Advertisement

ಕಾನೂನು ತಿಳಿವಳಿಕೆ ಅಗತ್ಯ

04:00 PM Jan 26, 2020 | Suhan S |

ಅಕ್ಕಿಆಲೂರು: ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಹೊತ್ತು ಮುನ್ನಡೆದಿರುವ ನಮ್ಮ ದೇಶದಲ್ಲಿ ಕಾನೂನಿನ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸಬೇಕಾದ ಜವಾಬ್ದಾರಿ ಪ್ರತಿ ಭಾರತೀಯನದ್ದಾಗಿದೆ ಎಂದು ಸಿವಿಲ್‌ ನ್ಯಾಯಾಧೀಶರಾದ ಎಫ್‌ .ವಿ. ಕೆಳಗೇರಿ ಹೇಳಿದರು.

Advertisement

ಪಟ್ಟಣದ ಹಾನಗಲ್ಲ ತಾಲೂಕು ಶಿಕ್ಷಣದ ಸಂಘದ ಕಲಾ ಮತ್ತು ಎಸ್‌.ಬಿ. ಜಾಬೀನ್‌ ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಹೆಚ್ಚಾಗಿ ಇರುವುದಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ದೇಶದ ಕಾನೂನು ಸುವ್ಯವಸ್ಥೆ ಕುರಿತು ಪ್ರತಿಯೊಬ್ಬರೂ ಜವಾಬ್ದಾರಿ ಪ್ರದರ್ಶಿಸಬೇಕಾದ ಅನಿವಾರ್ಯತೆಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿ ಕಾನೂನಿನ ಅರಿವು ಮೂಡಿದಾಗ ಅಪರಾಧ ಸಂಖ್ಯೆಗಳಲ್ಲಿ ಇಳಿಮುಖವಾಗಿ, ಸ್ವಾಸ್ಥ  ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ನ್ಯಾಯವಾದಿ ವಿನಾಯಕ ಕುರುಬರ ಉಪನ್ಯಾಸ ನೀಡಿ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಂಬಂ ಧಿಸಿದಂತೆ ಕಾನೂನಿನಲ್ಲಿ ಹೊಸ ಮಾರ್ಪಾಡುಗಳಾಗುತ್ತಿವೆ. ಬದಲಾದ ವ್ಯವಸ್ಥೆಗಳ ಕುರಿತು ಪ್ರತಿಯೊಬ್ಬರು ಗಮನಹರಿಸಬೇಕಿದೆ. ಭಾರತದ ದಂಡ ಸಂಹಿತೆಯ ಅತ್ಯಾಚಾರ ಕಾನೂನಿಗೂ, 2012 ರಲ್ಲಿ ಜಾರಿಗೆ ಬಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಪೋಕ್ಸೋ  ಕಾಯ್ದೆಯಲ್ಲಿ ವಿವಿಧ ಹಂತದ ಸ್ವರೂಪಗಳನ್ನು ಲೈಂಗಿಕ ದೌರ್ಜನ್ಯಗಳಾಗಿ ಗುರುತಿಸಲಾಗುತ್ತದೆ. ಶಿಕ್ಷೆಯೂ ಕೆಲವೊಮ್ಮೆ ಕಠಿಣ ರೂಪದಲ್ಲಿರುತ್ತದೆ. ಈ ಕಾಯಿದೆಯಡಿ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿದ್ದು, ಈ ಕುರಿತು ವಿದ್ಯಾರ್ಥಿನಿಯರು, ಸಾರ್ವಜನಿಕರು ಅಗತ್ಯ ಗಮನ ನೀಡಬೇಕಿದೆ ಎಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೊತ್ತಂಬರಿ ಯುವಜಾಗೃತಿ ಮತ್ತು ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಉಪನ್ಯಾಸ ನೀಡಿದರು.

ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಅಧ್ಯಕ್ಷ ಷಣ್ಮುಖಪ್ಪ ಸಿಂಧೂರ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ನಿರಂಜನಪ್ಪ ಪಾವಲಿ, ವಿ.ಎಚ್‌. ಪೂಜಾರ, ಉಮೇಶ ಬೆಲ್ಲದ, ಕುಮಾರ ಧಾರವಾಡ, ಪ್ರಾಚಾರ್ಯ ಆರ್‌.ಎಫ್‌. ಗಾಳೆಪ್ಪನವರ, ಎಂ.ಗೋಪಾಲನಾಯ್ಕ, ಎಚ್‌.ಬಿ.ಉಮಾಪತಿ ಸೇರಿದಂತೆ ಕಾಲೇಜಿನ ಸಿಬ್ಬಂದಿವರ್ಗ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next