ಬಂಗಾರಪೇಟೆ: ಗ್ರಾಮಗಳಿಗೆ ಕುಡಿಯುವ ನೀರು, ಮೂಲ ಸೌಲಭ್ಯ ಕಲ್ಪಿಸಿದರೆ ಮಾತ್ರ ಮಹಾತ್ಮ ಗಾಂಧಿ ಕಂಡ ರಾಮರಾಜ್ಯದ ಕನಸು ನನಸಾಗಲು ಸಾಧ್ಯ ಎಂದು ದೊಡೂxರು ಕರಪನಹಳ್ಳಿ ಜಿಪಂ ಕ್ಷೇತ್ರದ ಸದಸ್ಯ ಬಿ.ವಿ. ಮಹೇಶ್ ಹೇಳಿದರು.
ತಾಲೂಕಿನ ಕೆಸರನಹಳ್ಳಿ ಗ್ರಾಪಂನ ಇಂದಿರಾನಗರಕ್ಕೆ ನೀರು ಪೂರೈಕೆಗೆ ಚಾಲನೆ ನೀಡಿ ಮಾತನಾಡಿ, ಪಟ್ಟಣಕ್ಕೆ ಹೊಂದಿಕೊಂಡಿರುವ ಇಂದಿರಾನಗರದಲ್ಲಿ ಮೂಲ ಸಮಸ್ಯೆಗಳು ಹೆಚ್ಚಾಗಿವೆ. ಜಿಪಂ, ಗ್ರಾಪಂನಿಂದ ಪ್ರತಿ ವರ್ಷವೂ ಅಭಿವೃದ್ಧಿ ಕಾರ್ಯ ಮಾಡಿರುವುದರಿಂದ ಈ ಗ್ರಾಮವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ತಿಳಿಸಿದರು.
ದೊಡೂರು ಕರಪನಹಳ್ಳಿ ಜಿಪಂ ಕ್ಷೇತ್ರದಲ್ಲಿ ಕುಡಿ ಯುವ ನೀರಿನ ಸಮಸ್ಯೆ ಇರುವ ಏಳು ಗ್ರಾಮಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸಿದ್ದು, ಎಲ್ಲದರಲ್ಲೂ ಭರ್ಜರಿಯಾಗಿ ನೀರು ಬಂದಿದೆ. ಎಲ್ಲಾ ಬೋರ್‌ವೆಲ್ ಗಳಿಗೆ ಪಂಪು ಮೋಟಾರು ಅಳವಡಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ಕೆಜಿಎಫ್- ಬಂಗಾರಪೇಟೆ ಮುಖ್ಯ ರಸ್ತೆಯಿಂದ ಇಂದಿರಾನಗರದ ಗ್ರಾಮದ ಒಳಗೆ ರಸ್ತೆಯು ತೀವ್ರವಾಗಿ ಹದೆಗೆಟ್ಟಿತ್ತು. 5 ಲಕ್ಷ ರೂ.ನಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇಂದಿರಾನಗರ ಗ್ರಾಮದಲ್ಲಿ ಯಾವುದೇ ಸಮಸ್ಯೆ ಇಲ್ಲ ದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದು ವಿವರಿಸಿದರು.
ಕೆಸರನಹಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ವರಲಕ್ಷ್ಮೀ ನಾರಾಯಣಗೌಡ, ಮಾಜಿ ಅಧ್ಯಕ್ಷ ಎಸ್.ರಾಜಾ, ಕೀಲುಕೊಪ್ಪ ಮಾಟಪ್ಪ, ಬೆಂಗನೂರು ಕೃಷ್ಣಮೂರ್ತಿ, ಸದಸ್ಯ ಸಗಾದೇವ್, ಸುರೇಶ್, ಶ್ರೀನಿವಾಸ್, ಗಂಗಾಧರ್, ಎಸ್.ಜಿ.ಕೋಟೆ ಚಂದ್ರಶೇಖರ್, ಮುಖಂಡರಾದ ಸಿ.ಕುಮಾರ್, ವಿಜಯಕುಮಾರ್, ಸಂತೋಷ್, ಮುರಳಿ, ಶ್ರೀಧರ್, ಪವನ್‌ಕುಮಾರ್, ಸುರೇಂದ್ರ, ಮದಿ ಮುಂತಾದವರು ಹಾಜರಿದ್ದರು.