Advertisement

ಗ್ರಾಮಾಂತರ ಪ್ರದೇಶಗಳಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ

09:52 PM May 30, 2019 | Team Udayavani |

ಗುರುಪುರ: ರಜೆಯ ಮಜ ಅನುಭವಿಸಿ ನವೋಲ್ಲಾಸದಿಂದ ಶಾಲೆಗೆ ಆಗಮಿಸುವ ಮಕ್ಕಳನ್ನು ವಿವಿಧ ರೀತಿಯ ವಿನೋದಾವಳಿಯ ಮೂಲಕ ವಿಶಿಷ್ಠವಾಗಿ ಬರಮಾಡಿಕೊಳ್ಳಲಾಯಿತು.

Advertisement

ಕಿಲೆಂಜಾರು ಕುಪ್ಪೆಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವ ಸಂದರ್ಭ ಮಕ್ಕ ಳಿಗೆ ಪುಸ್ತಕಗಳನ್ನು ವಿತರಿಸಿ ಮನೋ ರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್‌ ಷರೀಫ್‌, ಮುಖ್ಯೋಪಾಧ್ಯಾಯ ಯತಿ ರಾಜ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಲ್‌. ಉಮರಬ್ಬ, ಪಂಚಾಯತ್‌ ಸದಸ್ಯ ಹಿರಣ್ಯಾಕ್ಷ ಕೋಟ್ಯಾನ್‌, ಉಪಾಧ್ಯಕ್ಷೆ ಸರಸ್ವತಿ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ- ಶಿಕ್ಷಕಿಯರು ಉಪಸ್ಥಿತರಿದ್ದರು.
ಕುಪ್ಪೆಪದವಿನ ಕಲ್ಲಾಡಿ ಸರಕಾರಿ ಶಾಲೆಯ ಪ್ರಾರಂಭೋತ್ಸವವನ್ನು ಕುಪ್ಪೆ ಪದವು ಪಂಚಾಯತ್‌ ಅಧ್ಯಕ್ಷೆ ಲೀಲಾವತಿ ಆನಂದ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಅಬೂಬಕ್ಕರ್‌ ಕಲ್ಲಾಡಿ, ನಿವೃತ್ತ ಗ್ರಾಮ ಕರಣಿಕ ರುಕ್ಮಯ ನಾಯಕ್‌, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

ಸಿಹಿ ತಿಂಡಿ ಹಂಚಿ ಸ್ವಾಗತ
ಈ ಬಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಗೊಂಡು ಉನ್ನತಿಗೊಂಡ ಸರಕಾರಿ ಪ್ರಾಥಮಿಕ ಶಾಲೆಯ ಆರಂಭೋತ್ಸವವನ್ನು ಗಂಜಿಮಠ ತಾ.ಪಂ. ಸದಸ್ಯ ಸುನಿಲ್‌ ಕುಮಾರ್‌ ಉದ್ಘಾಟಿಸಿದರು. ಮಕ್ಕಳಿಗೆ ಸಿಹಿ ಹಂಚಿ ಖುಷಿಪಡಿಸಲಾಯಿತು. ಪುಸ್ತಕಗಳನ್ನು ಹಂಚಲಾಯಿತು. ದಾಸಪ್ಪ ಕುಲಾಲ್‌, ಉಮರಬ್ಬ, ನೋಣಯ್ಯ ಕೋಟ್ಯಾನ್‌, ದಾಮೋದರ ಕುಲಾಲ್‌, ಬೂಬ ಪೂಜಾರಿ, ಶೇಖರ್‌ ಮಳಲಿ, ವಜ್ರಾಕ್ಷ, ದೀಕ್ಷಿತ್‌ ಶೆಟ್ಟಿ, ವಜ್ರಾಕ್ಷ, ಪುರಂದರ ಕುಲಾಲ್‌ ಪ್ರೌಢ ಹಾಗು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next