Advertisement
ಕೆಪಿಸಿಸಿ ಚುನಾವಣ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಪ್ರತಿನಿಧಿ ಸುವ ಬಬಲೇಶ್ವರ ಕ್ಷೇತ್ರ ಈ ಬಾರಿ ರಾಜಕೀಯ ವರ್ಣರಂಜಿತ ರಣರಂಗಕ್ಕೆ ಸಾಕ್ಷಿಯಾಗುವ ಮುನ್ಸೂಚನೆ ಇದೆ. ಇವರ ವಿರುದ್ಧ ಜೆಡಿಎಸ್‌ನಿಂದ 2 ಬಾರಿ, ಬಿಜೆಪಿಯಿಂದ ಒಂದು ಬಾರಿ ಸೋತಿರುವ ವಿಜುಗೌಡ ಅವರಿಗಿಂತ ಬಲಿಷ್ಠ ಹೊಸ ಮುಖದ ಹುಡುಕಾಟ ನಡೆಸಿದೆ ಬಿಜೆಪಿ. ಆಪರೇಷನ್ ಕಮಲದಿಂದ ಅಥಣಿ ಕ್ಷೇತ್ರ ಕಳೆದುಕೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಣ್ಣು ಇದೇ ಕ್ಷೇತ್ರದ ಮೇಲಿದೆ. ಎಂ.ಬಿ. ಪಾಟೀಲ್ ಅವರನ್ನು ಹೇಗಾದರೂ ಮಾಡಿ ಸೋಲಿ ಸಲು ಕಮಲ ಪಾಳೆಯ ಅದಾಗಲೇ ಆಂತರಿಕ ರಣತಂತ್ರ ರೂಪಿಸಿದೆ.
Related Articles
Advertisement
ಇನ್ನು ಇದೇ ಕ್ಷೇತ್ರದಲ್ಲಿ ಶಿವಾನಂದ ಪಾಟೀಲರನ್ನು ಸೋಲಿಸಬೇಕೆಂದು ಜೆಡಿಎಸ್ ಪಕ್ಷದಿಂದ ಹ್ಯಾಟ್ರಿಕ್ ಸೋಲು ಕಂಡಿರುವ ಸೋಮನಗೌಡ ಪಾಟೀಲ್ ಮನಗೂಳಿ ಅವರನ್ನು ಬಿಜೆಪಿ ತನ್ನತ್ತ ಸೆಳೆದಿದೆ. ಟಿಕೆಟ್ ನೀಡಿಕೆ ಭರವಸೆ ಇದೆ ಎಂಬ ಮಾತಿದೆ. ಕಳೆದ ಬಾರಿ ಸಂಗರಾಜ ದೇಸಾಯಿಗೆ ಬಿಜೆಪಿ ಮಣೆ ಹಾಕಿದ್ದರಿಂದ ಟಿಕೆಟ್ ವಂಚಿತರಾಗಿದ್ದ ಬೆಳ್ಳುಬ್ಬಿ ವಿಜಯಪುರ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪಡೆದು ಹೀನಾಯ ಸೋಲು ಅನುಭವಿಸಿದ್ದರು. ಮತ್ತೆ ಬಿಜೆಪಿ ಸೇರಿರುವ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಪಾಳೆಯದಲ್ಲಿ ಇದೀಗ ಮತ್ತೆ ಅಸಮಾಧಾನ ಹೊಗೆಯಾಡುತ್ತಿದೆ.
ರಾಜ್ಯ ರಾಜಕಾರಣಕ್ಕೆ ಸಂಸದ ಜಿಗಜಿಣಗಿ? ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ಕ್ಷೇತ್ರದಲ್ಲಿ ಸದ್ಯಕ್ಕೆ ಜೆಡಿಎಸ್‌ನ ದೇವಾನಂದ ಚವ್ಹಾಣ ಶಾಸಕರಾಗಿದ್ದು, ಬಿಜೆಪಿಯಿಂದ ಸ್ಪಧಿ ìಸಲು ಕೇಂದ್ರದ ಮಾಜಿ ಸಚಿವ-ಹಾಲಿ ಸಂಸದ ರಮೇಶ್ ಜಿಗಜಿಣಗಿ ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಮಾಜಿ ಶಾಸಕ ವಿಠ್ಠಲ ಕಟಕದೊಂಡ ಬದಲಿಗೆ ಹೊಸ ಮುಖದ ಹುಡುಕಾಟದಲ್ಲಿದೆ. ಬಿಜೆಪಿ ಶಾಸಕ ಸೋಮನಗೌಡ ಸಾಸನೂರು ದೇವರಹಿಪ್ಪರಗಿ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ಹೊಸ ಮುಖದ ಹುಡುಕಾಟದಲ್ಲಿದೆ. ಸಿಂದಗಿ, ಮುದ್ದೇಬಿಹಾಳ, ದೇವರಹಿಪ್ಪರಗಿ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ನಿಂದ ಸದ್ಯಕ್ಕೆ ಕಳೆದ ಬಾರಿಯ ಸಾಂಪ್ರದಾಯಿಕ ಎದುರಾಳಿಗಳೇ ಮತ್ತೆ ಮುಖಾಮುಖೀಯಾಗುವ ಸಾಧ್ಯತೆ ಇದೆ. ಸಂಘಟನೆ ದೃಷ್ಟಿಯಿಂದ ಜೆಡಿಎಸ್ ಜಿಲ್ಲೆಯಲ್ಲಿ ದುರ್ಬಲವಾಗಿದೆ, ಚುನಾವಣೆ ವೇಳೆಗೆ ಅನ್ಯ ಪಕ್ಷಗಳ ಟಿಕೆಟ್ ವಂಚಿತರು ಈ ಪಕ್ಷದತ್ತ ಜಿಗಿಯುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಆಮ್ ಆದ್ಮಿ ಪಕ್ಷದಿಂದಲೂ ಅನ್ಯ ಪಕ್ಷಗಳ ಅಸಮಾಧಾನಿತರು ಸ್ಪ ರ್ಧಿಸುವ ನಿರೀಕ್ಷೆ ಇದೆ. ಜಿ.ಎಸ್. ಕಮತರ