Advertisement

ತೈಲ ಬೆಲೆ ಏರಿಕೆ ವಿರೋಧಿಸಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನೇತೃತ್ವದಲ್ಲಿ ಪ್ರತಿಭಟನೆ

02:55 PM Jun 11, 2021 | Team Udayavani |

ಬೆಳಗಾವಿ: ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಜನಸಾಮಾನ್ಯರು ಈಗ ಉಗಿಯುವ ಸ್ಥಿತಿ ಬಂದಿದೆ. ಬಡವರು, ಮಧ್ಯಮ ವರ್ಗದವರ ಜೀವನ ಅಲ್ಲೋಲಕಲ್ಲೋಲವಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕಿಡಿಕಾರಿದರು.

Advertisement

ಬೆಳಗಾವಿಯ ಹಿಂಡಲಗಾ ಪೆಟ್ರೋಲ್ ಬಂಕ್ ಬಳಿ, ಪೆಟ್ರೋಲ್, ಡಿಸೆಲ್ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ಹಿಂಡಲಗಾ ಪೆಟ್ರೊಲ್ ಬಂಕ್ ಮುಂಭಾಗದಲ್ಲಿ #Petrol100NotOut ಎಂಬ ಆಂದೋಲನದ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಇದು ಕಾಂಗ್ರೆಸ್ ಪ್ರತಿಭಟನೆ ಅಲ್ಲ, ಜನಸಾಮಾನ್ಯರ ಪ್ರತಿಭಟನೆ. ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ, ಗ್ಯಾಸ್ ಸಿಲೆಂಡರ್, ವಿದ್ಯುತ್ ಎಲ್ಲದರ ಬೆಲೆ ಏರಿದೆ. ಕೊರೋನಾ ಸಂಕಷ್ಟದ ಮಧ್ಯೆ ಎಲ್ಲರ ಜೀವನ ಹಾಳಾಗುತ್ತಿದೆ. ಅಚ್ಛೇದಿನ್ ಬರೇ ಕನಸು, ಬರೇ ಸುಳ್ಳು. ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ಸಂಕಷ್ಟದಲ್ಲಿ ಮೊದಲಿನಿಂದಲೂ ಜನರೊಂದಿಗೆ ನಿಲ್ಲುತ್ತ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ. 50ರಷ್ಟು ತೆರಿಗೆ ಕಡಿಮೆ ಮಾಡಿ ಕೊಡಲಿ ಎಂದು ಆಗ್ರಹಿಸಿದರು.

ಕೆಟ್ಟ ದಿನಗಳನ್ನು ಬಿಜೆಪಿ ಸರ್ಕಾರ ಜನಸಾಮಾನ್ಯರ ಎದುರು ತಂದಿದೆ. ಸರಕಾರಕ್ಕೆ ಚಾಟಿ ಬೀಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕಾಂಗ್ರೆಸ್ ಮೇಲೆ ಗೂಬೆ ಕೂಡ್ರಿಸುವುದನ್ನು ಬಿಡಿ. ಜನರನ್ನು ಮೂರ್ಖರನ್ನಾಗಿಸಬೇಡಿ. ಸರ್ಕಾರಕ್ಕೆ ಕಿವಿಯೂ ಕೇಳ್ತಾ ಇಲ್ಲ, ಕಣ್ಣೂ ಕಾಣ್ತಾ ಇಲ್ಲ. ಮನಮೋಹನ್ ಸಿಂಗ್ ಸರಕಾರ ಇದ್ದಾಗ ಪ್ಟ್ರೋಲ್ ಬೆಲೆ 58 ರೂ., ಡಿಸೆಲ್ ಬೆಲೆ 45 ರೂ. ಇತ್ತು. ಆದರೆ ಇಂದು ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಬೆಲೆ ಹೆಚ್ಚಾಗಿದೆ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬೈಕ್ ಸವಾರನ ಬೈಕ್ ಗೆ ಸ್ವತಃ ಪೆಟ್ರೋಲ್ ಹಾಕಿದ ಲಕ್ಷ್ಮಿ ಹೆಬ್ಬಾಳಕರ್ 200 ರೂ. ಪಡೆದರು. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಬೈಕ್ ಗಳನ್ನು ಪೆಟ್ರೋಲ್ ಬಂಕ್ ಎದುರು ಮಲಗಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳಕರ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next