Advertisement
ಕೊಡಗಿನ ಇಪುì ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಬೀಳುತ್ತಿರುವ ಜಡಿಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಶುಕ್ರವಾರದಿಂದ ಮಳೆ ಸ್ವಲ್ಪಮಟ್ಟಿಗೆ ಕಡಿಮೆಯಾದರೂ ನೀರಿನ ಪ್ರವಾಹ ಹೆಚ್ಚುತ್ತಲೇ ಇದೆ. ನೀರಿನ ಮಟ್ಟ ಅರ್ಧ ಅಡಿ ಹೆಚ್ಚಿದ್ದರಿಂದ ಹನಗೋಡು ಭಾಗದ ಹತ್ತಾರು ಹಳ್ಳಿಗಳ ಹೊಳೆ ಅಂಚಿನ ಜಮೀನಿನ ಬೆಳೆಗಳು ಜಲಾವೃತವಾಗಿದೆ.
Related Articles
Advertisement
ತುಂಬಿದ 42 ಕೆರೆಗಳು: ಹನಗೋಡು ಅಣೆಕಟ್ಟೆಯ ಮುಖ್ಯ ನಾಲೆಗೆ 600 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಅಣೆಕಟ್ಟೆ ವ್ಯಾಪ್ತಿಯ ಎಲ್ಲ 42 ಕೆರೆಗಳಿಗೆ ನೀರು ತುಂಬಿಸಿದ್ದು, ಸುಮಾರು 24 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಲಿದೆ, ಹನುಮಂತಪುರ ಹಾಗೂ ಉದ್ದೂರು ನಾಲಾ ವ್ಯಾಪ್ತಿಯಲ್ಲಿ ಭತ್ತದ ನಾಟಿ ಚುರುಕುಗೊಂಡಿದೆ.
ಶನಿವಾರ ಮುಂಜಾನೆ ಜಡಿ ಮಳೆ ಆರಂಭವಾಗಿ ಮದ್ಯಾಹ್ನದವೇಳೆ ಸ್ವಲ್ಪಮಟ್ಟಿನ ಬಿಡುವು ನೀಡಿದೆ. ನಾಲೆಯ ಮೇಲೆ ನಿಗಾ ಇಡಲಾಗಿದ್ದು, ಮಳೆ ಹೆಚ್ಚಿರುವುದರಿಂದ ನಾಲೆಯಲ್ಲಿ ನೀರಿನ ಹರಿವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಾಗಿದೆ.
ಯುವಕರಿಗೆ ಎಇಇ ಎಚ್ಚರಿಕೆ: ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆಯ ಮೇಲೆ ನೀರಿನ ಹರಿವನ್ನು ಕಣ್ತುಂಬಿಕೊಳ್ಳಲು ನಿತ್ಯ ಸುತ್ತಮುತ್ತಲ ಹಳ್ಳಿಗಳ ನೂರಾರು ಮಂದಿ ಅಣೆಕಟ್ಟೆ ಏರಿಮೇಲೆ ನಿಂತು ವೀಕ್ಷಿಸುತ್ತಿದ್ದಾರೆ, ಯುವ ಪಡೆ ಅಣೆಕಟ್ಟೆ ಮೇಲೆ ದುಮ್ಮಿಕ್ಕುತ್ತಿರುವ ನೀರಿನೊಂದಿಗೆ ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿ ಅಪಾಯವಿದ್ದು, ಈ ಕಡೆ ಯಾರೂ ಓಡಾಡಬಾರದೆಂದು ಹನಗೋಡು ಹಾರಂಗಿ ಕಚೇರಿಯ ಎಇಇ ಕುಶುಕುಮಾರ್ ಎಚ್ಚರಿಕೆ ನೀಡಿದ್ದಾರೆ.