Advertisement

ನಗಿಸುವ ರಕ್ಕಸರು ಬರುತ್ತಿದ್ದಾರೆ…

04:20 PM Jul 14, 2018 | Team Udayavani |

ಮಾನ್‌ಸ್ಟರ್‌ಗಳೆಂದರೆ(ರಾಕ್ಷಸ) ಮಕ್ಕಳು ಭಯ ಪಡುತ್ತಾರೆ. ಆದರೆ ನಗಿಸುವ ಮಾನ್‌ಸ್ಟರ್‌ಗಳನ್ನು ನೋಡಿದ್ದೀರಾ? ಅವುಗಳಿರೋದು “ಹೋಟೆಲ್‌ ಟ್ರಾನ್ಸಿಲ್ವೇನಿಯಾ  ಸಮ್ಮರ್‌ ವೆಕೇಷನ್‌’ ಅನಿಮೇಷನ್‌ ಸಿನಿಮಾದಲ್ಲಿ. ನಗರ ಪ್ರದೇಶದಿಂದ ದೂರ ಕಗ್ಗತ್ತಲ ಕಾಡಿನ ನಡುವೆ ಈ ಹೋಟೆಲ್‌ ಇದೆ. ಇಲ್ಲಿಗೆ ಬರುವ ಗಿರಾಕಿಗಳೂ ಮಾನ್‌ಸ್ಟರ್‌ಗಳೇ. ಸಿನಿಮಾದ ಕಥೆ ಹೋಟೆಲ್‌ ನಡೆಸುವ ಮಾನ್‌ಸ್ಟರ್‌ ಕುಟುಂಬವೊಂದರ ಸುತ್ತ ಹೆಣೆಯಲಾಗಿದೆ. ಆ ಕುಟುಂಬದ ಅಳಿಯ ಮಾತ್ರ ಮನುಷ್ಯ. ಈಗ ಬಿಡುಗಡೆಯಾಗುತ್ತಿರುವುದು ಹೋಟೆಲ್‌ ಟ್ರಾನ್ಸಿಲ್ವೇನಿಯಾ ಸಿನಿಮಾದ 3ನೇ ಅವತರಣಿಕೆ. ಈ ಸಿನಿಮಾದ ನಿರ್ದೇಶಕ ಜೆಂಡಿ ಟರ್ಟಕೋವ್‌ಸ್ಕಿ. ಹೀಗೆ ಹೇಳಿದರೆ ಅನೇಕರಿಗೆ ಗೊತ್ತಾಗಲಿಕ್ಕಿಲ್ಲ. ಕಾಟೂìನ್‌ ನೆಟ್‌ವರ್ಕ್‌ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ “ಡೆಕ್ಸ್‌ಟರ್ ಲ್ಯಾಬ್‌’ನ ನಿರ್ಮಾತೃ ಇವರು. ಸಿನಿಮಾ ಜುಲೈ 20ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next