Advertisement

ಕೆಂಗೇರಿಯಲ್ಲಿ ಜನೌಷಧ ಕೇಂದ್ರಕ್ಕೆ ಚಾಲನೆ

12:14 PM Oct 21, 2018 | Team Udayavani |

ಕೆಂಗೇರಿ: ಔಷಧ (ಫಾರ್ಮಾ) ಕಂಪನಿಗಳು ಸಾರ್ವಜನಿಕರಿಗೆ ಅಗತ್ಯವಿರುವ ಔಷಧಗಳ ಬೆಲೆ ಇಳಿಸುವ ಬಗ್ಗೆ ಚಿಂತನೆ ನೆಡಸಬೇಕು ಎಂದು ಕೆಂಗೇರಿ ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ ಹೇಳಿದರು.

Advertisement

ಕೆಂಗೇರಿ ಉಪನಗರದ ರಾಘವೇಂದ್ರ ಸ್ವಾಮಿ ಮಠದ ಸಮೀಪದ ಸಹಾನ ಆಸ್ಪೆತ್ರೆ ಎದುರು ಪ್ರಧಾನ ಮಂತ್ರಿ ಜನೌಷಧ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಔಷಧಗಳನ್ನು ಕಡಿಮೆ ಬೆಲೆಗೆ ನೀಡುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ತೆರೆಯುತ್ತಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಜನೌಷಧ ಯೋಜನೆಯಲ್ಲಿ ಔಷಧಗಳು ಮಾರುಕಟ್ಟೆ ಬೆಲೆಗಿಂತ ಶೇ.50ಕ್ಕೂ ಕಡಿಮೆ ಬೆಲೆಗೆ ಸಿಗುತ್ತವೆ. ಜನೌಷಧ ಮಳಿಗೆಯಲ್ಲಿ 1400ಕ್ಕೂ ಹೆಚ್ಚು ವಿಧದ ಔಷಧಗಳು ಲಭ್ಯವಿರುತ್ತವೆ. ಇದರೊಂದಿಗೆ ಸರ್ಜರಿಗೆ ಬಳಸುವ 154 ರೀತಿಯ ಉತ್ಪನ್ನಗಳು ಕೂಡ ಸಿಗುತ್ತವೆ ಎಂದು ಅವರು ತಿಳಿಸಿದರು.

ಪಾಲಿಕೆ ಮಾಜಿ ಸದಸ್ಯ ಆಂಜಿನಪ್ಪ, ಯುವ ಬಿಜೆಪಿ ಮಂಡಲ ಕಾರ್ಯದರ್ಶಿ ನವೀನ್‌ ಯಾದವ್‌, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶೀ ಜೆ.ರಮೇಶ್‌, ಮುಖಂಡರಾದ ಕೆ.ಆರ್‌.ಸುಧೀರ್‌ ಹಾಗೂ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next