Advertisement

ನಿರ್ಭಯಾ ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಕೋರಿದ ವಕೀಲರಿಂದ ಬ್ರಿಜ್ ಭೂಷಣ್ ಪರ ವಾದ

09:00 AM Jul 19, 2023 | Team Udayavani |

ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿರುವ ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಅವರಿಗೆ ಮಂಗಳವಾರ ಅವೆನ್ಯೂ ನ್ಯಾಯಾಲಯ ಎರಡು ದಿನದ ಮಧ್ಯಂತರ ಜಾಮೀನು ನೀಡಿದೆ.

Advertisement

2012 ರ ನಿರ್ಭಯಾ ಪ್ರಕರಣದಲ್ಲಿ ಪೊಲೀಸರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಾದ ಮಂಡಿಸಿದ್ದ ಹಾಗೂ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಕೋರ್ಟಿನಲ್ಲಿ ವಾದ ಮಂಡಿಸಿದ್ದ ಮೋಹನ್‌ ಅವರು ಕುಸ್ತಪಟುಗಳ ಪ್ರಕರಣದಲ್ಲಿ ಬ್ರಿಜ್‌ ಪರವಾಗಿ ವಾದ ಮಂಡಿಸಿದ್ದಾರೆ.

ರಾಜೀವ್ ಮೋಹನ್ ಮಂಗಳವಾರ ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ನಲ್ಲಿ ಬ್ರಿಜ್ ಭೂಷಣ್ ಪರ ವಾದ ಮಂಡಿಸಿದ್ದಾರೆ. ಸದ್ಯ ಕೋರ್ಟ್ ಬ್ರಿಜ್‌ ಭೂಷಣ್‌ ಅವರಿಗೆ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿದೆ. ಅವರ ಮುಂದಿನ ಜಾಮೀನು ಅರ್ಜಿಯ ವಿಚಾರಣೆ ಜುಲೈ 20 ರಂದು ನಡೆಯಲಿದೆ.

ಈ ವರ್ಷದ ಆರಂಭದಿಂದಲೇ ಸಾಕ್ಷಿ ಮಲ್ಲಿಕ್‌ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿ ಪ್ರತಿಭಟನೆ ನಡೆಸಿದ್ದಾರೆ.  ಕುಸ್ತಿಪಟುಗಳು ಬ್ರಿಜ್ ಭೂಷಣ್ ರನ್ನು ಡಬ್ಲ್ಯುಎಫ್‌ಐ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಜೂನ್ 2 ರಂದು ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳ ಆಧಾರದ ಮೇಲೆ ಎರಡು ಎಫ್ಐಆರ್ ಮತ್ತು 10 ದೂರುಗಳನ್ನು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next