Advertisement

ಭಾರತೀಯ ಬ್ರಾಂಡ್‍ ಲಾವಾದಿಂದ ಮೊದಲ 5ಜಿ ಸ್ಮಾರ್ಟ್ ಫೋನ್‍ ಬಿಡುಗಡೆ : ಬೆಲೆ ಎಷ್ಟು ಗೊತ್ತಾ?

09:20 PM Nov 10, 2021 | Team Udayavani |

ಭಾರತೀಯ ಸ್ಮಾರ್ಟ್‌ಫೋನ್ ಬ್ರಾಂಡ್, ಲಾವಾ ಇಂಟರ್‌ನ್ಯಾಶನಲ್ ಲಿಮಿಟೆಡ್, ತನ್ನ ಮೊದಲ 5G ಸ್ಮಾರ್ಟ್‌ಫೋನ್- AGNI ಯನ್ನು ಬಿಡುಗಡೆ ಮಾಡಿದೆ.
ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 810 ಚಿಪ್‍ ಸೆಟ್‍ ಹೊಂದಿದೆ. 128 ಜಿಬಿ ಆಂತರಿಕ ಸಂಗ್ರಹ ಹಾಗೂ 8 ಜಿಬಿ ರ್ಯಾಮ್‍ ಇದ್ದು, 6.78 ಇಂಚಿನ ಐಪಿಎಸ್‍ ಎಲ್‍ಸಿಡಿ ಪರದೆ ಹೊಂದಿದೆ.

Advertisement

64 ಮೆ.ಪಿ. ಮುಖ್ಯ ಕ್ಯಾಮರಾ, ಜೊತೆಗೆ 5 MP ವೈಡ್ ಆಂಗಲ್ ಕ್ಯಾಮರಾ, 2 MP ಡೆಪ್ತ್ ಕ್ಯಾಮರಾ ಮತ್ತು 2 MP ಮ್ಯಾಕ್ರೋ ಕ್ಯಾಮರಾ ಅಳವಡಿಸಲಾಗಿದೆ. ಸೆಲ್ಫಿಗಳಿಗಾಗಿ 16 MP ಮುಂಬದಿ ಕ್ಯಾಮೆರಾವನ್ನು ಸಹ ಹೊಂದಿದೆ. ಅಲ್ಟ್ರಾಎಚ್‌ಡಿ, ಅಲ್ಟ್ರಾವೈಡ್, ಸೂಪರ್‌ನೈಟ್, ಪ್ರೊ ಮೋಡ್, ಎಐ ಮೋಡ್ ಮುಂತಾದ 10 ಅಂತರ್ಗತ ಕ್ಯಾಮೆರಾ ಮೋಡ್‌ಗಳಿವೆ.

5000 mAh ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ 30W ಸೂಪರ್‌ಫಾಸ್ಟ್ ಚಾರ್ಜರ್‌ ಇದೆ.
ಈ ಫೋನ್‍ನ ಬೆಲೆ 19,999 ರೂ.ಆಗಿದ್ದು, ನವೆಂಬರ್‍ 18ರಿಂದ ಎಲ್ಲ ರೀಟೇಲರ್‍ ಹಾಗೂ ಅಮೆಜಾನ್‍, ಫ್ಲಿಪ್‍ಕಾರ್ಟ್‍ ನಲ್ಲಿ ದೊರಕಲಿದೆ.

ಇದನ್ನೂ ಓದಿ : ಗ್ರಾಮೀಣ ಪ್ರದೇಶದಲ್ಲಿ 5ಜಿ ಸೌಲಭ್ಯ : ವಿಐ-ನೋಕಿಯಾ ಯಶಸ್ವಿ ಪ್ರಯೋಗ

Advertisement

ಲಾವಾ ಇ-ಸ್ಟೋರ್‌ನಲ್ಲಿ ಮತ್ತು ಅಮೆಜಾನ್‌ನಲ್ಲಿ 500 ರೂ. ಮುಂಗಡ ಪಾವತಿಸಿದರೆ 17, 999 ರೂ.ಗೆ ದೊರಕಲಿದೆ. ಬುಕಿಂಗ್‍ ತೆರೆದಿದ್ದು, ನವೆಂಬರ್‍ 17 ರವರೆಗೆ ಈ ಆಫರ್‍ ಲಭ್ಯವಿರುತ್ತದೆ.
ಲಾವಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ಸುನಿಲ್ ರೈನಾ ಬಿಡುಗಡೆ ಕುರಿತು ಮಾತನಾಡುತ್ತಾ, AGNI 5G ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಭಾರತೀಯರು ಏನನ್ನು ಸಾಧಿಸಬಹುದು ಎಂಬುದನ್ನು ಪ್ರತಿನಿಧಿಸುವ ಫೋನ್. ಇದು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ ಎಂದರು.

ಮೀಡಿಯಾ ಟೆಕ್ ಪ್ರೊಸೆಸರ್‍ ಕಂಪೆನಿಯು, ಲಾವಾ ಜೊತೆಗೆ ದೀರ್ಘಕಾಲದ ಒಡನಾಟವನ್ನು ಹೊಂದಿದೆ. ಪ್ರಬಲವಾದ ಮುಖ್ಯವಾಹಿನಿಯ 5G ಸ್ಮಾರ್ಟ್‌ಫೋನ್ ಅನುಭವಗಳನ್ನು ನೀಡಲು ಲಾವಾ ಅಗ್ನಿ 5G ಅನ್ನು MediaTek Dimensity 810 ಪ್ರೊಸೆಸರ್‍ ನೊಂದಿಗೆ ತಯಾರಿಸಲಾಗಿದೆ ಎಂದು ಮೀಡಿಯಾ ಟೆಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಂಕು ಜೈನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next