ನಡದವರು ಯಾಕೆ ನೀವು ಜಾಸ್ತಿ ಕನ್ನಡ ಸಿನಿಮಾ ಮಾಡುತ್ತಿಲ್ಲ ಎಂದು ಕೇಳುತ್ತಾರೆ. ನನಗೆ ಒಳ್ಳೆಯ ಸ್ಕ್ರಿಪ್ಟ್ ಮುಖ್ಯ. ಜೊತೆಗೆ ಸಿನಿಮಾ ಎಲ್ಲೆಡೆ ತಲುಪಬೇಕು. ನಾನು ಎಂಟ್ರಿಕೊಟ್ಟಿದ್ದು ಕನ್ನಡದ ಮೂಲಕವಾದರೂ ಲಕ್ಷ್ಮಿರೈ ನಟಿಯಾಗಿ ಗುರುತಿಸಿಕೊಂಡಿದ್ದು ತಮಿಳಿನಲ್ಲಿ. ಅದಕ್ಕೆ ಕಾರಣ ಆ ಸಿನಿಮಾಗಳ ರೀಚ್‌. ನನಗೆ ಭಾಷೆ ಮುಖ್ಯವಲ್ಲ. ಪಾತ್ರವಷ್ಟೇ ಮುಖ್ಯ.

8. ಕನಸಿನ ಪಾತ್ರ?
– ನನಗೆ ಮಾನಸಿಕ ಅಸ್ವಸ್ಥೆಯ ಪಾತ್ರ ಮಾಡಬೇಕೆಂಬ ಆಸೆ. ಆ ಪಾತ್ರ ನನ್ನ ಪರ್ಸನಾಲಿಟಿಗೆ ಒಪ್ಪಲ್ಲ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿ ಮಾಡಬೇಕು. ಸದ್ಯದಲ್ಲೇ ಆ ತರಹದ ಒಂದು ಪಾತ್ರ ಮಾಡುತ್ತೇನೆ.

9. ಮದುವೆ ಯಾವಾಗ?
– ಸದ್ಯ ಕೈ ತುಂಬಾ ಕೆಲಸವಿದೆ. ಕೆಲಸವೇ ನನ್ನ ಸಂಗಾತಿಯಾಗಿಬಿಟ್ಟಿದೆ. ನೀವು ತುಂಬಾ ಬಿಝಿ ಇರುವಾಗ ನಿಮಗೆ ಮದುವೆ ಯೋಚನೆ ಬರೋದಿಲ್ಲ. ಫ್ರೀಯಾಗಿದ್ದಾಗ ಲವ್‌, ರಿಲೇಶನ್‌ಶಿಪ್‌, ಮದುವೆ ಎಲ್ಲಾ ಯೋಚನೆ ಬರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next