Advertisement

ಹಿರಿಯರ ರಕ್ಷಣೆಗೆ ಹೆಚ್ಚುತ್ತಿದೆ ಕಾನೂನು ಬಲ!

05:39 PM Nov 26, 2020 | Suhan S |

ರಾಯಚೂರು: ವಯಸ್ಸಾಗುತ್ತಿದ್ದಂತೆ ಹೆತ್ತವರನ್ನು ಕಡೆಗಣಿಸುತ್ತಿದ್ದ ಮಕ್ಕಳಿಗೆ ತಕ್ಕ ಶಾಸ್ತಿ ಕಲಿಸಲೆಂದೇಸರ್ಕಾರ 2007ರಲ್ಲಿ ಹಿರಿಯ ನಾಗರಿಕರ ಪಾಲನೆ, ಪೋಷಣೆ, ರಕ್ಷಣೆ ಕಾಯ್ದೆ ಜಾರಿ ಮಾಡಿತ್ತು. ಇಷ್ಟು ವರ್ಷ ಇದ್ದೂ ಇಲ್ಲದಂತಿದ್ದ ಈ ಕಾಯ್ದೆ ಜಿಲ್ಲೆಯಲ್ಲಿ ಈಚೆಗೆ ಸಮರ್ಪಕವಾಗಿ ಬಳಕೆಯಾಗುತ್ತಿದೆ.

Advertisement

ಸಹಾಯಕ ಆಯುಕ್ತರೇ ಪ್ರಕರಣಗಳ ವಿಚಾರಣೆ ನಡೆಸಿ ನ್ಯಾಯ ಕೊಡಿಸಬಹುದಾಗಿದ್ದು, ಈ ವರ್ಷ 17ದೂರುಗಳು ದಾಖಲಾಗಿವೆ. ಬಹುತೇಕ ದೂರುಗಳು ಆಸ್ತಿ, ಹಣಕಾಸಿನ ವಿಚಾರಕ್ಕೆ ಸಂಬಂಧಿ ಸಿದ್ದಾಗಿರುವುದುಗಮನಾರ್ಹ. 2019ರಲ್ಲಿ ಕೇವಲ 3 ದೂರುಗಳು ಮಾತ್ರಬಂದಿದ್ದವು. ಮಕ್ಕಳಿಂದಲೋ, ಮನೆಯವರಿಂದಲೋತೊಂದರೆಗೆ ಸಿಲುಕುವ 60 ವರ್ಷ ಮೇಲ್ಪಟ್ಟ ಹಿರಿಯನಾಗರಿಕರು ಈ ಕಾಯ್ದೆಯಡಿ ದೂರು ಸಲ್ಲಿಸಿ ನ್ಯಾಯಪಡೆಯಬಹುದು. ಸಹಾಯಕ ಆಯುಕ್ತರೇ ಸಕ್ಷಮಅಧಿ ಕಾರದಡಿ ವಿಚಾರಣೆ ಕೈಗೊಂಡು ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ವರ್ಷ 8 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. ಉಳಿದ 9ರಲ್ಲಿ ಎರಡು ಪ್ರಕರಣಗಳು ರಾಜಿ ಸಂಧಾನದಡಿ ಇತ್ಯರ್ಥಗೊಂಡರೆ, ಎರಡು ದೂರುಗಳು ತಿರಸ್ಕೃತಗೊಂಡಿವೆ. ಇನ್ನೂ ಐದು ಪ್ರಕರಣಗಳ ಇತ್ಯರ್ಥ ಬಾಕಿಯಿದೆ.

ಆಸ್ತಿಯೇ ಮೂಲ ಕಾರಣ: ತಂದೆ-ತಾಯಂದಿರಿಂದ ಆಸ್ತಿ ಬರೆಯಿಸಿಕೊಳ್ಳುವುದು, ಅವರ ಬಳಿಯಿದ್ದಹಣ ಪಡೆದು ಬಳಿಕ ಅವರನ್ನು ತಾತ್ಸಾರ ಮಾಡುವಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆತ್ತವರಿಂದ ಬಲವಂತದಿಂದ ಆಸ್ತಿ ಪರಭಾರೆ ಮಾಡಿಸಿಕೊಂಡು ಅವರನ್ನು ಹೊರದಬ್ಬುವುದು. ಮಕ್ಕಳು ದುಡಿಯುತ್ತಿದ್ದರೂ ಕುಟುಂಬ ನಿರ್ವಹಣೆಗೆ ಬಿಡಿಗಾಸು ನೀಡದಿರುವಂಥ ದೂರುಗಳು ಬಂದಿವೆ.ಆದರೆ, ಸಾಕಷ್ಟು ಹಿರಿಯ ನಾಗರಿಕರಿಗೆ ತಮಗೆ ಇಂಥದ್ದೊಂದು ಕಾನೂನು ಇದೆ ಎಂಬ ಪರಿಕಲ್ಪನೆಇಲ್ಲದೇ ನರಳುತ್ತಿದ್ದಾರೆ. ಸಹಾಯಕ ಆಯುಕ್ತರ ಕಚೇರಿಗೆ ಬಂದು ಸಮಸ್ಯೆ ಹೇಳಿಕೊಂಡರೆ ಅಲ್ಲಿನ ಸಿಬ್ಬಂದಿಯೇ ದೂರು ದಾಖಲಿಸಿಕೊಂಡು ಸಂಬಂ ಧಿಸಿದವರ ವಿಚಾರಣೆ ಕೈಗೊಳ್ಳಲಿದೆ.

