ಬೆಂಗಳೂರು: ಸಹಕಾರಿ ಸಂಘ ಬಹಳ ದೊಡ್ಡದಾಗಿದೆ. ದುಡಿಯುವ ವರ್ಗದ ಭಾಗವಹಿಸಬೇಕು. ಮಹಿಳೆಯರು ಮೊದಲು ಭಾಗವಹಿಸಬೇಕು. ಸಾಕಷ್ಟು ಮಹಿಳೆಯರ ಸಂಘ ಇದೆ. ವಿವಿಧ ಉದ್ದೇಶ ಸಹಕಾರಿ ಮಹಿಳಾ ಸಂಘ ಪ್ರತಿ ತಾಲೂಕಿನಲ್ಲಿ ಪ್ರಾರಂಭ ಮಾಡುತ್ತೇವೆ. ಸರ್ಕಾರದ ಕಡೆಯಿಂದ ಬಂಡವಾಳ ಹಾಕುತ್ತೇವೆ. ಮಹಿಳೆಯರು ಕೂಡ ಸರ್ಕಾರದ ಸಹಾಯದಿಂದ ಮೇಲೆ ಬರಬೇಕು. ಇದರಿಂದ ರಾಜ್ಯ ಕೂಡ ಅಭಿವೃದ್ಧಿಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಹಕಾರ ರತ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಸಹಕಾರ ಎಂಬುವುದು ಬದುಕಿನ ಒಂದು ಭಾಗ. ಮನುಷ್ಯ ಸಂಘ ಜೀವಿ, ಒಬ್ಬಂಟಿಗನಾಗಿ ಬದುಕಲಾಗಲ್ಲ, ಮನುಷ್ಯ ಸಂಘ ಜೀವಿಯಾಗಿದ್ದಾರೆ. ಸಹಕಾರ ಇಲ್ಲದಿದ್ದರೆ ಸಮಾಜ ಹಾಗೂ ಬದುಕು ಇರಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ ಪ್ರಗತಿ ಅಸಾಧ್ಯ ಎಂದರು.
ಸಹಕಾರಿ ರಂಗದಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರ ಮುಂದಿದೆ. ಸಹಕಾರಿ ಸಂಘದಲ್ಲಿ ನಮ್ಮ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿ ಬರಬೇಕು. ಅಮಿತ್ ಶಾ ಕೂಡ ಸಹಕಾರಿ ರಂಗದಿಂದ ಬಂದವರು. ಅಹಮದಾಬಾದ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಈಗ ದೇಶದ ಗೃಹ ಮಂತ್ರಿಯಾಗಿದ್ದಾರೆ ಎಂದರು.
ಇದನ್ನೂ ಓದಿ:ಪೊಲೀಸರಿಂದಲೇ ರಕ್ತ ಚಂದನ ಮಾರಾಟ? ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಅಧಿಕಾರಿಗಳು
ದುಡ್ಡೇ ದೊಡ್ಡಪ್ಪ ಪದ್ದತಿಯನ್ನು ತೆಗೆದು ಹಾಕಿದ್ದೇನೆ. ದುಡಿಮೆಯೇ ದೊಡ್ಡಪ್ಪ ಅಂತ ಮಾಡಿದ್ದೇನೆ. ಸಹಕಾರಿ ಕ್ಷೇತ್ರ ಬೆಳೆಯಬೇಕು. ಸಹಕಾರಿ ಜೊತೆಗೆ ನಾನಿದ್ದೇನೆ, ಪ್ರತಿಯೊಂದು ಹಂತದಲ್ಲಿ ನಾನು ಇರುತ್ತೇನೆ. ಸರ್ಕಾರ ಕೂಡ ಇರುತ್ತದೆ, ಇನ್ನೂ ಉತ್ತಮ ಕೆಲಸ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.