ಬೆಂಗಳೂರು: ಹೋಟೆಲ್ ಉದ್ಯಮದಲ್ಲಿ ಹೊಸತನಕ್ಕೆ ನಾಂದಿ ಹಾಡಿರುವ ಅಡಿಗ ಹೋಟೆಲ್ ಸಮೂಹ ಸಂಸ್ಥೆ ಸಂಸ್ಥಾಪಕ ವಾಸುದೇವ ಅಡಿಗ ಅವರ ನೂತನ ಪರಿಕಲ್ಪನೆಯ ಅಧಿಕೃತ ಸಸ್ಯಾಹಾರಿ ಮಲ್ಟಿ ಕ್ಯೂಸಿನ್ “ಪಾಕಶಾಲ’ ರೆಸ್ಟೋರೆಂಟ್‌ಗೆ ಜಯನಗರದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ ಚಾಲನೆ ನೀಡಿದರು. ನಗರದ ಆಸ್ಟರ್-ಆರ್‌ವಿ ಆಸ್ಪತ್ರೆ ಕ್ಯಾಂಪಸ್‌ನಲ್ಲಿ ವಿನೂತನ ಹಾಗೂ ಆಧುನಿಕ ಶೈಲಿಯಲ್ಲಿ ರೂಪಿಸಿರುವ ಪಾಕಶಾಲ ರೆಸ್ಟೋರೆಂಟ್‌ನ 6ನೇ ಶಾಖೆ ಇದಾಗಿದೆ.
ಈ ಸಂದರ್ಭದಲ್ಲಿ ಶ್ರೀ ಅನಂತೇಶ್ವರ ಫುಡ್ಸ್ ಪ್ರೈ.ಲಿ., ಅಧ್ಯಕ್ಷ ಮತ್ತು ಎಂ.ಡಿ ಕೆ.ಎನ್.ವಾಸುದೇವ ಅಡಿಗ, ನಿರ್ಮಲಾ ಅಡಿಗ, ಬಿಬಿಎಂಪಿ ಸದಸ್ಯೆ ಮಾಲತಿ ಸೋಮಶೇಖರ್, ಮಾಜಿ ಸದಸ್ಯ ಸೋಮಶೇಖರ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಪಾಂಡುರಂಗ ಶೆಟ್ಟಿ, ಆರ್‌ಎಸ್‌ಎಸ್‌ಟಿ ಕಾರ್ಯದರ್ಶಿ ಎವಿಎಸ್ ಮೂರ್ತಿ, ಡಿ.ಪಿ.ನಾಗರಾಜ್, ಪಿ.ಎಸ್.ನಂದಕುಮಾರ್, ಕೆಪಿಎಚ್‌ಆರ್‌ಎ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಬೆಂಗಳೂರು ಹೋಟೆಲ್ಸ್ ಸಂಘದ ಅಧ್ಯಕ್ಷ ಪಿ.ಸಿ.ರಾವ್, ಮಯೂರ ಹೋಟೆಲ್ ಸಮೂಹದ ಶ್ರೀನಿವಾಸ ರಾವ್, ಆಸ್ಟರ್-ಆರ್‌ವಿ ಆಸ್ಪತ್ರೆ ಸಿಒಒ ಡಾ. ಪ್ರಶಾಂತ್ ಎನ್. ಇತರರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಕೆ.ಎನ್.ವಾಸುದೇವ ಅಡಿಗ ಅವರು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಪಾಕಶಾಲ ಸರಣಿಯ ಉಪಹಾರ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ದಕ್ಷಿಣ ಭಾರತ, ಉತ್ತರ ಭಾರತ, ಚೈನೀಸ್ ಮತ್ತು ಕಾಂಟಿನೆಂಟಲ್ ಬಹು-ತಿನಿಸುಗಳನ್ನು ಪರಿಚಯಿಸಲಾಗಿದ್ದು, ಪಾಕಶಾಲ ಬ್ರಾಂಡನ್ನು ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿ ಪರಿಚಯಿಸಲಾಗುವುದು.
