Advertisement

“ಜನನದಿಂದ ಮರಣದ ತನಕವೂ ಕಾನೂನು ಕಟ್ಟಲೆ ಆವಶ್ಯಕ’

02:51 AM May 06, 2019 | sudhir |

ಶನಿವಾರಸಂತೆ: ಮನುಷ್ಯನ ಜನನದಿಂದ ಮರಣದ ತನಕವೂ ಕಾನೂನು ಕಟ್ಟಲೆಯ ಅವಶ್ಯಕತೆ ಇದೆ ಎಂದು ಸೋಮವಾರಪೇಟೆ ಸಿವಿಲ್‌ ನ್ಯಾಯಲಯದ ಸಿವಿಲ್‌ ನ್ಯಾಯಧೀಶ ಪರಶುರಾಮ್‌ ದೊಡ್ಡಮನಿ ಹೇಳಿದರು. ಅವರು ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ, ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸೋಮವಾರಪೇಟೆ ತಾಲ್ಲೋಕು ಕಾನೂನು ಸೇವಾ ಸಮಿತಿ, ತಾಲ್ಲೋಕು ವಕೀಲರ ಸಂಘ ಹಾಗೂ ಶನಿವಾರಸಂತೆ ಗ್ರಾ.ಪಂ. ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು-ಮನುಷ್ಯನ ಜೀವನದ ಉದ್ದಕ್ಕೂ ಕಾನೂನಿನ ವ್ಯಾಪ್ತಿ ಒಳಗೊಂಡಿರುತ್ತದೆ ಆದರೆ ಕಾನೂನಿನ ಬಗ್ಗೆ ಅರಿತೊಕೊಳ್ಳುವವರು ವಿರಳ ಈ ನಿಟ್ಟಿನಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ, ಕೃಷಿ-ರೈತಾಪಿ ವರ್ಗದವರಿಗೆ, ಬಡವರ್ಗದವರು, ಅವಿದ್ಯಾವಂತರು ಮುಂತಾದವರು ಕಾನೂನು ನಿಯಮಗಳ ಬಗ್ಗೆ ಅರಿತುಕೊಳ್ಳಬೇಕೆಂಬ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಹಳ್ಳಿಗಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೂ ಕಾನೂನಿನ ಅಗತ್ಯವಿದೆ, ಪ್ರತಿಯೊಂದು ಕುಟುಂಬ ತಂದೆ ತಾಯಿ, ಅಣ್ಣತಮ್ಮ, ಅಕ್ಕ-ತಂಗಿ ಸಂಬಂಧಲ್ಲಿ ಆಸ್ತಿ ಪಡೆದುಕೊಳ್ಳುವ ಹಕ್ಕು ಬಂದಾಗಲೂ ಇದು ಕಾನೂನು ನಿಯಮದಂತೆ ನಡೆಯುತ್ತದೆ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ತಿಮ್ಮಯ್ಯ-ಕಾನೂನಿನ ಬಗ್ಗೆ ತಾನು ತಿಳಿದುಕೊಂಡಿದ್ದೇನೆಂಬ ಮನೋಭಾವನೆಯನ್ನು ಬಿಡಬೇಕು, ನಮ್ಮ ದೇಶದಲ್ಲಿ 900 ಕಿಂತ ಹೆಚ್ಚಿನ ಕಾನೂನುಗಳಿದ್ದು ಎಲ್ಲಾವನ್ನು ತಿಳಿದುಕೊಳ್ಳಲಾಗದಿದ್ದರೂ ಅವಶ್ಯಕತೆ ಇರುವ ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ಅರಿವು ಹೋದಬೇಕಾಗಿದೆ ಎಂದರು. ಕಾನೂನು ನಿಯಮಗಳಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು ಅದೆರೀತಿ ಕಾನೂನು ನಿಯಮಗಳ ತಿಳಿದುಕೊಂಡವರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಇಂತಹ ಸಂದರ್ಭದಲ್ಲಿ ಅಂಥಹವರು ಕಾನೂನು ಪರಿಣಾಮವನ್ನು ಎದುರಿಸಬೇಕಾಗುತ್ತದೆ, ಪ್ರತಿಯೊಬ್ಬರು ಮಗು ಹುಟ್ಟಿದ 1 ತಿಂಗಳ ಒಳಗಡೆ ಜನನ ನೋಂದಾವಣೆ ಮತ್ತು ವ್ಯಕ್ತಿ ಮರಣ ಹೊಂದಿದ ನಂತರ ತಿಂಗಳ ಒಳಗಡೆ ಮರಣ ನೋಂದಾವಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

Advertisement

ಜೀವನಾಂಶದ ಹಕ್ಕು ವಿಚಾರದ ಬಗ್ಗೆ ಸೋಮವಾರಪೇಟೆ ವಕೀಲ ಎಚ್‌.ಎಸ್‌.ವೆಂಕಟೇಶ್‌ ಮಾಹಿತಿ ನೀಡಿದರು. ಕತಹಶೀಲ್ದಾರ ಆರ್‌.ಗೋವಿಂದ್‌ರಾಜ್‌, ಗ್ರಾ.ಪಂ.ಅಧ್ಯಕ್ಷ ಮಹಮ್ಮದ್‌ಗೌಸ್‌ ಉಪಸ್ಥಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next