Advertisement

ಸೈಬರ್‌ ಅಪರಾಧ ತಡೆಗೆ ಘಟಕ ಆರಂಭ

02:56 PM Feb 17, 2017 | Team Udayavani |

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್‌ ಅಪರಾಧಗಳ ತಡೆಗೆ ಹಾಗೂ ತೀವ್ರ ನಿಗಾ ವಹಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಕಾರ್ಯಾಲಯದಲ್ಲಿ ಆರಂಭಿಸಲಾಗಿರುವ ಸೋಷಿಯಲ್‌ ಮೀಡಿಯಾ ಮಾನಿಟರಿಂಗ್‌ ಮತ್ತು ಟೆಕ್ನಿಕಲ್‌ ಸಪೋರ್ಟ್‌ ಸೆಲ್‌ (ಘಟಕ) ಗೆ ಗೃಹ ಖಾತೆ ಸಚಿವ ಡಾ| ಜಿ. ಪರಮೇಶ್ವರ ಚಾಲನೆ ನೀಡಿದರು.

Advertisement

ಪೊಲೀಸ್‌ ಭವನದಲ್ಲಿ ಉದ್ಘಾಟನೆ ನೆರವೇರಿಸಿ ಘಟಕ್ಕೆ ಚಾಲನೆ ನೀಡಿದ ಸಚಿವರು, ಎಲ್ಲ ಜನ ಮಾಹಿತಿ ತಂತಜ್ಞಾನಕ್ಕೆ ಹೊಂದಿಕೊಳ್ಳುತ್ತಿರುವುದರಿಂದ ಅಪರಾಧ ಚಟುವಟಿಕೆಗಳು ಹೆಚ್ಚಲು ಕಾರಣವಾಗುತ್ತಿದೆ.  ಇದಕ್ಕೆ ಪ್ರತ್ಯೇಕ ತಂಡ ಹಾಗೂ ತಂತ್ರಜ್ಞಾನ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಘಟಕ ತನಿಖೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು. 

ಹೊಸ ಘಟಕವು ಫೆಸ್‌ಬುಕ್‌ ಮಾನಿಟರಿಂಗ್‌, ಟ್ವಿಟರ್‌ ಮಾನಿಟರಿಂಗ್‌, ವ್ಯಾಟ್ಸ್‌ಪ್‌ ಮಾನಿಟರಿಂಗ್‌, ಸಿಡಿಆರ್‌ ಅನಾಲಿಸಿಸ್‌ ವಿಂಗ್‌, ಪ್ರಿಂಟ್‌ ಮಿಡಿಯಾ ಮಾನಿಟರಿಂಗ್‌, ವೆಬ್‌ಸೈಟ್‌ ವಾಚಿಂಗ್‌ ಯುನಿಟಿ ಮತ್ತು ಸೈಬರ್‌ ಅಫೆನ್ಸೆಸ್‌ ಡಾಕ್ಯುಮೆಂಟೇಶನ್‌ ಯುನಿಟ್‌ಗಳನ್ನು ಒಳಗೊಂಡಿರುತ್ತದೆ ಎಂದು ವಿವರಣೆ ನೀಡಿದರು.

ಈಶಾನ್ಯ ವಲಯ ಐಜಿಪಿ ಅಲೋಕಕುಮಾರ, ಎಸ್‌ಪಿ ಶಶಿಕುಮಾರ, ಹೆಚ್ಚುವರಿ ಎಸ್‌ಪಿ ಜಯಪ್ರಕಾಶ ಸೇರಿದಂತೆ ಮುಂತಾದ ಅಧಿಕಾರಿಗಳು ಹಾಜರಿದ್ದರು. ಸೈಬರ್‌ ಅಪರಾಧ ತಡೆ ಘಟಕದ ಮೇಲುಸ್ತುವಾರಿಯನ್ನು ಡಿಸಿಆರ್‌ಬಿ ಡಿಎಸ್‌ಪಿ ಎಸ್‌.ಎಸ್‌. ಹುಲ್ಲೂರ, ನೋಡಲ್‌ ಅಧಿಕಾರಿಯಾಗಿ ಡಿಸಿಬಿ ಘಟಕದ ಪೊಲೀಸ್‌ ಇನ್ಸಪೆಕ್ಟರ್‌ ಕಪೀಲದೇವ, ಸಹಾಯಕ ನೋಡಲ್‌ ಅಧಿಕಾರಿಯಾಗಿ ಪಿಎಸ್‌ಐ ವನಂಜಕರ್‌ ಹಾಗೂ ಇತರ ಸಿಬ್ಬಂದಿಗಳು ಒಳಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next