Advertisement

ಭಾರತದ ಯುವ ಸಂಸ್ಥೆಗೆ ಲಾರೆಸ್‌ ಸ್ಪೋರ್ಟ್ಸ್ ಫಾರ್‌ ಗುಡ್‌’ಪ್ರಶಸ್ತಿ

12:30 AM Feb 19, 2019 | Team Udayavani |

ಮೊನಾಕೊ: ಕ್ರೀಡೆಯ ಮೂಲಕ ಶಾಂತಿ ಸಂದೇಶವನ್ನು ಸಾರುವವರಿಗೆ ನೀಡಲಾಗುವ “ಲಾರೆಸ್‌ ಸ್ಪೋರ್ಟ್ಸ್  ಫಾರ್‌ ಗುಡ್‌’ ಪ್ರಶಸ್ತಿ ಈ ಬಾರಿ ಝಾರ್ಖಂಡ್‌ ಮೂಲದ “ಯುವ’ ಸಂಸ್ಥೆ ಪಾಲಾಗಿದೆ.

Advertisement

15 ವರ್ಷಗಳ ಹಿಂದೆ ಭಾರತ ಹಾಗೂ ಪಾಕಿಸ್ಥಾನದ ಕ್ರಿಕೆಟ್‌ ತಂಡಗಳು ಈ ಪ್ರಶಸ್ತಿ ಗೆದ್ದಿದ್ದವು. 4 ವರ್ಷಗಳಿಂದ ಹಿಂದೆ “ರೆಡ್‌ ಬಸ್‌’ ಕಂಪೆನಿ ಈ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. “ಯುವ’ ಸಂಸ್ಥೆ ಆರ್ಸೆನಲ್‌ ಮಾಜಿ ಮುಖ್ಯಸ್ಥ ಹಾಗೂ ವಿಶ್ವ ಸಾಕರ್‌ ಅಗ್ರ ವ್ಯವಸ್ಥಾಪಕರಲ್ಲಿ ಒಬ್ಬರಾದ ಆರ್ಸೆನ್‌ ವೆಂಗರ್‌ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದೆ.

ಜಾಗೃತಿ ಅಭಿಯಾನ
2008ರಲ್ಲಿ ಅಮೆರಿಕದ ಫ್ರಾನ್ಸ್‌ ಗಾಸ್ಟ್‌ಲರ್‌ ಎಂಬ ವ್ಯಕ್ತಿ ರಾಂಚಿಯ ಹೊರವಲಯದಲ್ಲಿ ಯುವ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯ ಮೂಲಕ ಬಾಲ್ಯವಿವಾಹ, ಅನಕ್ಷರತೆ ಕುರಿತು ಜಾಗೃತಿ ಅಭಿಯಾನ ಕೈಗೊಳ್ಳತೊಡಗಿದರು. ಅಲ್ಲದೇ ಫ‌ುಟ್‌ಬಾಲ್‌ ಮೂಲಕ ಮಹಿಳೆಯ ಸಬಲೀಕರಣಕ್ಕೆ ಶ್ರಮಿಸತೊಡಿಗಿದರು.

“ಈ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ಕಳೆದ ಡಿಸೆಂಬರ್‌ನಲ್ಲೇ ಈ ಬಗ್ಗೆ ನಮಗೆ ತಿಳಿಸಿದ್ದರು. ವಿಶೇಷ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಯನ್ನು ಅಕಾಡೆಮಿ ಗುರುತಿಸಿರುವುದು ಸಂತಸ ತಂದಿದೆ’ ಎಂದು ಫ್ರಾನ್ಸ್‌ ಗಾಸ್ಟ್‌ಲರ್‌ ಹೇಳಿದ್ದಾರೆ.

ಲಾರೆಸ್‌ ವಿಶ್ವ ಕ್ರೀಡಾ ಅಕಾಡೆಮಿ ಆಯ್ಕೆ ಮಾಡಿದ 160 ಸಂಸ್ಥೆಗಳಲ್ಲಿ ಯುವ ಕೂಡ ಒಂದು. ಈ ಅಕಾಡೆಮಿ ಒಲಿಂಪಿಯನ್‌ಗಳಾದ ಎಡ್ವಿನ್‌ ಮೊಸೆಸ್‌, ಮಾರ್ಕ್‌ ಸ್ಪಿಟ್ಜ್, ನಾದಿಯಾ ಕೊಮನೆಸಿ, ಮೋನಿಕಾ ಸೆಲೆಸ್‌ ಮೊದಲಾದವರನ್ನು ಒಳಗೊಂಡಿದೆ. 2016ರಿಂದ “ಯುವ’ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಲಾರೆಸ್‌ ಪಾಲುದಾರ ಮರ್ಸಿಡೆಸ್‌ ಬೆಂಜ್‌ ಮೂಲಕ ಸಂಸ್ಥೆ ವಾರ್ಷಿಕ 3 ಕೋಟಿ ರೂ. ದೇಣಿಗೆ ನೀಡುತ್ತದೆ.

Advertisement

ಫ‌ುಟ್‌ಬಾಲ್‌ ಮಾತ್ರವಲ್ಲದೆ ಯುವ ಸಂಸ್ಥೆ ಬಾಲಕಿಯರಿಗೆ ಮಾನಸಿಕ ಸ್ಥೈರ್ಯ ನೀಡುವ ಕಾರ್ಯದಲ್ಲೂ ತೊಡಗಿಸಿಕೊಂಡಿದೆ. ಇದರೊಂದಿಗೆ 95 ವಿದ್ಯಾರ್ಥಿನಿಯರುಳ್ಳ ವಸತಿ ಶಾಲೆಯನ್ನೂ ಈ ಸಂಸ್ಥೆ ನಡೆಸಿಕೊಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next