Advertisement

ಐತಿಹಾಸಿಕ ಹೆಜ್ಜೆ; ಇಸ್ರೋದ ಚಂದ್ರಯಾನ 2 ಉಡ್ಡಯನ ಯಶಸ್ವಿ

10:30 AM Jul 23, 2019 | Nagendra Trasi |

ಆಂಧ್ರಪ್ರದೇಶ: ಇಡೀ ಜಗತ್ತಿನ ಗಮನ ಸೆಳೆದಿರುವ ಇಸ್ರೋದ ಮಹತ್ವದ ಯೋಜನೆಯಾದ ಚಂದ್ರಯಾನ 2 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಮಧ್ಯಾಹ್ನ 2.43ಕ್ಕೆ ಯಶಸ್ವಿಯಾಗಿ ನಭಕ್ಕೆ ನೆಗೆದಿದೆ.

Advertisement

ತಾಂತ್ರಿಕ ದೋಷದಿಂದ ಕಳೆದ ಸೋಮವಾರ ಕೊನೆ ಕ್ಷಣದಲ್ಲಿ ಚಂದ್ರಯಾನ 2 ಉಡಾವಣೆ ಮುಂದೂಡಿಕೆಯಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿದ ನಂತರ ಇಸ್ರೋ ಜುಲೈ 22ರಂದು ಚಂದ್ರಯಾನ 2 ಉಡಾವಣೆಯ ಹೊಸ ದಿನಾಂಕ ಘೋಷಿಸಿತ್ತು.

ಚಂದ್ರಯಾನ 2ನ್ನು ಹೊತ್ತ ಇಸ್ರೋದ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಭೋಮಂಡಲಕ್ಕೆ ಚಿಮ್ಮಿದೆ. ಇದು ಇಸ್ರೋದ 978 ಕೋಟಿ ರೂಪಾಯಿಯ ಮಹತ್ವದ ಯೋಜನೆಯಾಗಿದೆ.

ಭೂಮಿಯಿಂದ ಚಂದ್ರಲೋಕಕ್ಕೆ ಇರುವ ದೂರ 3,84,000 ಕಿಲೋ ಮೀಟರ್. ವಿಕ್ರಮ್ ಲ್ಯಾಂಡರ್ 48 ದಿನಗಳ ಬಳಿಕ ಚಂದ್ರನ ಮೇಲೆ ಇಳಿಯಲಿದೆ ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next