Advertisement
ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಉಸ್ತುವಾರಿ ನಗರಸಭೆಯದ್ದಾಗಿದ್ದು, ಆವರಣವನ್ನು ಶುಚಿಯಾಗಿಟ್ಟುಕೊಂಡು ಗುಣಮಟ್ಟದ ಉಪಾಹಾರ, ಊಟ ನೀಡಬೇಕು ಎಂದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೊಳ್ಳೇಗಾಲ, ತಿ.ನರಸೀಪುರ ಹಾಗೂ ನಂಜನಗೂಡಿನಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿದೆ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್‌ಗಳು ಬಡವರ ಹಸಿವನ್ನು ನೀಗಿಸಿವೆ ಎಂದರು.
Related Articles
Advertisement
ಯತೀಂದ್ರರನ್ನು ಪೆದ್ದ ಎನ್ನಬಾರದಿತ್ತು: ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರನ್ನು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಪೆದ್ದ ಎಂಬುದಾಗಿ ಕರೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ ಶಾಸಕ ಹರ್ಷವರ್ಧನ್ ಅವರು, ಯತೀಂದ್ರ ಹಾಗೂ ಅವರ ಸಹೋದರ ರಾಕೇಶ್ ತಾವು ಆತ್ಮೀಯ ಸ್ನೇಹಿತರಾಗಿದ್ದೇವೆ ಎಂದು ತಿಳಿಸಿದರು.
ಇತ್ತೀಚೆಗೆ ಮಾಜಿ ಸಚಿವ ಶ್ರೀನಿವಾಸ್‌ಪ್ರಸಾದ್ ನಂಜನಗೂಡಿನಲ್ಲಿ ಸುದ್ದಿಗೋಷ್ಠಿ ನಡೆಸಿ, “ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ತಮಗೆ ಅವರ ಪುತ್ರನಾದ ಪೆದ್ದ ಡಾ.ಯತೀಂದ್ರನನ್ನುಸೋಲಿಸುವುದು ಕಷ್ಟವಾಗಿರಲಿಲ್ಲ. ಆದರೆ, ಬಿಜೆಪಿ ಮುಖಂಡರು ತಮ್ಮ ಮಾತನ್ನು ಕೇಳಲಿಲ್ಲ’ ಎಂದು ತಿಳಿಸಿದರು.
ಪ್ರತಿಭಟನೆ: ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದ ಪೋಸ್ಟರ್‌ನಲ್ಲಿ ಶಾಸಕ ಡಾ.ಯತೀಂದ್ರ ಹೆಸರಿಲ್ಲದ್ದಕ್ಕೆ ಅವರ ಬೆಂಬಲಿಗರು ಕೆಲ ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.