ಚಿಕ್ಕಬಳ್ಳಾಪುರ: ರಾಜ್ಯದ ಬರಪೀಡಿತ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಬಯಲುಸೀಮೆ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಸುವ ನಿಟ್ಟಿ ನಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ಅಂತರ್ಜಲ ಚೇತನ ಯೋಜನೆಗೆ ಮಂಗಳವಾರ ಜಿಲ್ಲೆಯಲ್ಲಿ ಚಾಲನೆ ಸಿಗಲಿದೆ.
ಜಲ ಸಂರಕ್ಷಣೆಗೆ ಕಾಮಗಾರಿಗೆ ಆದ್ಯತೆ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 1200 ರಿಂದ 1500 ಅಡಿವರೆಗೂ ಕುಸಿದಿದೆ. ರೈತರು ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ಮಳೆಯನ್ನೇ ಅವಲಂಬಿಸಬೇಕಿದೆ. ಈ ಹಿಂದೆ ಜಿಲ್ಲೆಯಲ್ಲಿ ಹರಿಯುತ್ತಿದ್ದ ಉತ್ತರ ಪಿನಾಕಿನಿ, ಚಿತ್ರಾವತಿ, ಪಾಲಾರ್, ಪೆನ್ನಾರ್ ಮತ್ತಿತರ ಜೀವ ನದಿ ಗಳು ಕಣ್ಮರೆಯಾಗಿದ್ದು, ಜಿಲ್ಲೆಯು ಸತತವಾಗಿ ಬರಗಾಲಕ್ಕೆ ತುತ್ತಾಗುವುದನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳಿಗೆ ಆದ್ಯತೆ ನೀಡುವ ದಿಸೆಯಲ್ಲಿ ಯೋಜನೆ ರೂಪಿಸಲಾಗಿದೆ.
ಅಂತರ್ಜಲ ವೃದ್ಧಿಸುವಿಕೆ: ಈ ಯೋಜನೆ ಯನ್ನು ರಾಜ್ಯದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಂಸ್ಥೆ ಬೆಂಗಳೂರಿ ನ ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಜೊತೆಗೂಡಿಕಾರ್ಯಗತಗೊಳಿಸಲಾಗುತ್ತಿದೆ. ವಿಶೇಷವಾಗಿ ನರೇಗಾ ಯೋಜನೆಯಡಿ ವಿವಿಧ ಇಲಾಖೆಗಳ ಓಗ್ಗೂಡಿಸುವಿಕೆಯೊಂದಿಗೆ ನೀರಿನ ಸಂರಕ್ಷಣೆಗಾಗಿ ಗೋಕುಂಟೆಗಳ ನಿರ್ಮಾಣ, ಸ್ಥಗಿತಗೊಂಡ ಕೊಳವೆಬಾವಿಗಳಿಗೆ ಜಲ ಮರು ಪೂರಣ ಘಟಕ ನಿರ್ಮಿಸುವು ದು,
ಮಳೆನೀರು ಕೊಯ್ಲು, ಕಲ್ಯಾಣಿ ಗಳ ಪುನರುಜೀವನ ಕೆರೆಗಳಲ್ಲಿ ಹೊಳೆ ತ್ತುವುದು, ಸಾಮಾಜಿಕ ಅರಣ್ಯೀ ಕರಣ ಕಾಮಗಾರಿಗಳನ್ನು ಪ್ರತಿ ಗ್ರಾಪಂ ವ್ಯಾಪ್ತಿಯ ಗ್ರಾಪಂ ಸಾಮೂಹಿಕ ಭೂ ಪ್ರದೇಶ, ವೈಯಕ್ತಿಕ ಜಮೀನುಗಳಲ್ಲಿ ಕೈಗೊ ಳ್ಳು ವುದರ ಮುಖಾಂತರ ಅಂತರ್ಜಲ ವೃದ್ಧಿ ಸುವಿಕೆ ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ನದಿ ಪುನಶ್ಚೇತನ:ಯೋಜನೆಯಡಿ ಉತ್ತರ ಪಿನಾಕಿನಿ ನದಿ ಪುನಶ್ಚೇತನ ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲೆಯ 1515 ಗ್ರಾಮಗಳ ವ್ಯಾಪ್ತಿಯಲ್ಲಿನ 52 ಕಿರು ಜಲಾ ನಯನಗಳಲ್ಲಿ ಅನುಷ್ಠಾನಿಸುತ್ತಿದ್ದು, ಸುಮಾರು 1377 ಚ.ಕಿ. ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗುವ ನಿರೀಕ್ಷೆ ಇದೆ. ಯೋಜ ನೆ ಯನ್ನು ಜಿಲ್ಲೆಯ 45 ಗ್ರಾಮ ಪಂಚಾ ಯಿತಿಗಳಲ್ಲಿ ಕೈಗೊಳ್ಳಲಾಗುವುದು. ಈ ಯೋಜನೆಯಿಂದ ಜಿಲ್ಲೆಯ ಸುಮಾರು 15,000 ಕುಟುಂಬಗಳಿಗೆ ಉದ್ಯೋಗ ಸಿಗಬಹುದೆಂದು ರೀಕ್ಷಿಸಲಾಗಿದೆ. ಸಚಿವ ಕೆ.ಎಸ್. ಈಶ್ವರಪ್ಪ ಹಾಜರಿ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಜಿಪಂ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ ಉಪಸ್ಥಿತರಿರಲಿದ್ದಾರೆ.
ಜಿಲ್ಲೆಯ ಅಂತರ್ಜಲ ಮಟ್ಟ ವೃದ್ಧಿಗೊಳಿಸುವ ದಿಸೆಯಲ್ಲಿ ಅಂತರ್ಜಲ ಚೇತನ ಯೋಜನೆಗೆ ಮಂಗಳವಾರ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಲಿದ್ದಾರೆ. ಯೋಜನೆಯಡಿ ಉತ್ತರ ಪಿನಾಕಿನಿ ನದಿ ಪುನಶ್ಚೇತನದ ಜೊತೆಗೆ ಜಲಾಮೃತ ಯೋಜನೆಯಡಿ ಜಲಮೂಲಗಳನ್ನು ಅಭಿವೃದ್ಧಿಪಡಿಸಲಾಗುವುದು.
-ಬಿ.ಫೌಝೀಯಾ ತರುನ್ನುಮ್, ಜಿಪಂ ಸಿಇಒ