Advertisement
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಬುಧವಾರ ನಡೆದ ಭಾರತದಲ್ಲಿ ಜಾರಿಯಲ್ಲಿರುವ ಮಹಿಳೆಯರ ಹಿತಕಾಗಿ ಸಿವಿಲ್ ಮತ್ತು ಕ್ರಿಮಿನಲ್ ಶಾಸನಗಳಿಗೆ ಸಂಬಂಧಿಸಿದಂತೆ ಹಿರಿಯ ವಕೀಲರಾದ ದಿವಂಗತ ಕೆ.ಎಂ.ಪೊನ್ನಪ್ಪ ಅವರ ಸ್ಮರಣಾರ್ಥ ಕಾನೂನು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಸ್. ಕವನ್ ಅವರು ಮಾತನಾಡಿ ದಿ| ಕೆ.ಎಂ. ಪೊನ್ನಪ್ಪ ಅವರು 1959ರಿಂದ 2004 ವರೆಗೆ ವಕೀಲರಾಗಿ ಸುದೀರ್ಘ ಕಾನೂನು ಸೇವೆ ಸಲ್ಲಿಸುವುದರ ಜೊತೆಗೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಮಹಿಳೆಯರ ಹಕ್ಕುಗಳು ಹಾಗೂ ಕಾನೂನಿಗೆ ಸಂಬಂಧಿಸಿ ಶೋಷಣೆಗೆ ಒಳಗಾದ ಮಹಿಳೆಯರ ಪರವಾಗಿ ನ್ಯಾಯ ದೊರಕಿಸಿ ಕೊಟ್ಟಿರುತ್ತಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ವಕೀಲರ ಸಂಘಕ್ಕೆ ಸವಲತ್ತುಗಳನ್ನು ನೀಡಿದ್ದು ಅವಿಸ್ಮರಣೀಯ. ಹಲವು ಉತ್ತಮ ವಕೀಲ ರನ್ನು ರೂಪಿಸಿದಂತಹ ಧೀಮಂತ ವ್ಯಕ್ತಿತ್ವ ಕೆ.ಎಂ. ಪೊನ್ನಪ್ಪ ಅವರದು. ಅವರ ಸ್ಮರಣಾರ್ಥ ನಡೆಸುತ್ತಿರುವ ಕಾರ್ಯಕ್ರಮವೂ ಮಹಿಳೆಯರಿಗೆ ಉಪಯುಕ್ತವಾದದ್ದು ಹಾಗೂ ವಿಶೇಷ ಕಾನೂನು ಸವಲತ್ತುಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಪ್ರಾಂಶುಪಾಲ ಡಾ| ಜಗತ್ ತಿಮ್ಮಯ್ಯ ಅವರು ಮಾತನಾಡಿ ಮಹಿಳೆಯರ ರಕ್ಷಣೆಗೆ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಇರುವಂತಹ ಕಾನೂನಿನ ಕುರಿತು ಅರಿವು ಮೂಡಿಸುತ್ತಿರುವ ಕಾರ್ಯಕ್ರಮವು ಪ್ರತಿಯೊಬ್ಬರಿಗೂ ಅನುಕೂಲವಾಗಲಿ ಎಂದರು. ಕೆ.ಎಂ. ಪೊನ್ನಪ್ಪ ಅವರ ಪತ್ನಿ ಸೌಭಾಗ್ಯ ಪೊನ್ನಪ್ಪ, ವಕೀಲರ ಸಂಘದ ಖಜಾಂಚಿ ಬಿ.ಸಿ. ದೇವಿಪ್ರಸಾದ್, ಕೆ.ಡಬ್ಲ್ಯು. ಬೋಪಯ್ಯ, ಶ್ರೀಧರ್ ನಾಯರ್, ಭಾನುಪ್ರಕಾಶ್, ಚಂದನ್, ದಿವ್ಯಾ, ಜನಿತಾ, ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ, ಉಪಸ್ಥಿತರಿದ್ದರು. ಕಿಶೋರ್ ನಿರೂಪಿಸಿದರು. ಜ್ಯೋತಿ ಶಂಕರ್ ವಂದಿಸಿದರು.
ಉಚಿತ ನೆರವುಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಅವರು ಮಾತನಾಡಿ ಮಹಿಳೆಯರ ಹಿತಕ್ಕಾಗಿ ಇರುವಂತಹ ಸಿವಿಲ್ ಮತ್ತು ಕ್ರಿಮಿನಲ್ ಕಾನೂನಿನ ಬಗ್ಗೆ ಮಾಹಿತಿ ನೀಡಿ, ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ನೀಡಲಾಗುತ್ತಿರುವ ಉಚಿತ ಕಾನೂನು ನೆರವು ಹಾಗೂ ಲೋಕ ಅದಾಲತ್ ಬಳಸಿಕೊಳ್ಳುವಂತೆ ಸಲಹೆ ಮಾಡಿದರು. ಮಹಿಳೆಯರಿಗೆ ತೊಂದರೆಗೊಳಗಾದ ಸಂದರ್ಭದಲ್ಲಿ ಕಾನೂನು ನೆರವನ್ನು ಉಚಿತವಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆದುಕೊಳ್ಳಬಹುದಾಗಿದೆ ರಾಜಿ ಸಂಧಾನ, ಮಧ್ಯಸ್ಥಿಕೆಯ ಮೂಲಕ ಸಕಾಲದಲ್ಲಿ ಪರಿಹಾರ ಕಲ್ಪಿಸಿಕೊಡಲಾಗುತ್ತಿದ್ದು, ಸಾಮಾನ್ಯ ದುರ್ಬಲ ಶೋಷಣೆಗೊಳಗಾದ ಮಹಿಳೆಯರಿಗೆ ಇರುವಂತಹ ಹಕ್ಕನ್ನು ಪಡೆದುಕೊಳ್ಳಲು ಮುಂದಾಗುವಂತೆ ನೂರುನ್ನಿಸಾ ಅವರು ಹೇಳಿದರು. ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಹಾಗೂ ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ ಜಿಕಾನೂನಿನ ನೆರವಿನ ಜೊತೆಗೆ ಪರಿಹಾರ ರೂಪದಲ್ಲಿ ಆರ್ಥಿಕ ನೆರವನ್ನೂ ನೀಡಲಾಗುತ್ತಿದೆ ಎಂದರು.