ವಾಸ್ತವ ನೆಲೆಗಟ್ಟಿನಲ್ಲಿ ವಿಚಾರಣೆ: ಈ ಪ್ರಕರಣಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಲಾಗುತ್ತಿದೆ. ಪರ-ವಿರೋಧಕ್ಕೆ ವಕೀಲರ ನೇಮಕಕ್ಕೆಅವಕಾಶವಿಲ್ಲದ ಕಾರಣ ಸಹಾಯಕ ಆಯುಕ್ತರೇ ಇಬ್ಬರನ್ನು ಕರೆಯಿಸಿ ವಿಚಾರಣೆ ಮಾಡುತ್ತಾರೆ. ಸತ್ಯಾಸತ್ಯತೆ ಆಧರಿಸಿ ತೀರ್ಪು ನೀಡಲಾಗುತ್ತಿದೆ. ಮಕ್ಕಳ ವಿರುದ್ಧ ಹೆತ್ತವರ ದೂರು ಎಷ್ಟರ ಮಟ್ಟಿಗೆ ಸತ್ಯ, ಅವರ ನೈಜ ಸ್ಥಿತಿ ಏನು ಎಂಬುದನ್ನು ತಳಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕವೇ ಮುಂದಿನ ವಿಚಾರಣೆ ನಡೆಸಲಾಗುತ್ತಿದೆ.

ವ್ಯತಿರಿಕ್ತ ದೂರು ಸಾಧ್ಯತೆ: ಎಲ್ಲ ದೂರುಗಳಲ್ಲಿ ಹೆತ್ತವರ ಆರೋಪವೇ ಅಂತಿಮವಲ್ಲ. ಕೆಲವೊಮ್ಮೆ ವ್ಯತಿರಿಕ್ತ ದೂರುಗಳು ಬರುತ್ತಿವೆ. 80 ವರ್ಷದ ವೃದ್ಧರೊಬ್ಬರು ಮಗನ ವಿರುದ್ಧ ದೂರು ನೀಡಿದ್ದು, ನಿರಾಧಾರ ಆರೋಪಗಳನ್ನು ಮಾಡಿದ ಪ್ರಕರಣ ನಡೆದಿದೆ. ಸಹಾಯಕ ಆಯುಕ್ತರು ವಿಚಾರಣೆ ನಡೆಸಿದಾಗ 80ರ ಹರೆಯದಲ್ಲೂ ಹೆಂಡತಿ ಮೇಲೆ ಶಂಕಿಸುವುದು, ಆಸ್ತಿ ತನ್ನ ಹೆಸರಿಗಿದ್ದರೂ ಮಕ್ಕಳನ್ನು ದೂಷಿಸುವುದು ಗೊತ್ತಾಗಿದೆ. ತಂದೆ ಮಾಡಿದ ಅವಾಂತರಗಳನ್ನು ಕೇಳಿ ತಿಳಿದ ಬಳಿಕ ಪ್ರಕರಣ ರದ್ದು ಮಾಡಲಾಗಿದೆ. ಅಲ್ಲದೇ, ಮಕ್ಕಳು ಬಲವಂತವಾಗಿ ಆಸ್ತಿಯನ್ನು ಉಡುಗೊರೆ ರೂಪದಲ್ಲಿ ಪಡೆದು ಬಳಿಕ ಹೆತ್ತವರನ್ನು ಹೊರದಬ್ಬಿದಲ್ಲಿ ಅಂಥ ಆಸ್ತಿ ನೋಂದಣಿ ರದ್ದುಪಡಿಸುವ ಅವಕಾಶವೂ ಸಹಾಯಕ ಆಯುಕ್ತರಿಗಿದೆ.

Advertisement

ಸಹಾಯಕ ಆಯುಕ್ತರಿಗೆ ಇಂಥದ್ದೊಂದು ಅಧಿಕಾರ ಇರುವ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಸರ್ಕಾರ 2007ರಲ್ಲಿ ಜಾರಿಗೊಳಿಸಿದ ಹಿರಿಯ ನಾಗರಿಕರ ಪಾಲನೆ, ಪೋಷಣೆ, ರಕ್ಷಣೆ ಕಾಯ್ದೆ ಬಗ್ಗೆ ಈಚೆಗೆ ಜಾಗೃತಿ ಮೂಡುತ್ತಿದೆ. ಕಾನೂನು ಪ್ರಕಾರ ತಮಗೆ ಸಿಗಬೇಕಾದ ಗೌರವ, ಹಕ್ಕುಗಳು ಸಿಗುತ್ತಿಲ್ಲವಾದರೆ ಕಚೇರಿಗೆ ಬಂದು ದೂರು ನೀಡಿದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ತಪ್ಪು ಮಾಡಿದಲ್ಲಿ ಸೂಕ್ತ ಎಚ್ಚರಿಕೆ ನೀಡಿ ಮುಚ್ಚಳಿಕೆಬರೆಯಿಸಿಕೊಂಡು ಹೆತ್ತವರಿಗೆ ನ್ಯಾಯ ಒದಗಿಸಲಾಗುವುದು. ತೀಪುì ಉಲ್ಲಂಘಿಸುವವರ ವಿರುದ್ಧ ಅರೆಸ್ಟ್‌ ವಾರೆಂಟ್‌ ಕೂಡ ಜಾರಿಗೊಳಿಸಬಹುದು. – ಸಂತೋಷ ಎಸ್‌. ಕಾಮಗೌಡ ಸಹಾಯಕ ಆಯುಕ್ತ, ರಾಯಚೂರು

 

-ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next