ಮುಂಬರುವ ದಿನಗಳಲ್ಲಿ ಬೆಂಗಳೂರು-ಹಾಸನ ಹೈವೇಯ ಕುಣಿಗಲ್ ಮತ್ತು ಮಂಗಳೂರು-ಮುಂಬೈ ಹೈವೇಯ ಕುಂಬಾಶಿಯಲ್ಲಿ ಅತ್ಯಾಧುನಿಕ ರೆಸ್ಟೋರೆಂಟ್‌ಗಳನ್ನು ತೆರೆಯಲಾಗುವುದು. ಈಗಾಗಲೇ ಬೆಂಗಳೂರಿನ ವಿದ್ಯಾರಣ್ಯಪುರ, ಆರ್.ಆರ್.ನಗರ, ಚಂದ್ರಾ ಲೇಔಟ್ ಹಾಗೂ ಮಲ್ಲೇಶ್ವರದಲ್ಲಿ ನಮ್ಮ ರೆಸ್ಟೋರೆಂಟ್‌ಗಳಿವೆ ಎಂದರು. ಈ ಸಂದರ್ಭದಲ್ಲಿ ಸಿಇಒ ಮತ್ತು ಇಡಿ ಗಣೇಶ್ ರಾಮನಾಥನ್ ಮಾತನಾಡಿ, ಪಾಕಶಾಲ ಎಂಬ ಉತ್ತಮ ಗುಣಮಟ್ಟದ, ಶುಚಿ-ರುಚಿ ಮತ್ತು ಆರೋಗ್ಯಕರ ತಿಂಡಿ ತಿನಿಸುವ ದೊರೆಯುವ ಹೊಸ ಸ್ಥಳವನ್ನು ಹುಟ್ಟುಹಾಕಿದ್ದೇವೆ. ಈ ಬ್ರಾಂಡ್‌ನಡಿ ಸದ್ಯದಲ್ಲೇ ಕನಕಪುರ ರಸ್ತೆಯ ಯಲಚೇನಹಳ್ಳಿಯಲ್ಲಿ ಮತ್ತೂಂದು ಆಧುನಿಕ ರೆಸ್ಟೋರೆಂಟ್ ಬರಲಿದೆ ಎಂದು ತಿಳಿಸಿದರು.
ನಮ್ಮ ರೆಸ್ಟೋರೆಂಟ್‌ಗಳ ತಿನಿಸುಗಳು ನೈಸರ್ಗಿಕವಾಗಿದ್ದು, ಗುಣಮಟ್ಟ ಮತ್ತು ರುಚಿ ಕಾಪಾಡುವ ಉದ್ದೇಶದಿಂದ ಪ್ರತಿ ಗಂಟೆಗೊಮ್ಮೆ ತಾಜಾ ಆಹಾರ ತಯಾರಿಸಿ ಕೊಡಲಾಗುತ್ತದೆ. ತರಕಾರಿ ಮತ್ತಿತರ ದಿನಸಿಗಳನ್ನು ನೇರವಾಗಿ ರೈತರಿಂದಲೇ ಖರೀದಿಸಿ ತರುವುದು ನಮ್ಮ ಸಂಸ್ಥೆಯ ವಿಶೇಷ. ಕನಕಪುರದಲ್ಲಿ ನಮ್ಮದೇ ಕೃಷಿ ಫಾರಂ ಇದ್ದು ಅಲ್ಲಿ ಸಾವಯವ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಜನತೆಗೆ ಆರೋಗ್ಯಕರ ರಾಸಾಯನಿಕ ಮುಕ್ತ ಆಹಾರ ನೀಡಲಾಗುವುದು. ಅಷ್ಟೇ ಅಲ್ಲದೆ, ಪ್ಯಾಕೇಜಿಂಗ್ ಫುಡ್ ಕ್ಷೇತ್ರವನ್ನೂ ಸಂಸ್ಥೆ ಪ್ರವೇಶಿಸಲಿದೆ ಎಂದು ತಿಳಿಸಿದರು.