Advertisement

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಜೋಶಿ ಕಿಡಿ

07:10 AM Feb 07, 2018 | Team Udayavani |

ನವದೆಹಲಿ: ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಎಡವಿದೆ ಎಂದು ಧಾರವಾಡ ಸಂಸದ ಪ್ರಹ್ಲಾದ್‌ ಜೋಶಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಅದಕ್ಕೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ
ಇದುವರೆಗೆ ಯಾರನ್ನೂ ಬಂಧಿಸದಿರುವುದೇ ಸಾಕ್ಷಿ. ರಾಜ್ಯ ಸರ್ಕಾರ ಜನರಿಗೆ ಕಿರುಕುಳ ನೀಡುತ್ತಿದೆ. ಭ್ರಷ್ಟಾಚಾರ ತಾಂಡವ ವಾಡುತ್ತಿದೆ ಎಂದೂ ಆರೋಪಿಸುವ ಮೂಲಕ ಲೋಕಸಭೆಯಲ್ಲಿ ರಾಜ್ಯದ ವಿರುದ್ದ ಕಿಡಿಕಾರಿದ್ದಾರೆ. ಇದನ್ನೆಲ್ಲ ಕರ್ನಾಟಕದ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದೂ
ಜೋಶಿ ಹೇಳಿದ್ದಾರೆ.

Advertisement

ಕೇವಲ 38 ಸಾವಿರ ಮನೆ: ಲೋಕಸಭೆಯಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆ ಕುರಿತು ಪ್ರಸ್ತಾಪಿಸಿದ ಸಂಸದ ಪ್ರಹ್ಲಾದ್‌ ಜೋಶಿ, ಕರ್ನಾಟಕದಲ್ಲಿ 3.3 ಲಕ್ಷ ಮನೆಗಳ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ನಿರ್ಮಾಣವಾಗಿರುವುದು ಮಾತ್ರ 38 ಸಾವಿರ ಮನೆಗಳು. ವಸತಿ ಸಚಿವಾಲಯ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕೇಂದ್ರ ನಗರಾಭಿವೃದ್ದಿ ಸಚಿವ ಹದೀìಪ್‌ ಸಿಂಗ್‌ ಪುರಿ ಉತ್ತರಿಸಿ, ಪ್ರಧಾನಮಂತ್ರಿ ಆವಾಸ್‌ ಯೋಜನೆ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, 2022ರ ವೇಳೆ ದೇಶದ ಎಲ್ಲರಿಗೂ ಮನೆ ನಿರ್ಮಿಸಿಕೊಡಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ. ದೇಶದಲ್ಲಿ ಒಟ್ಟು 11 ಲಕ್ಷ ಮನೆಗಳ ನಿರ್ಮಾಣ ವಾಗಬೇಕು ಎಂದಿದ್ದಾರೆ.

ಕರ್ನಾಟಕದಲ್ಲಿ 100 ಗಲಭೆ: ಕರ್ನಾಟಕ ಸೇರಿ ದೇಶಾದ್ಯಂತ 2017ರಲ್ಲಿ 822 ಕೋಮು ಗಲಭೆಗಳು ಉಂಟಾಗಿವೆ.ಅದರಲ್ಲಿ 111 ಮಂದಿ ಸಾವಿಗೀಡಾಗಿ, 2,384 ಮಂದಿಗೆ ಗಾಯಗಳಾಗಿವೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹಂಸರಾಜ ಅಹಿರ್‌ ಹೇಳಿದ್ದಾರೆ. ಕರ್ನಾಟಕದಲ್ಲಿ
100 ಕೋಮು ಗಲಭೆ ಪ್ರಕರಣಗಳು ನಡೆದು 9 ಮಂದಿ ಅಸುನೀಗಿದ್ದಾರೆ ಎಂದಿದ್ದಾರೆ. ಕೋಮುಗಲಭೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 195 ಕೋಮುಗಲಭೆಗಳು ಸಂಭವಿಸಿ 44 ಮಂದಿ ಸಾವಿಗೀಡಾಗಿ, 542 ಮಂದಿ ಗಾಯಗೊಂಡಿದ್ದಾರೆ. ರಾಜಸ್ಥಾನದಲ್ಲಿ 91 ಘಟನೆ ಯಲ್ಲಿ 12 ಮಂದಿ ಸಾವಿ ಗೀಡಾಗಿ, 175 ಮಂದಿ ಗಾಯಗೊಂಡಿ ದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಗುಜರಾತ್‌ನಲ್ಲಿ 50 ಪ್ರಕರಣಗಳಲ್ಲಿ
ಎಂಟು ಮಂದಿ ಸಾವಿಗೀಡಾಗಿ 191 ಮಂದಿ ಗಾಯಗೊಂಡಿದ್ದಾರೆ ಎಂದುಅಹಿರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next